ಅತಿ ಮೊಬೈಲ್ ಫೋನ್ ಬಳಕೆ ಆರೋಗ್ಯಕ್ಕೆ ಮಾರಕ: ತುಷಾರ ಕುಲಕರ್ಣಿ
Excessive mobile phone use is harmful to health: Thushara Kulkarni
ಲೋಕದರ್ಶನ ವರದಿ
ಅತಿ ಮೊಬೈಲ್ ಫೋನ್ ಬಳಕೆ ಆರೋಗ್ಯಕ್ಕೆ ಮಾರಕ: ತುಷಾರ ಕುಲಕರ್ಣಿ
ಬೆಳಗಾವಿ 24: ಇತ್ತೀಚಿನ ದಿನಗಳಲ್ಲಿ ಯುವಕರು ಮೊಬೈಲ್‌ನ್ನು ಅತಿಯಾಗಿ ಬಳಸುತ್ತಿದ್ದಾರೆ. ಮೋಬೈಲ್ ಇಲ್ಲದೆ ಒಂದು ನಿಮಿಷ ಕೂಡ ಇರುವುದು ಇಂದಿನವರಿಗೆ ಕಷ್ಟವೆನಿಸುತ್ತಿದೆ. ಆದರೆ ಇದು ಯುವ ಜನಾಂಗದ ಆರೋಗ್ಯಕ್ಕೆ ಮಾರಕವಾಗಿದೆ ಎಂದು ತುಷಾರ್ ಎಸ್. ಕುಲಕರ್ಣಿ ಕಳವಳ ವ್ಯಕ್ತಪಡಿಸಿದರು.
ಎಸ್.ಜಿ.ಬಿ.ಐ.ಟಿ.ಯ ಕಾಯಕ ಕ್ಲಬ್, ಬೆಳಗಾವಿಯ ಎಸ್.ಜಿ. ಬಾಳೇಕುಂದ್ರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳಿಗಾಗಿ ದಿ. 23ರಂದು ಸಂಬರಗಿಮಠ ಸೆಮಿನಾರ್ ಹಾಲ್‌ನಲ್ಲಿ ದಿ ಸ್ಮಾರ್ಟ್ ಮಾನ್ಸ್ಟರ್, ದಿ ಸೀರಿಯಸ್ ಚಾಲೆಂಜಸ್ ಫಾರ್ ಯೂತ್" ಎಂಬ ವಿಷಯದ ಕುರಿತು ತಜ್ಞರ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಹೆಚ್ಚಿನ ಫೋನ್ ಬಳಕೆಯು ಮೆದುಳಿಗೆ ಹಾನಿ ಮಾಡುತ್ತದೆ. ನಿದ್ದೆ ಹಸಿವು, ಕಣ್ಣಿ ಆರೋಗ್ಯದ ಮೇಲೂ ಪರಿಣಾಮ ಉಂಟಾಗಿ ಒಟ್ಟಾರೆ ಅನೇಕ ಯುವ ಮೊಗ್ಗುಗಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಮೊಬೈಲ್ ಫೋನ್ ಬಳಕೆಯಲ್ಲಿನ ಗಂಭೀರ ಸಮಸ್ಯೆಗಳನ್ನು ವಿವರಿಸಿದರು.
ಎಸ್.ಜಿ.ಬಿ.ಐ.ಟಿ.ಯ ಡಾ. ಎಫ್.ವಿ. ಮಾನ್ವಿ, ಪ್ರಾಂಶುಪಾಲ ಡಾ. ಬಿ. ಆರ್. ಪಟಗುಂದಿ, ವಿದ್ಯಾರ್ಥಿ ಕಲ್ಯಾಣ ಡೀನ್ ಡಾ. ಆರ್. ಎಂ. ಗಲಗಲಿ, ಫ್ಯಾಕಲ್ಟಿ ಸಂಯೋಜಕರು ಪ್ರೊ. ಮಲ್ಲಿಕಾರ್ಜುನ್ ಭಗವತಿ ಮತ್ತು ಹೇಮಲತಾ ಎಚ್ ಮತ್ತು ವಿದ್ಯಾರ್ಥಿ ಸಂಯೋಜಕ ಆನಂದ್ ಶಿವಯೋಗಿಮಠ ಉಪಸ್ಥಿತರಿದ್ದರು.
ವಿನಯಾ ಬಿ. ಗಲಗಲಿ ಮತ್ತು ವಿನುತಾ ಬಿ. ಗಲಗಲಿ ನಿರೂಪಿಸಿ, ವಂದಿಸಿದರು.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 