ವ್ಯಾಯಾಮ ಶಾಲೆ ಶಾಸಕ ಅನಿಲ ಬೆನಕೆ ಉದ್ಘಾಟನೆ

ಬೆಳಗಾವಿ 03: ದಿ.03ರಂದು ನಗರದ ಕಡೋಲಕರ ಗಲ್ಲಿಯಲ್ಲಿ ಯುವಕರ ಹಾಗೂ ಅಲ್ಲಿಯ ರಹವಾಸಿಗಳ ಆದ್ಯತೆಯ ಮೇರೆಗೆ ನಿಮರ್ಿಸಲಾದ ವ್ಯಾಯಾಮ ಶಾಲೆಯನ್ನು ಶಾಸಕ ಅನಿಲ ಬೆನಕೆ ಹಾಗೂ ಮಹಾಪೌರ ಬಸಪ್ಪ ಚಿಕ್ಕಲದಿನ್ನಿ ಇವರು ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ವ್ಯಾಯಾಮ ಶಾಲೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಅನಿಲ ಬೆನಕೆರವರು ಕಡೋಲಕರ ಗಲ್ಲಿಯ ರಹವಾಸಿಗಳ ಬಹಳ ದಿನಗಳ ಆಸೆಯಂತೆ ನಗರ ಸೇವಕಿಯಾದ ಮಾಯಾ ಕಡೊಲಕರ ಅವರ ಅನುಧಾನದಲ್ಲಿ ವ್ಯಾಯಾಮ ಶಾಲೆಯನ್ನು ನಿಮರ್ಿಸಿ ಯುವಕರ ಹಾಗೂ ರಹವಾಸಿಗಳ ಉಪಯೋಗಕ್ಕಾಗಿ ಅನುಕೂಲವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಬೆಳಗಾವಿಯ ಕಾಲೇಜ ರೊಡ್ನಲ್ಲಿ ಮಹಾನಗರ ಪಾಲಿಕೆಯ 14ನೇ ಹಣಕಾಸಿನ ಅನುದಾನದಲ್ಲಿ  ಸಿಟಿ ಬಸ್ ನಿಲ್ದಾಣವನ್ನು ಶಾಸಕ ಅನಿಲ ಬೆನಕೆ, ಮಹಾಪೌರ ಬಸಪ್ಪ ಚಿಕ್ಕಲದಿನ್ನಿ, ಮಾಜಿ ಮಹಾಪೌರ ಸಂಜೋತಾ ಬಾಂದೇಕರ, ಇತರ ಮುಖಂಡರು ಹಾಗೂ ಅಧಿಕಾರಿಗಳು, ಸ್ಥಳಿಯರು ಇದ್ದರು.