ಆನೆಗೊಂದಿ ಉತ್ಸವಕ್ಕೆ ಮಿನುಗು ತಂದ ವಸ್ತು ಪ್ರದರ್ಶನ ಮಳಿಗೆಗಳು

ಆನೆಗೊಂದಿ ಉತ್ಸವಕ್ಕೆ ಮಿನುಗು ತಂದ ವಸ್ತು ಪ್ರದರ್ಶನ ಮಳಿಗೆಗಳು

ಕೊಪ್ಪಳ 10: ಆನೆಗೊಂದಿ ಉತ್ಸವದ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತವು 28ಕ್ಕೂ ಹೆಚ್ಚು ಮಳಿಗೆಗಳ ವ್ಯವಸ್ಥೆಯನ್ನು ಮಾಡಲಾಗಿತ್ತು.

ಅದರಲ್ಲಿ ಕೃಷಿ, ಆರೋಗ್ಯ, ಸಿರಿಧಾನ್ಯ, ಸ್ವಸಹಾಯ ಗುಂಪು, ಮಹಿಳೆಯರಿಗಾಗಿ ತರಕಾರಿ ಸಾಮಾಗ್ರಿ, ಸರಕಾರಿ ಶಾಲೆ ನಮ್ಮ ಹೆಮ್ಮೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಕರಕುಶಲ ವಸ್ತುಗಳ ತಯಾರಿಕೆ, ಮೀನುಗಾರಿಕೆ ವಸ್ತು ಪ್ರದರ್ಶನ, ಮಳೆ ನೀರು ಶುದ್ದಿಕರಣ ಘಟಕ, ಅಂಗನವಾಡಿ ಮಕ್ಕಳ ಆಹಾರ ಪದ್ದತಿ, ವಿಕಲಚೇತನರ ಪುನಶ್ಚೇತನ ಅಭಿಯಾನ, ಪಶುಪಾಲನ ಸಮೃದ್ದಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಮಳಿಗೆಗಳ ಪ್ರದರ್ಶನ ಕಾಣತೊಡಗಿದವು.

ಜಿಲ್ಲಾಡಳಿತ ಆಯೋಜಿಸಿದ ಈ ಮಳಿಗೆಗಳ ಪ್ರದರ್ಶನಕ್ಕೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದು, ಸಾರ್ವಜನಿಕರು ಹರ್ಷದ್ಘೋರಾ ವ್ಯಕ್ತಪಡಿಸಿದ್ದಾರೆ.

ವಾತರ್ಾ ಇಲಾಖೆ: ವಾರ್ತಾ  ಮತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಲಾಗಿರುವ ಬಿ.ಎಸ್ ಯಡಿಯೂರಪ್ಪನವರ ರಾಜ್ಯ ಸರ್ಕಾರದ ಯೋಜನೆಗಳ ಕುರಿತು ನಾಮಫಲಕಗಳನ್ನು ಪ್ರದರ್ಶನ ಮಾಡಲಾಗಿದ. ಪ್ರವಾಹ ಸಂತ್ರಸ್ತರ ನೋವಿಗೆ ಮಿಡಿದ ಸರ್ಕಾರ, ಪ್ರವಾಸೋದ್ಯಮಕ್ಕೆ ಉತ್ತೇಜನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಳ ಕಲ್ಯಾಣ ಇಲಾಖೆ, ಕೈಗಾರಿಕೆಗಳಿಗೆ ಉತ್ತೇಜನ, ಮೀನುಗಾರರ ಸಾಲ ಮನ್ನಾ, ವಸತಿ ಇಲಾಖೆ, ಸಾಮೂಹಿಕ ವಿವಾಹ ಕಾರ್ಯಕ್ರಮ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿಯ ನೇಕಾರರ ಸಾಲ ಮನ್ನಾ ಕುರಿತಂತೆ ಇನ್ನೂ ಮುಂತಾದವುಗಳ ಕುರಿತು ನಾಮಫಲಗಳ ಪ್ರದರ್ಶನ ಕಂಡು ಬಂದವು.

ಸಮಗ್ರ ಕೃಷಿ ಮತ್ತು  ಸಮೃದ್ದಿ ಜೀವನ ಇಲಾಖೆ:  ಇಲ್ಲಿ ಕೃತಕವಾಗಿ ಅರಣ್ಯಕೃಷಿ, ತೋಟಗಾರಿಕೆ ಪದ್ದತಿ, ಹೈನುಗಾರಿಕೆ, ಮಿಶ್ರಬೆಳೆ ಪದ್ದತಿ, ಮೀನು ಸಾಕಾಣಿಕೆ, ಕೃಷಿಹೊಂಡ, ವಿವಿಧ ರೀತಿಯ ಅಕ್ಕಿಗಳಾದ ಬಾಸಮತಿ, ರತ್ನಚೂಡಿ, ಶಂಕಿತ, ನವರ, ಗಂದಮ ಸಾಲೆ, ರಾಜಮತಿ, ನಾಗಭತ್ತ, ಹಾಗೂ ಭತ್ತ, ಜೋಳ,ಶೇಂಗಾ, ಸಜ್ಜೆ, ಅಣಬೆ, ಜೋಳ, ಮಾವಿನ, ಬೇವಿನ, ಪೇರಳೆ ಸಸಿಗಳು ಪ್ರದರ್ಶನದಲ್ಲಿ ಮಿಂಚು ಹರಿಸಿದವು.

ಆರೋಗ್ಯಯುತ ಸಿರಿಧಾನ್ಯಗಳು: ತಿಂಡಿ ತಿನಿಸುಗಳಂದರೆ ಎಲ್ಲರಿಗೂ ಇಷ್ಟ, ಅದರ ಜೊತೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯ ಎನ್ನುವ ಸಂದೇಶವನ್ನು ಸಾರುವ ಉದ್ದೇಶದಿಂದ ಆತ್ಮ ಅಭಿಯಾನ ಯೋಜನೆ ಅಡಿ ಮಹಿಳಾ ಗುಂಪು ಸಿಪ್ಪಿಟ್ಟು, ನವಣೆ, ಶೇಂಗಾ ಹೊಳಿಗೆ, ರಾಗಿ ಉಂಡೆ, ರಾಗಿ ಮತ್ತು ಅಕ್ಕಿ ಚೆಕ್ಲಿ ಪ್ರದರ್ಶನದ ಜೊತೆಗೆ ಮಾರಾಟಕ್ಕೂ ಲಭ್ಯವಿದ್ದವು.

ನಂದಿ ಉತ್ಸವ ಮಳಿಗೆ: ಇಲ್ಲಿ ಮಕ್ಕಳಿಗಾಗಿ ವಿವಿಧ ರೀತಿಯಾ ಸಿಹಿ ತಿಂಡಿಗಳು ಮಾರಾಟಕ್ಕಿದ್ದವು. ಅವುಗಳೆಂದರೆ ಬಾದಾಮಿ, ಚಾಕಲೇಟ್, ಖಾಜು, ಕೋಕನಟ್,ಟ್ರೈಫುಡ್ ಬರ್ಫಿಗಳು, ಜಾಮುನು, ರಸಗುಲ್ಲಾ, ಐಸ್ಕ್ರೀಮ್. ಹಾಲು, ವಿವಿಧ ರೀತಿಯ ಬಿಸ್ಕಟ್ಗಳು ಸವಿಯಲು ಸ್ವಾದಕರವಾಗಿದ್ದವು.

ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ: ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳ ಕುರಿತು ಅರಿವು ಮೂಡಿಸಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಮಕ್ಕಳಿಗೆ ಮತ್ತು ಪೋಷಕರಿಗೆ ಜಾಗೃತಿ ಮೂಡಿಸಲು ಯಮುನಮ್ಮ ಎಂಬ ಸಮಾಜಿಕ ಕಾರ್ಯಕರ್ತೆಯನ್ನು  ನೇಮಿಸಲಾಗಿತ್ತು. ಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರಿಕೆ ವಹಿಸಬೇಕಾದ ಕ್ರಮಗಳು, ಉಡುಗೆ ತೊಡುಗೆಗಳ ಕುರಿತು ಜಾಗೃತಿ ಪಡಿಸಲಾಯಿತು. 

ಅಂಗನವಾಡಿ ಮಕ್ಕಳಿಗೆ ಆಹಾರ ಪದ್ಧತಿ: ಅಂಗನವಾಡಿ ಮಕ್ಕಳಿಗೆ ದಿನ ನಿತ್ಯದ ಉಪಹಾರ ಹಾಗೂ ಬಾಣಂತಿಯರಿಗೆ ನಿತ್ಯ ಹೆಸರು, ಮಡಕೆ.ಕಡ್ಲೆಕಾಳು ನೀಡುವುದು. ಮಕ್ಕಳಿಗೆ ನಿತ್ಯ ನೀಡುವ ಅನ್ನ, ಸಾಂಬರ್, ಕಿಚಡಿ, ಉಪ್ಪಿಟ್ಟು, ತತ್ತಿ ಮುಂದಾವುಗಳನ್ನು ಪ್ರದರ್ಶನದಲ್ಲಿಟ್ಟು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.

ವಿಕಚೇತನರ ಪುನಶ್ಚೇತನ ಕಾರ್ಯಕ್ರಮ: ವಿಕಚೇತನರ ಮಕ್ಕಳ ನೆರವಿಗಾಗಿ ಆನೆಗೊಂದಿ ಉತ್ಸವದಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸಿ, ದೇಣಿಗೆ ನೆರವು ನೀಡುವಂತೆ ಅರಿವು ಮೂಡಿಸಿದರು.

ಸ್ವಸಹಾಯ ಗುಂಪುಗಳು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಚನೆಯಾದ ಕೆಲವು ಮಹಿಳಾ ಸ್ವಸಹಾಯ ಗುಂಪುಗಳು ಸ್ತ್ರೀ ಶಕ್ತಿ ಸಬಲಿಕರಣಕ್ಕಾಗಿ ಸ್ವಯಂ ಉದ್ಯೋಗವನ್ನು ರಚಿಸಿಕೊಳ್ಳಲು ಬಳೆ, ಸೀರೆಗಳ ಲೇಸ್, ಕ್ಲೀಪ್ಸ್ ಕಿವಿಯೋಲೆ ಮಕ್ಕಳ ಬಟ್ಟೆಗಳು, ಮನೆಯ ತೊರಣಗಳು ಪ್ರದರ್ಶನದಲ್ಲಿ ಕಂಡವು. ಇನ್ನೂ ಕೆಲವು ಸಂಸ್ಥೆಗಳು ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿಸಲು ಕಾಟಲ್ ಪೇಪರ್ ತಯಾರಿ ಮತ್ತು ಮಾರಾಟ ಮಾಡಿದರೆ, ಇರಕಲ್ಗಡದ ಸಂಘ ಪಸರ್್. ಹ್ಯಾಂಡ್ ಬ್ಯಾಗ್, ತೊರಣ ತಯಾರಿ ಮಾಡಿದ್ದವು.

ನಮ್ಮ ಶಾಲೆ ನಮ್ಮ ಹೆಮ್ಮೆ: ಸಂಪ್ರೀತಿ ಶಿಕ್ಷಕರ ತಂಡ ಗಂಗಾವತಿ ತಾಲೂಕಿನಲ್ಲಿ ಅಭಿವೃದ್ಧಿ ಕಾಣದ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಮಕ್ಕಳಿಗೆ, ಗ್ರಾಮಸ್ಥರಿಗೆ, ಶಿಕ್ಷಕರಿಗೆ ಶಾಲೆಯ ಕುರಿತು ಅರಿವು ಮೂಡಿಸಿ, ಅಭಿವೃದ್ದಿ ಬೇಕಾಗುವ ಮೌಲ್ಯಗಳನ್ನು ಸಾರುತ್ತವೆ. ಆಂಗ್ಲ ಮಾಧ್ಯಮಗಳಿಗೆ ಸಕರ್ಾರಿ ಶಾಲೆಗಳಿಗೆ ಏನೂ ಕಡಿಮೆ ಇಲ್ಲ ಎಂಬುದನ್ನು ಸಾರುವುದೆ ನಮ್ಮ ಧ್ಯೆಯ ಎನ್ನುತ್ತದೆ ಈ ಕಲಾ ತಂಡ.

ಮೀನುಗಾರಿಕೆ ವಸ್ತು ಪ್ರದರ್ಶನ: ಮೀನುಗಾರಿಕೆ ವಸ್ತು ಪ್ರದರ್ಶನದಲ್ಲಿ ಕಾಟ್ಲಾ, ರೋಹು, ಮೃಗಾಲ್,ಬೆಳ್ಳಿಗೆಂಡೆ ಹುಲುಗಂಡೆ ಸೇರಿದಂತೆ ಮುಂತಾದ ಮೀನುಗಳನ್ನು ಪ್ರದರ್ಶನದಲ್ಲಿ ಕಾಣಬಹುದು.

ಜಿಲ್ಲಾ ನಿಮರ್ಿತಿ ಕೇಂದ್ರ: ಕೊಪ್ಪಳ ಜಿಲ್ಲಾಡಳಿತ ವತಿಯಿಂದ ಮಳಿನೀರು ಸಂಹಗ್ರಹಿಸಿ, ಆ ನೀರನ್ನು ಶುದ್ದಿಕರಣ ಮಾಡುವುದು. ನೀರನ್ನು ಇಂಗಿಸಿ, ಅಂತರ್ಜಲ ಮಟ್ಟ ಹೆಚ್ಚಿಸಿವುದರ ಸಂಗ್ರಹಣಾ ಘಟಕ ವಿನ್ಯಾಸವನ್ನು  ನೋಡಬಹುದು.

ಪಶುಪಾಲನಾ ಇಲಾಖೆ: ಹಳ್ಳಿಭಾಗದ ಜನರು ಹೆಚ್ಚಾಗಿ ಉತ್ಸವಕ್ಕೆ ಆಗಮಿಸುವುದರಿಂದ ಹೈನುಗಾರಿಕೆ ಕುರಿತು ಸಂಪೂರ್ಣ ಮಾಹಿತಿ ಒದಗಿಸಲು ಈ ವ್ಯವಸ್ಥೆಯನ್ನು ಮಾಡಲಾಗಿದೆ.

ಪೋಲಿಸ್ ಇಲಾಖೆ: ಅರಕ್ಷರ ಸಿಬ್ಬಂದಿಯೂ ಮುಖ್ಯವೇದಿಕೆಯ ಮುಂಭಾಗದಲ್ಲಿ ಯಾವುದೇ ತೊಂದರೆಗಳು ಆಗದಂತೆ ತಡೆಯಲು ನೇಮಿಸಲಾಗಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನ: ಜಿಲ್ಲಾಡಳಿತದಿಂದ ತಂಬಾಕು ನಿಯಂತ್ರಣ, ರಕ್ತದದೊತ್ತಡ, ನೇತ್ರದಾನ, ಮಲೇರಿಯಾ, ರಕ್ತಹೀನತೆ, ಮಕ್ಕಳ ಆರೋಗ್ಯ ರಕ್ಷಣೆ ಕುರಿತು ವಹಿಸಬೇಕಾದ ಎಚ್ಚರಿಕೆ ಕ್ರಮಗಳನ್ನು ಈ ಮಳಿಗೆಯಲ್ಲಿ ಹೇಳಲಾಗುತ್ತಿತ್ತು. ಉತ್ಸವಕ್ಕೆ ಆಗಮಿಸಿದ ಸಾರ್ವಜನಿಕರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಲ್ಲಿ ಅಂತವರಿಗೆ ತಪಾಸಣೆ ಮಾಡಿ, ಔಷಧಿಗಳನ್ನು ನೀಡಲಾಗುತ್ತಿದೆ.

ಒಟ್ಟಾರೆ ಜಿಲ್ಲಾಡಳಿತ ಆನೆಗೊಂದಿ ಉತ್ಸವದಲ್ಲಿ ಸಾರ್ವಜನಿಕರನ್ನು ಸೆಳೆಯಲು ನಾನಾ ರೀತಿಯಾ ಕಾರ್ಯಕ್ರಮಗಳ ಜೊತೆಗೆ ವಸ್ತು ಪ್ರದರ್ಶನ ಮಳಿಗೆಗಳನ್ನು ಆಯೋಜಿಸಿದ್ದು ಉತ್ಸವಕ್ಕೆ ವಿಶೇಷವಾಗಿದೆ. 

ಹೇಳಿಕೆ ಅಫ್ರೀನ್ ಗಂಗಾವತಿ: ಉತ್ಸವದ ಕಳೆ ಮಿನುಗಲು ಮುಖ್ಯ ಕಾರಣ ವಸ್ತು ಪ್ರದರ್ಶನ. ಕೃಷಿ, ಆರೋಗ್ಯ, ಪರಿಸರ ರಕ್ಷಣೆ ವಿವಿಧ ರೀತಿಯಾ ಮಕ್ಕಳಿಗೆ ನೋಡಲು, ತಿಳಿಯಲು ಈ ವಸ್ತು ಪ್ರದರ್ಶನಗಳು ನೆರೆವಾಗಿವೆ.