ಬ್ಯೂನಸ್ ಏರಿಸ್, ಮೇ 9, ಕೊರೊನಾ ಸಾಂಕ್ರಾಮಿಕ ಹರಡುವುದನ್ನು ತಡೆಗಟ್ಟಲು ದಿಗ್ಬಂಧನ ಅವಧಿಯನ್ನು ಮೇ 24 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ಆಲ್ಬರ್ಟೋ ಫರ್ನಾಂಡಿಸ್ ಹೇಳಿದ್ದಾರೆ.ಈ ದೇಶದಲ್ಲಿ ಮಾರ್ಚ್ 20 ರಿಂದ ಕೋವಿಡ್ – 19 ನಿರ್ಬಂಧಗಳು ಜಾರಿಯಲ್ಲಿವೆ.ದಿಗ್ಬಂಧನ ಅವಧಿಯನ್ನು ಮೇ 24 ರವರೆಗೆ ವಿಸ್ತರಿಸಲಾಗಿದೆ ಎಂದು ಅರ್ಜೆಂಟಿನಾ ಅಧ್ಯಕ್ಷರು ಶುಕ್ರವಾರ ತಡರಾತ್ರಿ ತಿಳಿಸಿದ್ದಾರೆ.ದೇಶದ ಕೆಲವು ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಿಸಲಾಗುವುದು, ಆದರೆ ರಾಜಧಾನಿ ಬ್ಯೂನಸ್ ಏರಿಸ್ ನಲ್ಲಿ ನಿರ್ಬಂಧಗಳು ಮುಂದುವರಿಯಲಿವೆ.ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯು ಎಚ್ ಒ ಕೋವಿಡ್ – 19 ಅನ್ನು ಸಾಂಕ್ರಾಮಿಕ ಎಂದು ಘೋಷಿಸಿತ್ತು. ಈವರೆಗೆ ಜಗತ್ತಿನಾದ್ಯಂತ ಸುಮಾರು 39 ಲಕ್ಷ ಜನರು ಸೋಂಕಿನಿಂದ ಬಳಲುತ್ತಿದ್ದು 2,74,000 ಕ್ಕೂ ಹೆಚ್ಚು ಜನರು ಕೊರೊನಾ ವೈರಾಣು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.