ಮಿಣಜಗಿ ಕ್ರಾಸ್: ಶ್ರೀ ಘನಮಟೇಶ್ವರ ಶಿಕ್ಷಣ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಬೆಸ್ಟ್ ಪಿಯು ಕಾಲೇಜಿನ 2024- 25 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು 100 ಕ್ಕೆ 95.04 ರಷ್ಟು ಫಲಿತಾಂಶ ಪಡೆದು ಸಾಧನೆ ಗೈದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ: ಒಟ್ಟು 221 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,ಕುಮಾರ ಗುಂಡುರಾಜ್ ಕಲಬುರಗಿ ಶೇ.94.83. ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ, ಕುಮಾರ ಮನೋಜ ಅಪ್ಪಾಸಾಹೇಬ ಮುರಾಳ ಶೇ.92.5 ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಕುಮಾರ ಕಿರಣಕುಮಾರ ಆಲ್ಯಾಲ 91.5 ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ. ಜೀವಶಾಸ್ತ್ರದಲ್ಲಿ ಬಸನಗೌಡ ರಾಮನಗೌಡ ಬಿರಾದಾರ 100 ಕ್ಕೆ100 ರಷ್ಟು ಪಡೆದು ಉತ್ತಮ ಸಾಧನೆ ಮಾಡಿದ್ದಾನೆ. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್.ಎಂ.ಸಜ್ಜನ, ಪ್ರಾಚಾರ್ಯ ಬಿ.ಎಸ್.ಮಾಲಿಪಾಟೀಲ ಉಪ ಪ್ರಾಚಾರ್ಯ ಎಂ.ಮಾರಣ್ಣ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.