ಪರಿಸರ ಸಂಪತ್ತು ಹೆಚ್ಚಲು ಪ್ರತಿಯೊಬ್ಬರು ಗಿಡ ನೆಡಿ: ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಆಕರ್ಷ ಎಂ

ಚನ್ನಮ್ಮನ ಕಿತ್ತೂರು 05: ಪ್ರತಿಯೊಬ್ಬರ ತಮ್ಮ ಹುಟ್ಟು ಹಬ್ಬದ ದಿನದಂದು ಕೇವಲ ಒಂದು ಗಿಡವನ್ನು ನೆಡುತ್ತಾ ಮುಂದೆ ಸಾಗಿದಲ್ಲಿ ನಾಡಿನ ಪರಿಸರ ಸಂಪತ್ತನ್ನು ಹೆಚ್ಚಿಸಬಹುದೆಂದು ಇಲ್ಲಿಯ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಆಕರ್ಷ ಎಂ ಹೇಳಿದರು.

ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯ ಬುಧವಾರ ಸಮೀಪದ ಡೊಂಬರಕೊಪ್ಪ ಗ್ರಾಮದ ಹಿರಿಯ ಪ್ರಾಥಮಿಕ ಸಕರ್ಾರಿ ಶಾಲೆಯಲ್ಲಿ ಗಿಡಗಳನ್ನು ನೆಟ್ಟು ಮಾತನಾಡಿದ ಅವರು, ಈಗೀನ ಯುಗದಲ್ಲಿ ಕಣ್ಣಾಯಿಸಿದಲೆಲ್ಲ ಕಾಂಕ್ರೀಟ್ ಕಾಡು ಕಂಡು ಬರುತ್ತಿದ್ದು ಈ ಬೆಳವಣಿಗೆ ಒಳ್ಳೆಯದಲ್ಲ. ಒಂದು ವೇಳೆ ಇದೆ ಪರಿಸ್ಥಿತಿ ಮುಂದುವರೆದಲ್ಲಿ ಉಸಿರಾಡಲು ಶುದ್ಧ ಗಾಳಿಯೂ ಸಿಗದೆ ಜೀವ ಸಂಕುಲವೆ ಪರದಾಡುವ ಪರಿಸ್ಥಿತಿ ಬಂದೂದಗುತ್ತದೆ ಕಾರಣ ಯುವಕರು ಹಾಗೂ ನಾಗರಿಕರು ತಮ್ಮ ತಮ್ಮ ಹುಟ್ಟು ಹಬ್ಬದ ದಿನದಂದು ಕೇವಲ ಒಂದು ಗಿಡವನ್ನು ನೆಟ್ಟು ಅದನ್ನು ಸಂರಕ್ಷಿಸುವ ಜವಾಬ್ದಾರಿ ಹೊಂದಿದಲ್ಲಿ ಮತ್ತೆ ಹಸಿರನ್ನು ಕಾಣಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು. 

ನ್ಯಾಯವಾದಿಗಳ ಸಂಘದ ಅಧ್ಯಕ್ಷ ವಿಶ್ವನಾಥ ಬಿಕ್ಕಣ್ಣವರ, ನ್ಯಾಯವಾದಿಗಳಾದ ಮೋಹನ ಹಂಚಿನಮನಿ, ಅಕ್ಷಯ ವಾಲಿ,ಬಸವರಾಜ ಸವದತ್ತಿ, ಉಪವಲಯ ಅರಣ್ಯಾಧಿಕಾರಿ ಎಸ್.ಎ. ಮಗದುಮ್ಮ, ಮುಖ್ಯೋಪಾಧ್ಯಾಯ ಎಸ್.ಬಿ.ಹುಬ್ಬಳ್ಳಿ, ಪಕ್ಕಿರಪ್ಪ ಪಾಗಾದ ಮಡಿವಾಳಪ್ಪ ಗುದಗಿ, ಪ್ರಕಾಶ ಬಡಿಗೇರ ಸೇರಿದಂತೆ ಇತರರು ಹಾಜರಿದ್ದರು.