ನವದೆಹಲಿ, ಡಿ 16 ಈಶಾನ್ಯ ರಾಜ್ಯಗಳಲ್ಲಿ ಮುಂಗಡ ತೆರಿಗೆ
(ಅಡ್ವಾನ್ಸ್ ಟ್ಯಾಕ್ಸ್) ಪಾವತಿಗೆ ಕೊನೆ ದಿನ ಈ ತಿಂಗಳಾಂತ್ಯದ ವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರೀಯ
ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ತಿಳಿಸಿದೆ. ಪ್ರಸಕ್ತ
ಹಣಕಾಸು ವರ್ಷದ ಆದಾಯ ತೆರಿಗೆ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ಪಾವತಿಸಲಾಗುವ ಮೂರನೇ ಕಂತಿನ ಮುಂಗಡ
ತೆರಿಗೆಯ ಕೊನೆ ದಿನವನ್ನು ಡಿ 31 ಕ್ಕೆ ವಿಸ್ತರಿಸಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ. ಮೂರನೇ ಕಂತಿನ ಮುಂಗಡ ತೆರಿಗೆ ಪಾವತಿಸಲು ಡಿ 15 ಕೊನೆ ದಿನವಾಗಿದೆ.
ಆದರೆ ಈಶಾನ್ಯ ರಾಜ್ಯಗಳಲ್ಲಿ ರಾಷ್ಟ್ರೀಯ ಪೌರತ್ ನೋಂದಣಿ. ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ
ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯವಸ್ತವಾಗಿದ್ದು ತೆರಿಗೆ
ಪಾವತಿಗಾರರಿಗೆ ಅನುಕೂಲ ಮಾಡಿಕೊಡಲು ದಿನಾಂಕ ವಿಸ್ತರಿಸಲಾಗಿದೆ ಎಂದು ಸಿಬಿಡಿಟಿ ಪ್ರಕಟಣೆ ತಿಳಿಸಿದೆ. ಎಲ್ಲ ಹಣಕಾಸು ವರ್ಷಗಳಲ್ಲಿ ಜೂನ್ 15, ಸೆಪ್ಟೆಂಬರ್
15, ಡಿಸೆಂಬರ್ 15 ಮತ್ತು ಮಾರ್ಚ್ 15 ರೊಳಗೆ ವರ್ಷಕ್ಕೆ
ನಾಲ್ಕು ಕಂತುಗಳಲ್ಲಿ ಮುಂಗಡ ತೆರಿಗೆ ಪಾವತಿ ಮಾಡಬೇಕಿದೆ.