‘ಮನುಷ್ಯ ತನ್ನ ಅನುಕೂಲಕ್ಕಾಗಿ ಶೇ 50 ರಷ್ಟು ಜೀವಪ್ರಬೇಧಗಳನ್ನು ನಾಶ ಮಾಡಿದ್ದಾನೆ’
ಲೋಕದರ್ಶನ ವರದಿ
ಧಾರವಾಡ 24: ನಿಸರ್ಗವು ಎಲ್ಲ ಜೀವಿಗಳಿಗೆ ಬದುಕುವ ಹಕ್ಕನ್ನು ಕೊಟ್ಟಿದೆ. ಆದರೆ ಮನುಷ್ಯ ತನ್ನ ಸುಖಕ್ಕಾಗಿ ಬದುಕುವ ಅನುಕೂಲಕ್ಕಾಗಿ ಶೇ 50 ರಷ್ಟು ಜೀವಪ್ರಬೇಧಗಳನ್ನು ನಾಶ ಮಾಡಿದ್ದಾನೆ ಎಂದು ಡಾ. ಸಂಜೀವ ಕುಲಕರ್ಣಿ ಹೇಳಿದರು.
ಅವರು ಕನಾಟಕ ವಿದ್ಯಾವರ್ಧಕ ಸಂಘವು ದಿ. 23 ರಿಂದ 27ರ ವರೆಗೆ ಕ.ವಿ.ವ. ಸಂಘದ ಚಿತ್ರಕಲಾ ಪ್ರದರ್ಶನ ಭವನದಲ್ಲಿ ಆಯೋಜಿಸಿರುವ ‘ಪಯಣ ಚಾರಣ ಛಾಯಾಗ್ರಾಹಣ” ಬೆಳಗಾವಿಯ ಲಿಂಗರಾಜ ಜಗಜಂಪಿ, ಅಮೃತ ಚರಂತಿಮಠ, ಪ್ರದೀಪ ವಾಸುನಕರ ಅವರು ನೈಸರ್ಗಿಕವಾಗಿ, ಸಂದರ್ಭೋಚಿತವಾಗಿ ಸೆರೆಹಿಡಿದ ಪ್ರಾಣಿ, ಪಕ್ಷಿಗಳ ಜೀವ ಪ್ರಬೇಧಗಳ ಛಾಯಾಚಿತ್ರಗಳ ಪ್ರದರ್ಶನವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ನಿಸರ್ಗದಿಂದ ನಾವು ಬಹಳ ಕಲಿಯುವುದಿದೆ. ನಿಸರ್ಗವನ್ನು ನಾವು ಕಾಪಾಡಿದರೆ ನಮ್ಮನ್ನು ನಿಸರ್ಗ ಕಾಪಾಡುತ್ತದೆ. ಈ ದಿಶೆಯಲ್ಲಿ ಲಿಂಗರಾಜ ಜಗಜಂಪಿ ಮತ್ತು ಇತರರು ಮಾಡಿದ ಪ್ರಯತ್ನ ಮತ್ತು ಸಾಹಸಕ್ಕೆ ನಾನು ಅಭಿನಂದಿಸುತ್ತೇನೆ ಎಂದರು.
ಮುಖ್ಯಅತಿಥಿಯಾಗಿ ಆಗಮಿಸಿದ ಪ್ರೊ. ಎನ್.ಆರ್. ಬಾಳಿಕಾಯಿ ಅವರು ಮಾತನಾಡಿ, ಛಾಯಾಚಿತ್ರ ತೆಗೆಯುವುದು ಕೂಡಾ ಒಂದು ಅದ್ಭುತ ಕಲೆಯಾಗಿದೆ. ಈ ಸಮಾರಂಭದಲ್ಲಿ ಭಾಗವಹಿಸಿದ್ದು ನನಗೆ ಅತ್ಯಂತ ಸಂತೋಷ ತಂದಿದೆ ಎಂದರು.
ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಗುರು ಹಿರೇಮಠ ಅವರು ಈ ಪ್ರದರ್ಶನ ಉಪಯೋಗ ಶಾಲಾ ಮಕ್ಕಳಿಗೆ ಆಗಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಡಿ.ಎಂ. ನಿಡವಣಿ ಅವರು ನಿಜಕ್ಕೂ ಪಯಣ, ಚಾರಣ, ಛಾಯಾಗ್ರಹಣ ಕಾರ್ಯವು ಅದ್ಭುತ ಸಾಹಸದ ಕೆಲಸ ವಿಶೇಷವಾದ ಆಸಕ್ತಿಯಿಂದ ಈ ಕಲೆಯಲ್ಲಿ ತೊಡಗಿದ್ದು ನಿಜಕ್ಕೂ ಮೆಚ್ಚುವಂಥದ್ದು. ಲಿಂಗರಾಜ ಜಗಜಂಪಿ ಅವರ ಸಾಹಸದ ಕಲೆ ನಿಸರ್ಗದ ಪ್ರೀತಿ ಮತ್ತು ಛಾಯಾಗ್ರಾಹಣದ ಪಯಣ ಮುಂದುವರೆಯಲಿ. 5 ದಿನಗಳ ಚಿತ್ರಕಲಾ ಪ್ರದರ್ಶನದ ಪ್ರಯೋಜನ ಮಕ್ಕಳಿಗೆ ಆಗಬೇಕು. ಶಾಲಾ, ಕಾಲೇಜುಗಳಲ್ಲಿ ಇಂಥ ಕಲಾ ಪ್ರದರ್ಶನಗಳು ಹೆಚ್ಚಾಗಿ ಜರುಗಲಿ. ಈ ದಿಶೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಒಳ್ಳೆಯ ಕಾರ್ಯ ಮಾಡುತ್ತಿದೆ. ಅದಕ್ಕಾಗಿ ಸಂಘವನ್ನು ಅಭಿನಂದಿಸುತ್ತೇನೆ ಎಂದರು.
ಆರಂಭದಲ್ಲಿ ಲಿಂಗರಾಜ ಜಗಜಂಪಿ ಸ್ವಾಗತಿಸಿ, ನಿರೂಪಿಸಿದರು. ಪ್ರದೀಪ ವಾಸುನಕರ ಕೊನೆಯಲ್ಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ ಶಿವಾನಂದ ಭಾವಿಕಟ್ಟಿ, ಗಂಗಾಧರ ಕಲ್ಲೂರ, ಶ್ರೀಮತಿ ಸುನೀತಾ ಪಾಟೀಲ ಚೆನ್ನವೀರಯ್ಯ ಹೊಸಮಠ, ಮಹಾದೇವ ಪಾಟೀಲ, ಇಂದು ವಾಸುನಕರು, ಶಿ.ಮ. ರಾಚಯ್ಯನವರ, ನಿಂ.ಶಿ. ಕಾಶಪ್ಪನವರ ಮತ್ತು ಕಲಾವಿದರ ಬಳಗವು ಸೇರಿದಂತೆ ಅನೇಕರು ಇದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 