ಲೋಕದರ್ಶನ ವರದಿ
ಬಳ್ಳಾರಿ. 24: ಬಳ್ಳಾರಿಯ ಕಾಳಿಕ ಕಮಠೇಶ್ವರ ದೇವಸ್ಥಾನದ ಆವರಣದಲ್ಲಿ, ಮಂಗಳವಾರ ಕನರ್ಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ಯೋಜನಾ ಮಾಹಿತಿ ಜಾಗೃತಿ ಸಮಾರಂಭ ಜರುಗಿತು.
ನಿಗಮದ ಬಳ್ಳಾರಿ ಜಿಲ್ಲಾ ನಾಮನಿದರ್ೇಶನ ಸದಸ್ಯ ಎಂ.ಮಂಜುನಾಥ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ವಿಶ್ವಕರ್ಮ ಅಭಿವೃದ್ದಿ ನಿಗಮದ ಸಾಲ ಸೌಲಭ್ಯಗಳಿಗಾಗಿ ಜು.25 ಕಡೆ ದಿನವನ್ನು ಜು.31ಕ್ಕೆ ವಿಸ್ತರಿಸಿದ್ದಾರೆ. ಕಾಲಾವದಿ ವಿಸ್ತರಣೆಯ ಅನುಕೂಲವನ್ನು ವಿಶ್ವಕರ್ಮ ಸಮುದಾಯ ಹಾಗೂ ಉಪಪಂಗಡದವರು ಸದುಪಯೋಗಪಡಿಸಿಕೊಳ್ಳಬೇಕು. ವಿಶ್ವಕರ್ಮ ಸಮುದಾಯದವರು ಹಾಗೂ ಉಪಪಂಗಡದವರು ತಮ್ಮ ವೃತ್ತಿಯನ್ನು ಆಧುನಿಕತೆಗೆ ತಕ್ಕಂತೆ ಕೌಶಲ್ಯವನ್ನು ವೃದ್ದಿಸಿಕೊಳ್ಳಬೇಕಾಗಿದೆ. ವೃತ್ತಿಗೆ ವಾಣಿಜ್ಯ ಮೌಲ್ಯ ತಂದುಕೊಡುವಂತಹ ನವೀನತೆ, ಆಕರ್ಷಕತೆ ಹಾಗೂ ಕೌಶಲ್ಯತೆಯನ್ನು ರೂಪಿಸಿಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ವಿಶ್ವಕರ್ಮ ಸಮುದಾಯದವರ ಆಥರ್ಿಕ ಅಭಿವೃದ್ದಿಗಾಗಿ ನಿಗಮ ನಾನಾ ಯೋಜನೆ, ಸೌಲಭ್ಯಗಳನ್ನು ಹೊಂದಿದ್ದು, ಅರಿತು ಸದುಪಯೋಗಪಡಿಸಿಕೊಳ್ಳುವಲ್ಲಿ ಜಾಗೃತಿವಹಿಸಬೇಕು. ಮಧ್ಯವತರ್ಿಗಳನ್ನು ಅವಲಂಭಿಸದೆ ನೇರವಾಗಿ ನಿಗಮದೊಡನೆ ವ್ಯವಹರಿಸುವಲ್ಲಿ ಮುಂದಾಗಬೇಕು. ಸಾಲದ ಪಡೆದ ಉದ್ದೇಶಕ್ಕೆ ಮಾತ್ರ ಸಾಲದ ಹಣ ಬಳಸಿ, ಸರಿಯಾದ ದಾಖಲಾತಿ ಸಲ್ಲಿಸಿ ಸಾಲ ಪಡೆಯಬೇಕು ಎಂದು ಹೇಳಿದರು.
ಬಳ್ಳಾರಿಯ ವಿಶ್ವಕರ್ಮ ಯುವಕ ಸಂಘದ ಕಾರ್ಯದಶರ್ಿ ಅಮರನಾಥ್ ಮಾತನಾಡಿ, ವಸತಿ ಯೋಜನಡಿಯಲ್ಲಿ ಅನುದಾನವನ್ನು 2ಲಕ್ಷವನ್ನು 5ಲಕ್ಷ ರೂ.ಗಳಿಗೇರಿಸಿದ್ದು ಸ್ವಾಗಾತಾರ್ಹ ಎಂದು ಹೇಳಿದರು.
ಯರ್ರಂಗಳ್ಳಿ ಮೌನೇಶಾಚಾರ್ ಮಾತನಾಡಿ, ಅರ್ಹ ಫಲಾನುಭವಿಗಳನ್ನು ಲಾಟರಿ ಸಿಸ್ಟಮ್ ಮೂಲಕ ಆಯ್ಕೆ ಮಾಡುವಲ್ಲಿ ಅಧಿಕಾರಿಗಳು ಮುಂದಾಗಬೇಕು. ನಿಗಮದ ಸೌಲಭ್ಯಗಳಿಗಾಗಿ ಅಜರ್ಿ ಸಲ್ಲಿಸಲು ಅವಧಿ ವಿಸ್ತರಿಸಿದ್ದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು.
ವಿಶ್ವಕರ್ಮ ಸಮುದಾಯದ ಮುಖಂಡ ಬಳ್ಳಾರಿಯ ಬಿ.ಚಂದ್ರಹಾಸ್ ಮಾತನಾಡಿ, ಅಜರ್ಿ ಕೊರತೆ ಪ್ರತಿ ಸಲ ಹೆಚ್ಚುತ್ತಿದೆ. ಆನ್ ಲೈನ್ ಮೂಲಕ ಅಜರ್ಿ ಪಡೆಯುವ ಸೌಲಭ್ಯ ಕಲ್ಪಿಸುವ ವ್ಯವಸ್ಥೆಯಾಗಬೇಕು ಎಂದು ಹೇಳಿದರು. ಸಭೆಗೆ ಆಗಮಿಸಿದ ಅನೇಕರು ಮಾತನಾಡಿದರು.
ಬಳ್ಳಾರಿಯ ಶ್ರೀ ವಿಶ್ವಕರ್ಮ ಎಜ್ಯುಕೇಷನ್ ಟ್ರಸ್ಟ್, ಶ್ರೀಕಾಳಿಕ ಕಮಠೇಶ್ವರ ದೇವಸ್ಥಾನ, ಶ್ರೀ ವಿಶ್ವಕರ್ಮ ಯುವಕ ಸಂಘ, ಶ್ರೀ ಗಾಯತ್ರಿ ವಿಶ್ವಕರ್ಮ ಕರಕುಶಲಗಾರರ ಸಂಘ, ಶ್ರೀನಿಧಿ ಮಹಿಳಾ ಸಂಘದವರು, ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ನಿವೇದಿತಾ, ಶ್ರೀದೇವಿ, ಸುಶೀಲಾ, ಲಕ್ಷ್ಮಿ, ಭಾರತಿ, ಶ್ರೀದೇವಿ, ಭಾಸ್ಕಾರಾಚಾರಿ, ರಾಮಕೃಷ್ಣಾಚಾರಿ, ಮೂತರ್ಾಚಾರ್, ಶ್ರೀನಿವಾಸ್, ಮೌನೇಶ್ ಆಚಾರ್, ಶ್ರೀನಾಥ, ಶ್ರೀಶೈಲಾಚಾರಿ, ದಾಸಾಪುರ ಪ್ರಭಣ್ಣ ಸೇರಿ ಬಳ್ಳಾರಿ ತಾಲ್ಲೂಕಿನ ಗ್ರಾಮಗಳ ವಿಶ್ವಕರ್ಮ ಸಮುದಾಯದವರು ಉಪಸ್ಥಿತರಿದ್ದರು.