ಬೆಳಗಾವಿ: ಸುಶೀಲ ತರಬರ ಚಿತ್ರಕಲಾ ಪ್ರದರ್ಶನ

ಲೋಕದರ್ಶನ ವರದಿ

ಬೆಳಗಾವಿ 03:  ಬೆಳಗಾವಿಯ ಚಿತ್ರ ಕಲಾವಿದ ಸುಶೀಲ ತರಬರ ಅವರ ಏಕ ವ್ಯಕ್ತಿ ಚಿತ್ರಕಲಾಪ್ರದರ್ಶನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರ ಇವರ ಸಹಕಾರದೊಂದಿಗೆ ಗೋವಾದ ಮೊಕ್ಷಾ ಆರ್ಟ ಗ್ಯಾಲರಿ ಯಲ್ಲಿ ಇದೇ ದಿ. 1 ರವಿವಾರದಂದು ಉದ್ಘಾಟನೆಗೊಂಡಿತು. 

ಚಿತ್ರಕಲಾ ಪ್ರದರ್ಶನವನ್ನು  ಉದ್ಘಾಟಿಸಿದ ಕಲಾವಿದ ಸಾಲ್ವಿಡಾರ್ ಫನರ್ಾಂಡಿಸ್ ಮಾತನಾಡುತ್ತ ಚಿತ್ರಕಲಾ ಪ್ರದರ್ಶನ ತುಂಬ ಖಚರ್ುವೆಚ್ಚದ ಕಾರ್ಯಕ್ರಮ. ಸಕರ್ಾರದ ಧನ ಸಹಾಯ ಅತ್ಯವಶ್ಯವಾಗಿದ್ದು  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಧನಸಹಾಯವನ್ನು ನೀಡಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲರ್ಾಘನೀಯ. ಹಣಕಾಸಿನ ತೊಂದರೆಯಿಂದಾಗಿ ಎಷ್ಟೋ ಕಲಾವದವರು ಬೆಳಕಿಗೆ ಬಾರದೇ  ಹೋಗುತ್ತಾರೆ ಎಂದು ಇಲಾಖೆಯ ಕಾರ್ಯವನ್ನು ಕೊಂಡಾಡಿದರು. 

ಧಾರವಾಡದ ಕಲಾವಿದರಾದ ಎಫ್. ವಿ. ಚಿಕ್ಕಮಠ ಅವರು ಮಾತನಾಡುತ್ತ ತರಬರ ಅವರ ಕಲಾಕೃತಿಗಳು ಅತ್ಯುತ್ತಮ ಕಲಾಕೃತಿಗಳಾಗಿದ್ದು ಉತ್ತಮ ಸಂಯೋಜನೆ, ಬಣ್ಣಗಳ ಸಂಯೋಜನೆ, ಶಾಂತವರ್ಣಗಳಿಂದ ಕೂಡಿವೆ. ಸತತ ಪ್ರಯತ್ನ ಒಬ್ಬ ಕಲಾವಿದನನ್ನು ನಿಮರ್ಿಸುತ್ತದೆ.  ಇನ್ನೂ ಹೆಚ್ಚಿನ ಆತ್ಮವಿಶ್ವಾಸದಿಂದ ಕೃತಿಗಳನ್ನು ರಚಿಸಿದ್ದೇ ಆದಲ್ಲಿ ಸುಶೀಲ ಶ್ರೇಷ್ಠ ಮಟ್ಟ ಕಲಾವಿದರ ಸಾಲಿನಲ್ಲಿ ನಿಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ಇನ್ನೋರ್ವ ಕಲಾವಿದ ಬಾಬು ಸದಲಗಿ ಅವರು ಮಾತನಾಡಿ ಮೋಕ್ಷಾ ಕಲಾ ಗ್ಯಾಲರಿ ಅತ್ಯುತ್ತಮ ಕಲಾ  ಗ್ಯಾಲರಿಯಾಗಿದ್ದು. ಕಲಾವಿದರಿಗೊಂದು ಅತ್ಯುತ್ತವ ವರದಾನವಾಗಿಂದು ಹೇಳಿ ಗ್ಯಾಲರಿ ಮಾಲಿಕರಾದ ಕಲಾವಿದ ಸಾಲ್ಫಿಡಾರ್ ಫನರ್ಾಂಡಿಸ್ ಅವರ ಕಾರ್ಯವನ್ನು ಕೊಂಡಾಡಿದರು.

ಚಿತ್ರಕಲಾ ಪ್ರದರ್ಶನವು ಮೂರು ದಿನಗಳ ಕಾಲ ನಡೆದಿದ್ದು. ಕಲಾಸಕ್ತರು  ಈ ಪ್ರದರ್ಶನಕ್ಕೆ ಭೇಟಿಕೊಟ್ಟು  ಕಲಾವಿದರನ್ನು ಅಭಿನಂದಿಸಿದರು.