ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡುವ ಸಮಯ ವಿಸ್ತರಣೆ: ಪ್ರಧಾನಿ ಶ್ಲಾಘನೆ
ನವದೆಹಲಿ 30: ಜಾಗತಿಕ ಗಮನ ಸೆಳೆದಿರುವ ಹತ್ತು ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡುವ ಸಮಯವನ್ನು ವಿಸ್ತರಿಸಿರುವ ಪ್ರವಾಸೋದ್ಯಮ ಸಚಿವಾಲಯದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಮಯ ಹೆಚ್ಚಿಸಿರುವುದರಿಂದ ಹೆಚ್ಚು ಹೆಚ್ಚು ಜನ ಈ ಸ್ಥಳಗಳಿಗೆ ಭೇಟಿ ನೀಡಲು ಹಾಗೂ ಭಾರತದ ಭವ್ಯ ಇತಿಹಾಸ ಅರಿಯಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
ರಾಜ್ಯದ ವಿಜಯಪುರದ ಐತಿಹಾಸಿಕ ಗೋಲ್ ಗುಂಬರ್ ಸೇರಿ ಹತ್ತು ಸ್ಮಾರಕಗಳನ್ನು ಸಾರ್ವಜನಿಕರು ವೀಕ್ಷಿಸಲು ರಾತ್ರಿ 9 ಗಂಟೆ ತನಕ ಸಮಯ ವಿಸ್ತರಿಸಿ ಪ್ರವಾಸೋದ್ಯಮ ಸಚಿವಾಲಯ ನಿನ್ನೆ ಆದೇಶ ಹೊರಡಿಸಿತ್ತು.
ದೆಹಲಿಯ ಸಫ್ತಾರ್ ಜಂಗ್ ಹಾಗೂ ಹುಮಾಯೂನ್ ಗುಮ್ಮಟಗಳು, ಒಡಿಶಾದ ರಾಜ ರಾಣಿ ದೇವಾಲು ಸಂಕೀರ್ಣ, ಮಧ್ಯ ಪ್ರದೇಶದ ದುಲಾದೇವ್ ಮಂದಿರ, ಹರಿಯಾಣದ ಶೇಕ್ ಚಿಲ್ಲಿ ಗುಮ್ಮಟ, ಮಹಾರಾಷ್ಟ್ರದ ಮಾಕರ್ಾಂಡ ದೇವಾಲಯ ಸಮೂಹ, ಗುಜರಾತ್ನ ರಾಣಿ-ಕಿ-ವಾವ್ ಹಾಗೂ ಉತ್ತರ ಪ್ರದೇಶದ ಮನ್ ಮಹಲ್ ವೈದ್ ಶಾಲಾ ಸ್ವಾರಕಗಳನ್ನು ಬೆಳಗ್ಗೆ 9 ರಿಂದ ಸಂಜೆ 5.30ರವರೆಗೆ ಮಾತ್ರ ವೀಕ್ಷಣೆಗೆ ಅವಕಾಶವಿತ್ತು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 