ಹಯಗ್ರೀವ ಜಯಂತಿ ಆಚರಣೆ

ಹಯಗ್ರೀವ ಜಯಂತಿ ಆಚರಣೆ  Celebration of Hayagriva Jayanti


ಗದಗ, ಆ.29: ಪವಿತ್ರ ಶ್ರಾವಣ ಹುಣ್ಣಿಮೆಯಂದು ಸಮಸ್ತ ಹಿಂದೂ ಸಂಪ್ರದಾಯದ ಭಕ್ತವೃಂದದಿಂದ ಆಚರಿಸಲಾಗುವ ಹಯಗ್ರೀವ ಜಯಂತಿಯನ್ನು ಗದಗ ನಗರದ ಹಳೆ ಸರಾಫ್ ಬಜಾರ್ನಲ್ಲಿರುವ ದೈವಜ್ಞ ಸಮಾಜೋನ್ನತಿ ಸಂಘದ ಕಚೇರಿಯಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು.  

ವೇದಗಳ ರಕ್ಷಣೆಗಾಗಿ ಸಾಕ್ಷಾತ್ ಶ್ರೀವಿಷ್ಣು ದೇವರು ಹಯಗ್ರೀವ ಅವತಾರ ತಾಳಿದರೆಂಬ ನಂಬಿಕೆಯ ಹಿನ್ನೆಲೆಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಬಾಂಧವರಿಂದ ವಿಶೇಷವಾಗಿ ಹಯಗ್ರೀವ ಜಯಂತಿಯನ್ನು ಆಚರಿಸಲಾಯಿತು. ಸಮಾಜದ ಧಾರ್ಮಿಕ ಪಂಡಿತರಾದ ಸರ್ವೇಶ್ವರ ಭಟ್ ಅವರು ವಿವಿಧ ಪೂಜಾ ಪುನಸ್ಕಾರಗಳನ್ನು ನೆರವೇರಿಸಿದರು.  

ಈ ಸಂದರ್ಭದಲ್ಲಿ ದೈವಜ್ಞ ಸಮಾಜೋನ್ನತಿ ಸಂಘದ ಅಧ್ಯಕ್ಷ ಅರವಿಂದ ಪಾಲನಕರ, ಗೌರವಾಧ್ಯಕ್ಷ ಗಣಪತಿ ಪಾಲನಕರ, ಪ್ರಧಾನ ಕಾರ್ಯದರ್ಶಿ ಕಿಶೋರ್ ರೇವಣಕರ, ಕೋಶಾಧ್ಯಕ್ಷ ಪ್ರಕಾಶ್ ವೇರ್ಣೇಕರ, ಸಮಾಜದ ಹಿರಿಯರಾದ ಪರಮೇಶ್ವರ ಪಾಲನಕರ, ಪುಷ್ಪಾ ವೇರ್ಣೇಕರ, ಲೀಲಾಬಾಯಿ ವೇರ್ಣೇಕರ ಸೇರಿದಂತೆ ದೈವಜ್ಞ ಯುವಕ ಸಂಘ, ದೈವಜ್ಞ ಮಹಿಳಾ ಮಂಡಳಿ ಹಾಗೂ ಸಮಾಜದ ಅನೇಕ ಬಾಂಧವರು ಉಪಸ್ಥಿತರಿದ್ದರು.  

ದೈವಜ್ಞ ಯುವಕ ಮಂಡಳಿಯ ಅಧ್ಯಕ್ಷ ಗಣೇಶ ರಮೇಶ ವೇರ್ಣೇಕರ, ಮಂಜುನಾಥ ಪಾಲನಕರ, ಕಾರ್ತಿಕ್ ಪಾಲನಕರ, ಗಣೇಶ ವೇರ್ಣೇಕರ, ಅಶೋಕ ಪಾಲನಕರ, ನರಸಿಂಹ ಕುಡ್ತರಕರ, ಸೂರಜ್ ರಾಯ್ಕರ್, ರಾಘವೇಂದ್ರ ಪಾಲನಕರ, ಚೇತನ್ ಪಾಲನಕರ, ಮಂಜುನಾಥ ಶೇಜಕರ, ಸುನೀಲ್ ದತ್ತಾತ್ರೇಯ ಪಾಲನಕರ, ರಾಮಚಂದ್ರ ಪಾಲನಕರ, ರೋಹಿತ್ ರೇವಣಕರ, ಸಂತೋಷ ಕುಡ್ತರಕರ ಸೇರಿದಂತೆ ಹಲವರು ಭಾಗವಹಿಸಿದ್ದರು.  

ದೈವಜ್ಞ ಮಹಿಳಾ ಮಂಡಳಿಯ ಸದಸ್ಯರಾದ ರಿತು ಪಾಲನಕರ, ಮೇಘನಾ ಪಾಲನಕರ, ಕಾವ್ಯ ಪಾಲನಕರ, ವಂದನಾ ಕುಡೇಕರ, ಶ್ವೇತಾ ಕುಡೇಕರ, ರೋಹಿಣಿ ರೇವಣಕರ, ಶ್ರೀಮತಿ ಸಹನಾ ರಾಘವೇಂದ್ರ ಪಾಲನಕರ, ಸುನೀತಾ ಸುನೀಲ್ ಪಾಲನಕರ ಹಾಗೂ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜದ ಬಾಂಧವರು ಉಪಸ್ಥಿತರಿದ್ದರು.