ವಿಜಯಪುರ 29: 2025-26 ನೇ ಸಾಲಿಗಾಗಿ ರಾಷ್ಟ್ರೀಯ ಮಿಲಿಟರಿ ಶಾಲೆಯ 6ನೇ ತರಗತಿಯ ಪ್ರವೇಶಕ್ಕಾಗಿ ದಿ. 08-12-2024 ರಂದು ನಡೆದ ಪ್ರವೇಶ ಪರೀಕ್ಷೆಯಲ್ಲಿ ವಿಜಯಪುರದ ಎಕ್ಸಲೆಂಟ್ ಕೋಚಿಂಗ್ ಕ್ಲಾಸಿಸ್‌ನ 5 ವಿದ್ಯಾರ್ಥಿಗಳು ಆಯ್ಕೆಯಾಗಿ ಅಮೋಘ ಸಾಧನೆಗೈದಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿಗಳಾದ ಸಾತ್ವಿಕ ಎಮ್. ಬಳಿಗಾರ (127), ವಿಹನ್ನಕುಮಾರ ಎನ್. ಪೇಠಾ (124) ರಿಶಾನ್‌ಪಿ. ಬಗಲಿ (117), ಸಮರ್ಥ ಬಿ.ದನ್ನೂರ (100) ಹಾಗೂ ಪ್ರಗತಿ ಟಿ.ಚೌರಿ (83) ಉತ್ತಮ ಅಂಕಗಳನ್ನು ಪಡೆದು ಅತ್ತ್ಯುತ್ತಮ ಸಾಧನೆಗೈದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಎಲ್ಲ ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್ ಬಸವರಾಜ ಕೌಲಗಿ, ಕಳೆದ 28 ವರ್ಷಗಳಲ್ಲೇ ಇದು ಅತ್ತ್ಯುತ್ತಮ ಫಲಿತಾಂಶವಾಗಿದ್ದು ಶೈನಿಕ ಶಾಲೆ, ನವೋದಯ, ಕಿತ್ತೂರು ಹಾಗೂ ಆರ್.ಎಂ.ಎಸ್ ಶಾಲೆಗಳಿಗೆ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಕಳಿಸುತ್ತಿರುವ ಕರ್ನಾಟಕದ ಏಕೈಕ ಸಂಸ್ಥೆಯಾಗಿ ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.