ವಿಜಯಪುರದಲ್ಲಿಯೇ ಉತ್ಕೃಷ್ಟ ಕಿಡ್ನಿ ಹಾಗೂ ಪ್ರೋಸ್ಟೇಟ್ ಸಂಬಂಧಿ ಚಿಕಿತ್ಸೆ ಲಭ್ಯ
Excellent kidney and prostate-related treatment is available right here in Vijayapura
ಲೋಕದರ್ಶನ ವರದಿ
ವಿಜಯಪುರ 15 : ಕೆಲ ವರ್ಷಗಳ ಹಿಂದೆ ಕಿಡ್ನಿ ಹಾಗೂ ಪ್ರೋಸ್ಟೇಟ್ ಸಂಬಂಧಿ ರೋಗ ಚಿಕಿತ್ಸೆಗಾಗಿ ವಿಜಯಪುರ ಹಾಗೂ ಸುತ್ತಲಿನ ಜಿಲ್ಲೆಗಳ ರೋಗಿಗಳು ಮಿರಜ್ ಹಾಗೂ ಬೇರೆ ಕಡೆಗೆ ತೆರಳುತ್ತಿದ್ದರು ಆದರೆ ಇದೀಗ ಮೂತ್ರನಾಳದ ಎಲ್ಲ ತರಹದ ರೋಗಗಳಿಗೆ ಮುನ್ನೆಚ್ಚರಿಕೆ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಲೇಸರ್ ಟೆಕ್ನಾಲಜಿಯಿಂದ ಮೊದಲುಗೊಂಡು ಎಲ್ಲ ಆಧುನಿಕ ಚಿಕಿತ್ಸೆಗಳು ವಿಜಯಪುರದಲ್ಲಿಯೇ ಲಭ್ಯವಿವೆ ಎಂದು ಕಿಡ್ನಿ ಫೌಂಡೇಶನ್ ಆಸ್ಪತ್ರೆಯ ಮುಖ್ಯಸ್ಥರಾದ ಯೂರಾಲಜಿ ತಜ್ಞ ಡಾ. ಎಸ್.ಬಿ. ಪಾಟೀಲರು ತಿಳಿಸಿದರು.
ಅವರು ರೋಟರಿ ಪ್ರೋಬಸ್ ಕ್ಲಬ್ (ಉತ್ತರ) ನ ಸೆಪ್ಟೆಂಬರ್ ತಿಂಗಳ ಮಾಸಿಕ ಸಭೆಯಲ್ಲಿ ಹಿರಿಯ ನಾಗರಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪ್ರೊಸ್ಟೇಟ್ ಗ್ರಂಥಿ ದೊಡ್ಡದಾಗುವದು ಹಾಗೂ ಮೂತ್ರನಾಳದಲ್ಲಿ ತಡೆ ಇವುಗಳ ಕಾರಣದಿಂದ ದೊಡ್ಡ ಪ್ರಮಾಣದ ಹಿರಿಯ ನಾಗರಿಕರು ಸಮಸ್ಯೆ ಅನುಭವಿಸುತ್ತಿದ್ದು, ಇವರಲ್ಲಿ ಶೇಕಡಾ 80 ರಷ್ಟು ಜನರಿಗೆ ಕೇವಲ ಓಷಧೋಪಚಾರ ಹಾಗೂ ಪಥ್ಯದಿಂದಲೇ ಗುಣವಾಗಿಸಬಹುದಾಗಿದ್ದು, ಉಳಿದ ಶೇಕಡಾ 20 ರಷ್ಟು ಜನರಿಗೆ ಲೇಸರ್ ಆಫರೇಶನ್ ಮೂಲಕ ಗುಣಪಡಿಸಬಹುದು. ಇಂದು ಪ್ರೊಸ್ಟೇಟ್ ಕ್ಯಾನ್ಸರ್ದ ಸಂಭವನೀಯತೆಯನ್ನು ಸರಳವಾದ ಪಿಎಸ್ಎ ಪರೀಕ್ಷೆಯ ಮೂಲಕ ಮೊದಲೇ ಕಂಡು ಹಿಡಿಯಬಹುದೆಂದು ತಿಳಿಸಿದರು.
ಕಿಡ್ನಿಗೆ ಸಂಬಂಧಿಸಿದಂತೆ ಮಾತನಾಡುತ್ತಾ, ನಿಯಮಿತ ಚಟುವಟಿಕೆಯ ಜೀವನದಲ್ಲಿ ವಾಕಿಂಗ್, ವ್ಯಾಯಾಮ ಒತ್ತಡ ರಹಿತ ಸ್ಥಿತಿ, ಉಪ್ಪು ಕರಿದ ಪದಾರ್ಥಗಳು ಹಾಗೂ ಕರ್ಬೋಹೈಡ್ರೇಟ್ಗಳ ಸೇವನೆಯಲ್ಲಿ ನಿಯತ್ರಣಗಳಿಂದ ಕಿಡ್ನಿ ಸಮಸ್ಯೆಗಳಿಂದ ದೂರವಾಗಬಹುದು ಎಂದು ಹೇಳಿದರು. ಸಿರಮ್ ಕ್ರಿಯಾಟಿನ್, ಮೂತ್ರದಲ್ಲಿನ ಅಲ್ಬುಮಿನ್ ಹಾಗೂ ಅಲ್ಟ್ರಾ ಸೌಂಡ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದರಿಂದ ಮುಂದೆ ಸಂಭವಿಸಬಹುದಾದ ಕಿಡ್ನಿ ಸಮಸ್ಯೆಗಳನ್ನು ಮುಂಚಿತವಾಗಿಯೇ ತಿಳಿದುಕೊಳ್ಳಬಹುದು ಎಂದು ತಿಳಿಸಿದರು. ಧೂಮ್ರಪಾನ, ಬೊಜ್ಜು ಹಾಗೂ ಕರಿದ ಕೊಬ್ಬಿನ ಪದಾರ್ಥಗಳು ಅಪಾಯಕಾರಿ ಎಂದು ಒತ್ತಿ ಹೇಳಿದರು.
ಕಿಡ್ನಿ ಫೇಲ್ ಆದ ನಂತರ ಇರುವ ಎರಡು ಮಾರ್ಗಗಳೆಂದರೆ, ಡಯಾಲಸಿಸ್ ಹಾಗೂ ಕಿಡ್ನಿ ಕಸಿ ಮಾಡುವುದು ವಾರಕ್ಕೆ ಎರಡು ಮೂರು ಬಾರಿ ಮಾಡುವ ಡಯಾಲಸಿಸ್ ಸೌಲಭ್ಯ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿಯೂ, ಬಿಎಲ್ಡಿಇ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಪ್ರತಿ ಸಲಕ್ಕೆ ರೂ. 600-800 ಶುಲ್ಕಕ್ಕೆ ಲಭ್ಯವಿರುವುದು. ಕಿಡ್ನಿ ಕಸಿ ಮಾಡಿಸಲು ರೂ. 5 ಮತ್ತು 12 ಲಕ್ಷ ಖರ್ಚು ಬರುತ್ತಿದ್ದು ಹತ್ತಿರದ ರಕ್ತ ಸಂಬಂಧಿಗಳಿಂದ ಇಲ್ಲವೇ ಮೆದುಳು ಸ್ಥಗಿತವಾದವರ ಕಿಡ್ನಿಗಳಿಂದ ಮಾತ್ರ ಕಸಿ ಮಾಡಲು ಸಾಧ್ಯ ಮೆದಳು ಸ್ಥಗಿತ (ಬ್ರೇನ್ ಡೆಡ್) ಆದವರ ದೇಹದ ಎಲ್ಲ ಅಂಗಾಂಗಳನ್ನು ಸಂಬಂಧಿಗಳು ದಾನಮಾಡಿದರೆ ಬೇರೆ ಬೇರೆ ಅಂಗಾಂಗಳ ಅವಶ್ಯಕತೆ ಇರುವ ಎಂಟು ರೋಗಿಗಳನ್ನು ಉಳಸಬಹುದುದಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 