ಶಿಗ್ಗಾವಿ 02 : ಪ್ರಜಾಪ್ರಭುತ್ವದಲ್ಲಿ ಅಂತಿಮ ನಿರ್ಧಾರ ಮತದಾರರೇ ಹೊರತು ಯಾವುದೇ ಸರ್ವಾಧಿಕಾರಿ ಅಲ್ಲಾ. ಜಿಲ್ಲಾದ್ಯಕ್ಷ ಅರುಣಕುಮಾರ ಪೂಜಾರ ತ್ವರಿತಗತಿಯ ಉಚ್ಚಾಟನೆ ಮಾಡಿದ್ದು ಹಿಂದಕ್ಕೆ ತೆಗೆದುಕೊಳ್ಳಬೇಕು ಇಲ್ಲವಾದರೆ ಉಗ್ರವಾದ ಹೋರಾಟ ಖಚಿತ ಎಂದು ಯುವ ನಾಯಕ ಸಂತೋಷ ಧಾರವಾಡ ಹೇಳಿದರು.
ಪಟ್ಟಣದ ಅಂಬೇಡ್ಕರ ಓಣಿ ಹಾಗೂ ಜಯನಗರದ ನಗರದ ಶ್ರೀಕಾಂತ ದುಂಡಿಗೌಡ್ರು ಅವರ ಅಭಿಮಾನಗಳು ಪಂಜಿನ ಮೆರವಣಿಗೆ ನಗರದ ಪ್ರಮುಖ ಭಿದಿಗಳಲ್ಲಿ ಸಂಚರಿಸುವ ಮೂಲಕ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ನಾಯಕರಾದ ಶ್ರೀಕಾಂತ ದುಂಡಿಗೌಡ್ರು ಹಾಗೂ ಸಂಗಮೇಶ ಕಂಬಳಿಮಠ ಹಲವಾರು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ ಬಂದಿದ್ದು ಬಡವರ ಸೇವೆ ಮಾಡುತ್ತ ಬಂದವರು ತಮ್ಮ ಅತಿಯಾದ ಆತ್ಮವಿಶ್ವಾಸದಿಂದ ಉಪಚುನಾವಣೆಯಲ್ಲಿ ಸೋಲಬೇಕಾಯಿತು ಆದರೆ ಸೋಲಿನ ಹೊಣೆಯನ್ನು ಬೇರೆ ಅವರ ತೆಲೆಗೆ ಕಟ್ಟತ್ತು ಇದ್ದಾರೆ , ಬಹುಶಃ 28 ರ ಚುನಾವಣೆ ತಯ್ಯಾರಿ ಅನ್ಸುತ್ತೆ ಖಂಡಿತವಾಗಿಯೂ 2028 ಕ್ಕೆ ನಮ್ಮೆಲ್ಲರ ನಾಯಕ ಶ್ರೀಕಾಂತ್ ದುಂಡಿಗೌಡ್ರು ಅವರೇ ನಮ್ಮ ಮುಂದಿನ ಶಾಸಕರು, ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದು ಆತ್ಯಂತ ಶೋಚನೀಯ ಸಂಗತಿಯಾಗಿದೆ ಭಾರತೀಯ ಜನತಾ ಪಕ್ಷ ಯಾರ್ಪನ ಸ್ವತ್ತ ಅಲ್ಲಾ ಎಂದು ಮಾರ್ಮಿಕವಾಗಿ ಹೇಳಿದರು.
ಈ ಸಂದರ್ಭದಲ್ಲಿ ರಮೇಶ್ ಇಂಗಳಗಿ, ಗಂಗಾಧರ ಧಾರವಾಡ , ಸುನೀಲ ಇಂಗಳಗಿ,ಸುದೀಪ ಧಾರವಾಡ,ಎಲ್ಲಪ್ಪ ಹೆಬ್ಬಳ್ಳಿ,ಹನುಮಂತಪ್ಪ ಹೋತನಹಳ್ಳಿ ,ಭಾರತಿ ಪೂಜಾರ,ದ್ಯಾಮವ್ವ ಹೆಬ್ಬಳ್ಳಿ, ದ್ಯಾಮವ್ವ ಇಂಗಳಗಿ , ದುರ್ಗಮ್ಮ ಧಾರವಾಡ, ಸುಂಕವ್ವ ಕುಕನೂರ ಹಾಗೂ ಇನ್ನಿತರ ಹಿರಿಯರು, ಯುವಕರು ,ತಾಯಿಂದಿರು ಉಪಸ್ಥಿತರಿದ್ದರು.