ಪ್ರಜಾಪ್ರಭುತ್ವ ಎಂದರೆ ಕೇವಲ ಮತದಾನವಲ್ಲ ಪ್ರತಿಯೊಬ್ಬ ನಾಗರಿಕರ ಹಕ್ಕು ಶಾಸಕ ಡಾ. ಚಂದ್ರು ಲಮಾಣಿ

ಪ್ರಜಾಪ್ರಭುತ್ವ ಎಂದರೆ ಕೇವಲ ಮತದಾನವಲ್ಲ ಪ್ರತಿಯೊಬ್ಬ ನಾಗರಿಕರ ಹಕ್ಕು ಶಾಸಕ ಡಾ. ಚಂದ್ರು ಲಮಾಣಿ  Democracy is not merely about voting; it is the right of every citizen: MLA Dr. Chandru Lamani


ಲಕ್ಷ್ಮೇಶ್ವರ"  15: ಪ್ರಜೆಗಳೇ ಪ್ರಭುಗಳಾಗಿರುವ ನಮ್ಮ ದೇಶದಲ್ಲಿ ಪ್ರತಿಯೊಬ್ಬರ ಧ್ವನಿಗೂ ಗೌರವ ಸಿಗಲಿ, ಸಮಾನತೆ ಮತ್ತು ಸ್ವಾತಂತ್ರ್ಯ ಸದಾ ನೆಲೆಸಲಿ.ಪ್ರಜಾಪ್ರಭುತ್ವ ಎಂದರೆ ಕೇವಲ ಮತದಾನವಲ್ಲ ಅದು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಕರ್ತವ್ಯಗಳ ಗೌರವ. ನಮ್ಮ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ನಾವೆಲ್ಲರೂ ಬದ್ಧರಾಗೋಣ ಎಂದುಶಾಸಕ ಡಾ ಚಂದ್ರು ಲಮಾಣಿ ಹೇಳಿದರು ಅವರು ಪಟ್ಟಣದ ಉಮಾ ವಿದ್ಯಾಲಯ ಹೈಸ್ಕೂಲಿನಲ್ಲಿ ತಾಲೂಕು ಆಡಳಿತ ತಾಲೂಕು ಪಂಚಾಯಿತಿ ಪುರಸಭೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ಪ್ರಜಾಪ್ರಭುತ್ವ ದಿನಾಚರಣೆ ಮತ್ತು ಯುವ ಸಂಸತ್ತು ಸಭೆಯ ಕಾರ್ಯಕ್ರಮವನ್ನು ಸಸಿ ಗಿಡಕ್ಕೆ ನೀರು ಹಾಕಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾಪಣೆಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರುಜಾತಿ, ಮತ, ಭೇದವಿಲ್ಲದೆ ಎಲ್ಲರನ್ನೂ ಒಂದಾಗಿ ಕಾಣುವ ಶಕ್ತಿ ನಮ್ಮ ಪ್ರಜಾಪ್ರಭುತ್ವಕ್ಕಿದೆ. ಇದರ ರಕ್ಷಣೆ ನಮ್ಮೆಲ್ಲರ ಹೊಣೆ.ಸ್ವಾತಂತ್ರ್ಯದ ಸಂದೇಶ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ನಡೆಯುವ ಆಡಳಿತವೇ ನಿಜವಾದ ಪ್ರಜಾಪ್ರಭುತ್ವ. ಈ ಶ್ರೇಷ್ಠ ವ್ಯವಸ್ಥೆಯನ್ನು ಎಲ್ಲರೂ ಗೌರವಿಸೋಣ ಎಂದರು ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಧನಂಜಯ್ ಎಂ ಮಾಲಗಿತ್ತಿ ಗ್ಯಾರೆಂಟಿ ಸಮಿತಿ ಅಧ್ಯಕ್ಷ ರಾಜು ಮಡಿವಾಳರ ವಕೀಲರ ಸಂಘದ ಅಧ್ಯಕ್ಷರಾದ ಬಸವರಾಜ ಬಾಳೇಶ್ವರಮಠ ಸಿಪಿಐ ಭಿ ವ್ಟಿ ನ್ಯಾಮೇಗೌಡರಕ್ರೈಂ ಪಿಎಸ್‌ಐ ಟಿ ಕೆ ರಾಠೋಡ್ ಸಮಾಜ ಕಲ್ಯಾಣ ಇಲಾಖೆಯ ಗೋಪಾಲ ಲಮಾಣಿ ಬಿಎಸ್ ಹಡಪದ ತಾಲೂಕ ಪಂಚಾಯಿತಿ ಅಧಿಕಾರಿ ಶಾಲೆ ಶಿಕ್ಷಕರ ವರ್ಗದವರು ಮುಖಂಡರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು