ಸ್ಫೋಟಕ ಬ್ಯಾಟ್ಸ್ಮನ್ ಶಿಖರ್ ಧವನ್ ಗೋಲ್ಡನ್ ಡಕೌಟ್


ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಗಸ್ಟ್ 1ರಿಂದ ಟೆಸ್ಟ್ ಸರಣಿಯನ್ನು ಆರಂಭಿಸಲಿದ್ದು ಸರಣಿಗೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಎಸ್ಸೆಕ್ಸ್ ವಿರುದ್ಧ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ಮನ್ ಶಿಖರ್ ಧವನ್ ಗೋಲ್ಡನ್ ಡಕೌಟ್ ಆಗಿದ್ದಾರೆ.  

ಟಾಸ್ ಗೆದ್ದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿದರು. ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಮೊದಲ ಎಸೆತದಲ್ಲೇ ಕೀಪರ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.  

ಇನ್ನು ಟೀಂ ಇಂಡಿಯಾದ ಪರ ಆರಂಭಿಕರಾಗಿ ಕಣಕ್ಕಿಳಿದ ಮುರಳಿ ವಿಜಯ್ 53, ಅಜಿಂಕ್ಯ ರಹಾನೆ 17, ವಿರಾಟ್ ಕೊಹ್ಲಿ 68, ಕೆಎಲ್ ರಾಹುಲ್ 58, ದಿನೇಶ್ ಕಾತರ್ಿಕ್ 82, ಹಾದರ್ಿಕ್ ಪಾಂಡ್ಯ 51 ಹಾಗೂ ರಿಷಬ್ ಪಂತ್ ಅಜೇಯ 34 ರನ್ ಗಳಿಸಿದ್ದಾರೆ.  

ಎಸ್ಸೆಕ್ಸ್ ಪರ ಬೌಲಿಂಗ್ ನಲ್ಲಿ ವಾಲ್ಟೆರ್ 4, ಕೊಲೆಸ್ 2 ಮತ್ತು ಡಿಕ್ಸೊನ್, ಕ್ವಿನ್ ಹಾಗೂ ಬಿಯಡರ್್ ತಲಾ 1 ವಿಕೆಟ್ ಪಡೆದಿದ್ದಾರೆ.  

ಟೀಂ ಇಂಡಿಯಾ ಆಲೌಟ್ ಬಳಿಕ ಇನ್ನಿಂಗ್ಸ್ ಆರಂಭಿಸಿ ಎಸ್ಸೆಕ್ಸ್ 94 ಓವರ್ ಮುಕ್ತಾಯಕ್ಕೆ 8 ವಿಕೆಟ್ ಕಳೆದುಕೊಂಡು 359 ರನ್ ಪೇರಿಸಿ ಆಡುತ್ತಿದೆ.  

ಎಸ್ಸೆಕ್ಸ್ ಪರ ವೆಸ್ಟ್ಲಿ 57, ಪೆಪ್ಪೇರ್ 68, ಫಾಸ್ಟರ್ 42, ವಾಲ್ಟೆರ್ 75 ರನ್ ಗಳಿಸಿದ್ದಾರೆ. ಇನ್ನು ನಿಜಾರ್ ಅಜೇಯ 29 ಹಾಗೂ ಖುಷಿ 14 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.  

ಭಾರತ ಪರ ಬೌಲಿಂಗ್ ನಲ್ಲಿ ಉಮೇಶ್ ಯಾದವ್ 4, ಇಶಾಂತ್ ಶಮರ್ಾ 3 ಹಾಗೂ ಶಾದರ್ೂಲ್ ಠಾಕೂರ್ 1 ವಿಕೆಟ್ ಪಡೆದಿದ್ದಾರೆ