ಟೈಪಿಂಗ್ ಮತ್ತು ಸ್ಟೆನೋ ಪರೀಕ್ಷೆಯಲ್ಲಿ ಮಮತಾ ವಾಣಿಜ್ಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ
Excellent performance of students of Mamata Commerce Institute in typing and steno exams
ರಾಣೇಬೆನ್ನೂರು 19: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಜುಲೈ ತಿಂಗಳಿನಲ್ಲಿ ನಡೆಸಿದ ಟೈಪಿಂಗ್ ಮತ್ತು ಸ್ಟೆನೋ ಪರೀಕ್ಷೆಯಲ್ಲಿ ನಗರದ ಮಮತಾ ವಾಣಿಜ್ಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಶೇ. 90 ಫಲಿತಾಂಶ ಲಭಿಸಿದೆ. ಒಟ್ಟು 106 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 31 ಉನ್ನತ, 33 ಪ್ರಥಮ, 22 ದ್ವಿತೀಯ ಹಾಗೂ 6 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರೌಢದರ್ಜೆ ವಿಭಾಗ: ವಾಣಿಶ್ರೀ (ಶೇ. 93), ಸಂಗೀತಾ ಪಿ.(ಶೇ. 92), ಮಮತಾ(ಶೇ. 91), ರಾಧಿಕಾ ಬಣಕಾರ, ಮೇಘಾ, ರಾಧಿಕಾ ಚಲವಾದಿ, ದೀಪಾ ಕುಸಗೂರ, ರಾಹುಲ್ ಬೆಲ್ಲದ, ಚೇತನಕುಮಾರ, ಮಾಲತೇಶ ಕರಿಗಾರ, ಲಕ್ಷ್ಮಿ ಹೊನ್ನತ್ತಿ, ನಿರ್ಮಲಾ ಅಣ್ಣಿ (ಶೇ. 90) ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರಥಮದರ್ಜೆ ವಿಭಾಗ: ಮುಸ್ಕಾನ ದೊಡ್ಡಮನಿ (ಶೇ.94), ಪವಿತ್ರಾ ಯಲವಿಗಿ ಮತ್ತು ಸೋಮಶೇಖರ ಇಟಗಿ (ಶೇ. 93), ಪ್ರಾರ್ಥನಾ(ಶೇ. 92), ಸಂಗೀತಾ ನವಣಿ, ಲಮಾಣಿ ಪವಿತ್ರಾ, ಸಂಗೀತಾ ಐರಣಿ, ಮಂಗಳಾ, ಸಿಂಚನಾ, ಸೌಜನ್ಯ, ಪವನಸಿಂಗ್ ರಜಪೂತ, ರೇಣುಕಾ ಹುಳ್ಳಿಕಾಶಿ, ಮೇಘಾ ಹುಲ್ಲಮನಿ, ವೈಷ್ಣವಿ ಲದ್ವಾ(ಶೇ. 91) ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಆಂಗ್ಲ ಶೀಘ್ರಲಿಪಿ ಪ್ರೌಢದರ್ಜೆ: ಗಾಯತ್ರಿ ಗುಲಗಂಜಿ (ಶೇ. 84.5) ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಕನ್ನಡ ಶೀಘ್ರ ಲಿಪಿ ಪ್ರೌಢದರ್ಜೆ / ಪ್ರಥಮ ದರ್ಜೆ/ಆಂಗ್ಲ ಶೀಘ್ರ ಲಿಪಿ ಪ್ರೌಢ ದರ್ಜೆ ವಿಭಾಗಗಳಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲ 18 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 