ಲೋಕದರ್ಶನ ವರದಿ
ಶಿಗ್ಗಾವಿ: ಸಾಲಮನ್ನಾ ಯೋಜನೆಯಡಿ ತಾಂತ್ರಿಕ ಕಾರಣಗಳಿಂದ ವ್ಯಾಪ್ತಿಗೆ ಒಳಪಡದೇ ಉಳಿದಿದ್ದ ರಾಜ್ಯದ 1.5 ಲಕ್ಷ ರೈತರನ್ನು ಫಲಾನುಭವಿಗಳನ್ನಾಗಿಸಿ ಹಣಕಾಸು ಇಲಾಖೆಗೆ ಪ್ರಸ್ಥಾವನೆ ಸಲ್ಲಿಸಲಾಗಿದೆ. ಇದು ಸದ್ಯದಲ್ಲಿಯೇ ರೈತರಿಗೆ ಲಾಭ ತಟ್ಟಲಿದೆ ಎಂದು ಗೃಹ ಹಾಗೂ ಸಹಕಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಹುಲಗೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಕೆಸಿಸಿ ಬ್ಯಾಂಕ್ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ ಅಥರ್ಿಕ ಸಂಕಷ್ಟದಲ್ಲಿದ್ದ ಕೆಸಿಸಿ ಬ್ಯಾಂಕ್ಗೆ ಮುಖ್ಯಮಂತ್ರಿಗಳು 23 ಕೋಟಿ ಅಥರ್ಿಕ ನೆರವು ನೀಡಿದ್ದಾರೆ. ಇದರಿಂದಾಗಿ ಸಣ್ಣ ಮಧ್ಯಮ ಕ್ರಮಾಂಕದ ಸಾಲ ಸೌಲಭ್ಯತೆ ನೀಡಬಹುದಾಗಿದೆ.
ಅಲ್ಲದೆ ಕೃಷಿ ಅಲ್ಲದೇ ವಿವಿಧ ಭಾಬತ್ತಿನ ವಾಣಿಜ್ಯ ಉದ್ದೇಶಿತ ಸಾಲಗಳನ್ನು ಬ್ಯಾಂಕ್ ನೀಡಲು ನಿದರ್ೇಶನ ನೀಡಲಾಗಿದೆ ಎಂದ ಅವರು ಅವಿಭಜಿತ ಧಾರವಾಡ ಜಿಲ್ಲೆಯ ಡಿಸಿಸಿ ಬ್ಯಾಂಕ್ ಹಾಗೂ ಕೆಎಂಎಫ್ ಪ್ರತ್ಯೇಕಿಸಿ ಸ್ಥಾಪನೆ ಮಾಡಬೇಕೆಂದು ಇಲ್ಲಿನ ರೈತ ಪ್ರತಿನಿಧಿಗಳು ಸಂಘಸಂಸ್ಥೆಯ ಸಾಕಷ್ಟು ಬೇಡಿಕೆಯಿದ್ದು ಮುಂಬರುವ ದಿನಗಳಲ್ಲಿ ಜಿಲ್ಲೆಗೆ ಮಂಜೂರಾತಿ ದೊರೆಯಲಿದ್ದು ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಸಾಗಿದೆ ಎಂದರು. ಹುಲಗೂರು ಗ್ರಾಮಕ್ಕೆ ಆರೋಗ್ಯ ಕೇಂದ್ರಕ್ಕೆ 30 ಹಾಸಿಗೆ ಸಾಮರ್ಥಕ್ಕೆ ಏರಿಸಲಾಗುವುದು. ಅಲ್ಲದೇ ಪಿಯು ಕಾಲೇಜು. ಅಲ್ಲದೇ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಔಟ್ ಪೋಷ್ಟ ತೆರೆಯಲಾಗುವುದು ಎಂದರು.
ಕೆಸಿಸಿ ಬ್ಯಾಂಕ್ ಧಾರವಾಡ ಅಧ್ಯಕ್ಷ ಬಾಪುಗೌಡ ಪಾಟೀಲ ಪ್ರಾಸ್ಥಾವಿಕ ಮಾತನಾಡಿ ರಾಜ್ಯ ವ್ಯಾಪ್ತಿಯ 44 ನೇ ಶಾಖೆಯಾಗಿ ಹುಲಗೂರು ಬ್ಯಾಂಕ್ ಆರಂಭಿಸಲಾಗಿದೆ. ರಾವ್ ಬಹದ್ದೂರು ಮೆಣಸಿನಕಾಯಿ. ಅರಟಾಳ ರುದ್ರಗೌಡ್ರು ಹಾಗು ಕಣಗಿನಹಾಳ ಸಿದ್ದನಗೌಡ್ರರಿಂದ ಆರಂಭವಾದ ಕೆಸಿಸಿ 41.720 ರೈತ ಸದಸ್ಯರನ್ನು ಹೊಂದಿದೆ. 17 ಸಾವಿರಕ್ಕೂ ಅಧಿಕ ಸಹಕಾರಿ ಸಂಘಗಳು ಬ್ಯಾಂಕ್ ವಹಿವಾಟು ನಡೆಸುತ್ತಿದ್ದು ಸಹಕಾರ ಮೂಲಕ 22 ಕೋಟಿ ಸಾಲ ಸೌಲಭ್ಯತೆ ನೀಡಲಾಗಿದ ಎಂದರು.
ಕೆಸಿಸಿ ಬ್ಯಾಂಕ್ ನಿದರ್ೇಶಕ ಗಂಗಣ್ಣ ಸಾತಣ್ಣವರ ಮಾತನಾಡಿದರು.
ಜಿಪಂ ಅಧ್ಯಕ್ಷ ಎಸ್.ಕೆ. ಕರೆಣ್ಣವರ. ಸದಸ್ಯ ದೀಪಾ ಅತ್ತಿಗೇರಿ,ಗ್ರಾಪಂ ಅಧ್ಯಕ್ಷೆ ರೇಣುಕಾ ಪಾಟೀಲ.ಜವೇಧ ಸವಣೂರುಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ನೀಲಕಂಠಪ್ಪ ಗೊರವಿ. ಕರಿಯಪ್ಪ ಕಟ್ಟಿಮನಿ. ಮಲ್ಲಿಕಾಜರ್ುನ ಹೊರಕೇರಿ,ಎಲ್.ಎಸ್ ಚಪ್ಪರದಳ್ಳಿ ಎಸ್.ಡಿ ಕೊಳ್ಳಿಯವರ. ಎಂ.ಎಸ್ ದೇಸಾಯಿ ಅಲ್ಲದೇ ಕಾರ್ಯ ನಿವರ್ಾಹಣಾಧಿಕಾರಿ ಕೆ. ಮುನಿಯಪ್ಪ ಉಪಸ್ಥಿತಿಯಿದ್ದರು.