ಟೆಸ್ಟಿಂಗ್ ಹಾಗೂ ವೆರಿಫಿಕೇಶನ್ ಆಫ್ ಸೆಮಿಕಂಡಕ್ಟರ್ ಐ.ಸಿ.'ಎಸ್ ಮೇಲೆ ಪರಿಣಿತರ ಪ್ರವಚನ

ಲೋಕದರ್ಶನ ವರದಿ

ಬೆಳಗಾವಿ, 26: ಜೈನ್ ಇಂಜಿನೀಯರಿಂಗ್ ಕಾಲೇಜಿನ ಇಲೇಕ್ಟ್ರಿಕಲ್ ಹಾಗೂ ಇಲೆಕ್ಟ್ರಾನಿಕ್ಸ್ ವಿಭಾಗವು ವಿದ್ಯಾಥರ್ಿಗಳ ಸಂಘ "ಟೆಲ್ಸಾ ಹಾಗೂ ದಿ ಇನ್ಸ್ಟಿಟ್ಯೂಟ್ ಆಫ್ ಎಂಜಿನೀಯರ್ಸ (ಇಂಡಿಯಾ) ಇವುಗಳ ಆಶ್ರಯದಲ್ಲಿ "ಟೆಸ್ಟಿಂಗ್ ಹಾಗೂ ವೆರಿಫಿಕೇಶನ್ ಆಫ್ ಐ.ಸಿ."ಎಸ್ ಎಂಬ ವಿಷಯದ ಮೇಲೆ ಸೆಮಿನಾರವೊಂದನ್ನು ಆಯೋಜಿಸಿತ್ತು. ಸೆಮಿಕ್ಷಾ ಸೆಮಿಕಂಡಕ್ಟರ (ಪ್ರೈ) ಲಿಮಿಟೆಡ್ದ ಎಂ.ಡಿ.  ವಿಜಯ ಗುಡಿ ಉಪನ್ಯಾಸಕರಾಗಿ ಆಗಮಿಸಿದ್ದರು. 

(ಇ.ಇ.ಇ) ವಿಭಾಗದ ಮುಖ್ಯಸ್ಥರು ಡಾ|| ಜಿ.ಎಚ್.ಕುಲಕಣರ್ಿ ಸಮ್ಮೇಳನಕ್ಕೆ ಸ್ವಾಗತ ಕೋರಿದರು. ವಿದ್ಯಾಥರ್ಿಗಳು ಈ ಉಪನ್ಯಾಸದ ಗರಿಷ್ಠ ಮಟ್ಟದ ಲಾಭ ಪಡೆಯಬೇಕೆಂದು ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸಿದರು. 

ಅಂತಿಮ ವರ್ಷದ ವಿದ್ಯಾಥರ್ಿನಿ ರೂಪಾಲಿ ಮಾಂಡಲೋಯಿ ಉಪನ್ಯಾಸಕರ ಕಿರು ಪರಿಚಯ ಹಾಗೂ ಸಾಧನೆಗಳ ಕುರಿತು ಮಾತನಾಡಿದರು. 

ಈ ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ ವಿಜಯ ಗುಡಿ ವಿದ್ಯಾಥರ್ಿಗಳ ಕ್ರಿಯಾಶೀಲ ಪಾಲ್ಗೊಳ್ಳುವಿಕೆಯನ್ನು ಪ್ರಶಂಶಿಸಿದರು. ವಿ.ಎಲ್.ಎಸ್.ಐ. ತಂತ್ರಜ್ಞಾನದ ಬಳಕೆಯಿಂದಾಗುವ ಲಾಭಗಳನ್ನು ಹೇಳುತ್ತಾರೆ. ಅವರು ತಮ್ಮ ಭಾಷಣ ಪ್ರಾರಂಭಿಸಿದರು. ವಿ.ಎಲ್.ಎಸ್.ಐ. ಉದ್ದಿಮೆಯಲ್ಲಿ ಇಂಜಿನೀಯರುಗಳ ಹಲವಾರು ಪಾತ್ರಗಳ ಕುರಿತು ವಿವರಿಸಿ, ಈ ಕ್ಷೇತ್ರದಲ್ಲಿ ಇಲೇಕ್ಟ್ರಿಕಲ್ ಇಂಜಿನೀಯರಗಳಿಗೆ ಇರುವಂತಹ ವೃತ್ತಿ ಅವಕಾಶಗಳ ಬಗ್ಗೆಯೂ ಹೇಳಿಕೆ ನೀಡಿದರು. ವಿ.ಎಲ್.ಎಸ್.ಐ. ತಂತ್ರಜ್ಞಾನ ಹೊಂದಬಯಸಲಿಚ್ಚಿಸುವ ವಿದ್ಯಾಥರ್ಿಗಳಿಗೆ ಪೂರ್ವಭಾವಿಯಾಗಿ ಇರಬೇಕಾಗಿರುವ ಅವಶ್ಯಗಳ ಕುರಿತು ಮಾತನಾಡಿದರು. ಇವರು ಮುಂದುವರೆದು ವಿವರಣೆ ನೀಡುತ್ತಾ ವಿ.ಎಲ್.ಎಸ್.ಐ ತಂತ್ರಜ್ಞಾನದಲ್ಲಿ ಇದು ಬಹಳಷ್ಟು ಸುಧಾರಣೆಗಳಾಗಿದ್ದು, ಕಠಿಣ ತಂತ್ರಜ್ಞಾನವನ್ನು ಸುಲಭ ಹಾಗೂ ಕಡಿಮೆ ಗಾತ್ರದಲ್ಲಿ ಲಭ್ಯವಾಗುವಂತೆ ಮಾಡಿದೆ 

ಎಂದರು. 

ಅಂತಿಮ ವರ್ಷದ ವಿದ್ಯಾಥರ್ಿ ಕಾತರ್ಿಕ.ಬಿ. ಧನ್ಯವಾದ ಅಪರ್ಿಸಿದರು. ದ್ವಿತೀಯ ವರ್ಷದ ವಿದ್ಯಾಥರ್ಿನಿ ಸಾನಿಯಾ. ಪೀರಜಾದೆ ಸಭೆಯನ್ನು ನಡೆಯಿಸಿಕೊಟ್ಟರು.   

ವಿದ್ಯಾಥರ್ಿ ಸಂಘ ಐ.ಇ.(ಐ) ದ ಸಿಬ್ಬಂದಿ ಸಂಯೋಜಕ ಪ್ರೋ. ವಿನೋದ ಪಾಟೀಲ ವಿದ್ಯಾಥರ್ಿ ಸಂಘ "ಟೆಲ್ಸಾ ದ ಸ್ಟಾಪ್ ಸಂಯೋಜಕ ಪ್ರೊ. ಪಾಸಲಾ ನರೇಶ ಈ ಕಾರ್ಯಕ್ರಮವನ್ನು ಸಂಯೋಜಿಸಿದರು. 

ಪ್ರಾಂಶುಪಾಲ ಡಾ. ಕೆ.ಜಿ. ವಿಶ್ವನಾಥ ವಿಭಾಗ ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದರು. ಸಕಲ ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.