ನವದೆಹಲಿ, ಮಾ 11,ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲಧಾರಣೆ ಪಾತಾಳಕ್ಕೆ ಕುಸಿಯುತ್ತಿದ್ದು ದೆಹಲಿಯಲ್ಲಿ ಬುಧವಾರ ಮತ್ತೆ ಪೆಟ್ರೋಲ್ ಲೀಟರ್ ಗೆ 2.69 ರೂ. ಡೀಸೆಲ್ 2.33 ರೂಪಾಯಿ ಇಳಿಕೆಯಾಗಿದೆ.ಹೋಳಿ ನಂತರ ಜನರಿಗೆ ಖುಷಿ ಪಡಲು ಮತ್ತೊಂದು ಕಾರಣ ದೊರಕಿದೆ!. ಅಂತಾರಾರಾಷ್ಟ್ರೀಯ ಕಚ್ಚಾ ತೈಲ ಕುಸಿತದ ನಂತರ, ತೈಲ ಬೆಲೆ ಮತ್ತಷ್ಟು ಕುಸಿದಿದೆ. ಕರೋನವೈರಸ್ ಸಾಂಕ್ರಾಮಿಕ ರೋಗವು ಜಾಗತಿಕವಾಗಿ ಏರಿದ ನಂತರ ಬೇಡಿಕೆಯ ಕುಸಿತದಿಂದಾಗಿ ಕಚ್ಚಾ ತೈಲ ಬೆಲೆ ಕುಸಿಯುತ್ತಿದೆ . ಒಪೆಕ್ ಮೈತ್ರಿಯ ವಿಘಟನೆ, ಸೌದಿ ಅರೇಬಿಯಾ ಮತ್ತು ರಷ್ಯಾ ನಡುವೆ ಬೆಲೆ ಸಮರಕ್ಕೆ ನಾಂದಿ ಹಾಡಿದ ಮೇಲೆ ಅಂತಾರಾರಾಷ್ಟ್ರೀಯ ತೈಲ ಬೆಲೆ ಶೇಕಡಾ 31 ರಷ್ಟು ಕುಸಿಯಿತು.