ಸರಕಾರದ ಯೋಜನೆಗಳನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಿ

ಗದಗ  23:  ಗ್ರಾಮದ ಸ್ವಚ್ಛತೆಯ  ಜೊತೆಗೆ ಸುತ್ತಮುತ್ತಲಿನ ಪರಿಸರದ ಬಗ್ಗೆ ಹೆಚ್ಚು  ಕಾಳಜಿ ವಹಿಸಬೇಕು. ಹಾಗೂ ಸರಕಾರದ ಯೋಜನೆಗಳನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಿ ಎಂದು ಅಸೂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಯ ಎಸ್.ಎಚ್.ಭಜೇಂತ್ರಿ ನುಡಿದರು. 

ರೋಣ ತಾಲೂಕಿನ ಅಸೂಟಿಯ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ  ಗ್ರಾಮ ಸಂಪರ್ಕ ಯೋಜನೆಯಡಿ ಸರಕಾರದ ಯೋಜನೆಯಗಳ ಕುರಿತು ಜನಜಾಗೃತಿ ಮೂಡಿಸಲು ಕ್ಷೇತ್ರ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಡವಿಸೋಮಾಪುರದ ಗೋಣಿಬಸವೇಶ್ವರ ಜಾನಪದ ಮೇಳ  ಜನಪದ ಸಂಗೀತಗಳ ಮೂಲಕ ಹಾಗೂ ಕೊಣ್ಣೂರು ಜೈ ಕಿಸಾನ ಯುವ ಮಂಡಳದವರು  ರಾಜ್ಯ ಸರ್ಕಾರ  ನೇಕಾರ ಮತ್ತು ಮೀನುಗಾರ ಸಾಲ ಮನ್ನಾ, ರೈತ ಸಮ್ಮಾನ ಯೋಜನೆ ಫಲಾನುಭವಿಗಳಿಗೆ ವಾರ್ಷಿಕ್  ಹೆಚ್ಚುವರಿ 4 ಸಾವಿರ ರೂಪಾಯ ನೀಡುತ್ತಿರುವ ಸೌಲಭ್ಯದ ಯೋಜನೆ ಸೇರಿದಂತೆ ಪ್ರತಿ ಗ್ರಾಮದ ಸ್ವಚ್ಚತೆ ಹಾಗೂ ಸರ್ಕಾರದ ದ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಪ್ರಸ್ತುತಿಸಿದರು. ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಂ.ಟಿ.ನೇಮರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಲೆಯ ಸಹ ಶಿಕ್ಷಕರಾದ ಎಮ್.ವಿ.ಮೆಣಸಗಿ, ಬಿ.ವಿ ದಿಂಡೂರು, ಎಮ್.ಬಿ.ಕಾತರಕಿ, ಬಿ.ಬಿ.ಕಮ್ಮಾರ, ಎನ್.ಎಚ್.ಗೊಂದಿ. ಜಿ.ಜಿ.ಯರಗೊಪ್ಪ, ಹಾಗೂ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಸ್.ಎನ್. ಪೋಲಿಸಗೌಡ್ರ, ಶಾಲೆಯ ವಿದ್ಯಾಥರ್ಿಗಳು ಭಾಗವಹಿಸಿದ್ದರು.