ಗೌರಿಗುಡಿ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ

ಗೌರಿಗುಡಿ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ Gaurigudi renovation work launched

ಲೋಕದರ್ಶನ ವರದಿ 

            ಗದಗ 29 :  ಬೆಟಗೇರಿಯಲ್ಲಿ ವೀರಶೈವ ಸಮಾಜದ ಒಗ್ಗಟ್ಟಿನಿಂದ ನೂರಾರು ವರ್ಷಗಳ ಐತಿಹಾಸಿಕ ಇತಿಹಾಸ ಹೊಂದಿರುವ ಗೌರಿಗುಡಿ ಓಣಿಯಲ್ಲಿರುವ ಗೌರಿಗುಡಿಯ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವುದು ಸಮಾಜದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ನಗರದ ಗಣ್ಯ ಉದ್ಯಮಿದಾರರಾದ ವಿಜಯಕುಮಾರ ಗಡ್ಡಿ ಹೇಳಿದರು. ಬೆಟಗೇರಿಯ ಹುಯಿಲಗೋಳ ರಸ್ತೆಯ ಗೌರಿಗುಡಿ ಓಣಿಯ ಗೌರಿಗುಡಿ ಜೀರ್ಣೋದ್ಧಾರ ಕಾಮಗಾರಿಯ ಸ್ಲ್ಯಾಬ್ ಹಾಕುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. 

ಬೆಟಗೇರಿಯಲ್ಲಿ ರೈತರು, ವ್ಯಾಪಾರಸ್ಥರು, ಉದ್ದಿಮೆದಾರರು, ಎಪಿಎಂಸಿ ವಹಿವಾಟುದಾರರು, ಪತ್ರಕರ್ತರು, ಶಿಕ್ಷಕರು, ಸರಕಾರಿ ನೌಕರರು, ಶಾಸ್ತ್ರಿಗಳು, ಸರಕು ಸಾಗಣೆದಾರರು, ಚಾಲಕರು, ಕಲಾವಿದರು, ಉಪನ್ಯಾಸಕರು, ತೆರಿಗೆ ಸಲಹೆಗಾರರು, ಹೈನೋದ್ಯಮಿಗಳು ಹೀಗೆ ವಿವಿಧ ರಂಗಗಳಲ್ಲಿ ಹೆಸರು ಮಾಡಿರುವ ಜನರನ್ನೊಳಗೊಂಡ ಬೆಟಗೇರಿ ವೀರಶೈವ ಸಮಾಜದ ಹಿರಿಯರು, ಯುವಕರು ಸಮಾಜಸೇವೆಯಲ್ಲಿ ಜನಮನ್ನಣೆ ಪಡೆದಿದ್ದಾರೆ. ಈ ಭಾಗದಲ್ಲಿನ ಮಹತ್ವದ ಗೌರಿಗುಡಿಯನ್ನು ಮೂಲಸ್ವರೂಪದಲ್ಲಿಯೇ ಜೀರ್ಣೋದ್ಧಾರ ಕಾರ್ಯ ಕೈಗೊಂಡಿರುವುದು ಸ್ತುತ್ಯಾರ್ಹವಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಯುವ ಉದ್ಯಮಿದಾರರಾದ ವಿಜಯಕುಮಾರ ಗಡ್ಡಿ, ರವಿ ಪಟ್ಟಣಶೆಟ್ಟಿ, ಮೋಹನ ಮಾಳಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.  

ಸಮಾಜದ ಹಿರಿಯರಾದ ಪುತ್ರ​‍್ಪ ಬೆಂತೂರ, ಬಸವಣ್ಣೆಪ್ಪ ಮಾಳಶೆಟ್ಟಿ, ಜಿಲ್ಲಾ ವಾಣಿಜ್ಯೋಧ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ, ಶಿವಪ್ಪ ನಾಗರಾಳ, ಪ್ರಕಾಶ ಮ್ಯಾಗೇರಿ, ಶರಣಪ್ಪ ಅಣ್ಣಿಗೇರಿ, ಶಿವಯ್ಯ ಶಿವಪ್ಪಯ್ಯನಮಠ, ಸಿದ್ದು ಮುಳ್ಳಾಳ, ಬಸವರಾಜ ಕುಂದಗೋಳ, ಸುದೀಪ ಕಣವಿ, ರಾಜು ಗೊಂಡಬಾಳ, ಸುರೇಶ ಬೆಂತೂರ, ಮಹೇಶ ಚಿಕ್ಕನಗೌಡ್ರ ಶ್ರೀಕಾಂತ ಸೋನೆ, ಶ್ರೀನಿವಾಸ ಬೆಟಗೇರಿ, ಮಂಜುನಾಥ ಬೆಂತೂರ, ಶರಣಪ್ಪ ಆಲೂರ ಮುಂತಾದವರು ಉಪಸ್ಥಿತರಿದ್ದರು.