ರಾಷ್ಟ್ರೋತ್ಥಾನ ಸಮೂಹದ 20ನೇ ಸಿಬಿಎಸ್‌ಸಿ ಶಾಲೆಯಾಗಿದೆ ಎಂದು ಸಂತಸ ವ್ಯಕ್ತ

Expressed happiness that it is the 20th CBSC school of Rashtrotthana group

 ರಾಷ್ಟ್ರೋತ್ಥಾನ ಸಮೂಹದ 20ನೇ ಸಿಬಿಎಸ್‌ಸಿ ಶಾಲೆಯಾಗಿದೆ ಎಂದು ಸಂತಸ ವ್ಯಕ್ತ

ಹಾವೇರಿ 16 :ಸಂತ-ಮಹಂತರ ಉಪಸ್ಥಿತಿಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಹಿಹಾವೇರಿಯ ಭೂಮಿಪೂಜೆಯನ್ನು ಇಲ್ಲಿನ ದೇವಿಹೊಸೂರ ಗ್ರಾಮದ ರಸ್ತೆಯಲ್ಲಿರುವ ಸರ್ವೆ ನಂ. 21/5 ಮತ್ತು 21/6ರಲ್ಲಿ ನೆರವೇರಿಸಲಾಯಿತು.  

     ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಸು.ರಾಮಣ್ಣ ಅವರು ಮಾತನಾಡಿ ರಾಷ್ಟ್ರೋತ್ಥಾನ ಪರಿಷತ್ ತಮ್ಮ ಸುದೀರ್ಘ ಅವಧಿಯ ಒಡನಾಟವನ್ನು ಮೆಲುಕು ಹಾಕುತ್ತಾ  ರಾಷ್ಟ್ರೋತ್ಥಾನ ಪರಿಷತ್ತಿನ ವಿವಿಧ ಸೇವಾ ಮನೋಭಾವದ ಪ್ರಕಲ್ಪಗಳ ಬಗೆಗೆ ತಿಳಿಸಿದರು. ನಂತರ ವಿದ್ಯಾಕೇಂದ್ರಗಳಲ್ಲಿನ ಮೌಲ್ಯಯುತ ಹಾಗೂ ಸಂಸ್ಕಾರ ಭರಿತ ಶಿಕ್ಷಣ ಕ್ರಮಗಳನ್ನು ಹೊಗಳುತ್ತಾ ಹಾವೇರಿ ನಗರದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಶಾಲೆಯು 2026ರಲ್ಲಿ ಕಾರ್ಯಾರಂಭ ಆಗಲಿದೆ. ಇದು ರಾಷ್ಟ್ರೋತ್ಥಾನ ಸಮೂಹದ 20ನೇ ಸಿಬಿಎಸ್‌ಸಿ ಶಾಲೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಈ ಭಾಗದ ಜನರೆಲ್ಲರೂ ತನು ಮನ ಧನ ಸಮರ​‍್ಿಸಿ ಸರಸ್ವತಿಯನ್ನು ಒಲಿಸಿಕೊಳ್ಳಬೇಕೆಂದು ಮಾರ್ಗದರ್ಶನ ನೀಡುತ್ತಾ ಭವ್ಯ ಭಾರತದ ಕನಸನ್ನು ನನಸಾಗಿಸುವ ಸಲಹೆಗಳನ್ನು ನೀಡಿದರು.           ಹಾವೇರಿಯ ಶ್ರೀ ಹೊಸಮಠದ ಶ್ರೀ ಬಸವಶಾಂತಲಿಂಗ ಮಹಾಸ್ವಾಮಿಗಳು, ನರಸೀಪುರದ ನಿಜಗುಣ ಅಂಬಿಗರ ಚೌಡಯ್ಯನ ಪೀಠದ ಪೂಜ್ಯ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು,ಹುಕ್ಕೇರಿಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು,ಶ್ರೀ ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು,ಹರಸೂರು ಬಣ್ಣದಮಠದ ಶ್ರೀ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಅಗಡಿ ಆನಂದವನದ ಶ್ರೀ ಗುರುದತ್ತ ಚಕ್ರವರ್ತಿ ಮಹಾಸ್ವಾಮಿಗಳು,ನೆಗಳೂರು ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು,ಗುತ್ತಲದ ಪ್ರಭುಸ್ವಾಮಿ ಮಠದ ಶ್ರೀ ಗುರುಸಿದ್ದ ಮಹಾಸ್ವಾಮಿಗಳು,ಹೊಸರಿತ್ತಿಯ ಗುದ್ದಲಿಸ್ವಾಮಿ ಮಠದ ಶ್ರೀ ಗುದ್ದಲಿ ಶಿವಯೋಗೀಶ್ವರ ಮಹಾಸ್ವಾಮಿಗಳು,ಅಗಡಿಯ ಅಕ್ಕಿಮಠದ ಶ್ರೀ ಗುರುಲಿಂಗ ಮಹಾಸ್ವಾಮಿಗಳು, ಅಗಡಿಯ ಶ್ರೀ ಆನಂದವನದ ಶ್ರೀ ವಿಶ್ವನಾಥ ಚಕ್ರವರ್ತಿ ಮಹಾಸ್ವಾಮಿಗಳು,ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿಗಳಾದ ನಾ.ದಿನೇಶ್ ಹೆಗ್ಡೆ ಮೊದಲಾದ ಮಹನೀಯರು ಉಪಸ್ಥಿತರಿದ್ದರು.