ನವದೆಹಲಿ, ಜ.28, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ಮತ್ತೊಂದು ಚಿತ್ರ ಮಾಡಲು ದಿಶಾ ಪಟಾನಿ ಉತ್ಸುಕರಾಗಿದ್ದಾರೆ. ದಿಶಾ ಅವರು ಸಲ್ಮಾನ್ ಅವರೊಂದಿಗೆ ಭರತ್ ಚಿತ್ರದಲ್ಲಿ ನಟಿಸಿದ್ದರು. ದಿಶಾ ಅವರು ಸಲ್ಮಾನ್ ಅವರೊಂದಿಗೆ ಎರಡನೇ ಚಿತ್ರ ಮಾಡಲು ರೆಡಿ ಆಗಿದ್ದಾರೆ. ರಾಧೆ ಚಿತ್ರದಲ್ಲಿ ಈ ಜೋಡಿ ಮತ್ತೆ ತೆರೆಯ ಮೇಲೆ ಅಭಿಮಾನಿಗಳಿಗೆ ಖುಷಿ ನೀಡಲಿದೆ. ರಾಧೆ 2020ರ ಈದ್ ರಂದು ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಸಲ್ಮಾನ್ ಅವರೊಂದಿಗೆ ನಟಿಸಲು ರಾಧೆ ಉತ್ಸುಕರಾಗಿದ್ದರು. “ಸಲ್ಮಾನ್ ಖಾನ್ ಬಾಲಿವುಡ್ ನ ಸೂಪರ್ ಸ್ಟಾರ್. ನಾನು ಎಂದಿಗೂ ಇವರೊಂದಿಗೆ ಎರಡನೇ ಚಿತ್ರ ಮಾಡುತ್ತೇನೆ ಎಂದು ಕೊಂಡರಲಿಲ್ಲ. ಚಿತ್ರದ ಕೆಲಸ ಆರಂಭವಾಗುತ್ತಿದ್ದಂತೆ ಸಲ್ಮಾನ್ ಅವರೊಂದಿಗೆ ಕೆಲಸ ಮಾಡುವ ವಿಷಯ ತಿಳಿದು ಅತೀವ ಸಂತವಾಯಿತು. ರಾಧೆ ಚಿತ್ರದಲ್ಲಿ ನಟಿಸುವ ಅದೃಷ್ಟ ನನ್ನ ಪಾಲಿಗೆ ಬಂದ ಮೇಲೆ ಖುಷಿ ಆಯಿತು. ನನ್ನ ಕಠಿಣ ಪರಿಶ್ರಮ ಹಾಗೂ ಅದೃಷ್ಟ ಕೈ ಹಿಡಿದಿದೆ” ಎಂದು ದಿಶಾ ತಿಳಿಸಿದ್ದಾರೆ.