ಮೂಲಬೂತ ಹಕ್ಕು, ಕರ್ತವ್ಯವನ್ನು ಪ್ರತಿಯೊಬ್ಬರೂ ಅರಿಯಬೇಕು: ನ್ಯಾ. ಸಲಗರೆ

ಗದಗ 24: ಪ್ರತಿಯೊಬ್ಬರಿಗೂ ದಿನನಿತ್ಯಕ್ಕೆ ಬೇಕಾಗುವ ಕನಿಷ್ಠ ಕಾನೂನಿನ ಙ್ಞಾನ ಅತೀ ಅವಶ್ಯವಾಗಿದೆ. ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಶ, ಅತ್ಯಾಚಾರ ಆಗದಂತೆ ತಡೆಗಟ್ಟಲು ಪ್ರತಿಯೊಬ್ಬರೂ ಕಾನೂನಿನ ಙ್ಞಾನ ಹೊಂದುವುದು ಅವಶ್ಯವಿದೆ, ಅತ್ಯಾಚಾರ, ದೌರ್ಜನ್ಯ ಎಸುಗುವವರಿಗೆ ದಂಡ ಹಾಗೂ ಶಿಕ್ಷೆ ಇದೆ, ನಾವು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದಕ್ಕೆ ನಮ್ಮ ಸಂವಿಧಾನದಲ್ಲಿ ಮೂಲಬೂತ ಹಕ್ಕು ಮತ್ತು ಕರ್ತವ್ಯ ಹೇಳಲಾಗಿದೆ. ಪ್ರತಿಯೊಬ್ಬರೂ ಸಂವಿಧಾನ ಅಥರ್ೆಯಿಸಿಕೊಂಡು ಜೀವನ ಸಾಗಿಸಬೇಕು. ವಿದ್ಯಾಥರ್ಿಗಳು ತಮ್ಮ ಪಠ್ಯದ ಜೊತೆಗೆ ಇಂತಹ ಕಾನೂನು ಸಾಕ್ಷರತಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಪಾಲಕರಿಗೆ ಅಕ್ಕ ಪಕ್ಕದವರಿಗೆ ಈ ಬಗ್ಗೆ ತಾವು ತಿಳಿ ಹೇಳಬೇಕು. ಡಾಃಅಬ್ದುಲ್ ಕಲಾಂರ ಜೀವನ ತಮಗೆ ಮಾದರಿಯಾಗಲಿ, ನಿಮ್ಮ ಪ್ರತಿಭೆ ಬೆಳಗಬೇಕಾದರೆ ನಿಮ್ಮಲ್ಲಿ ಛಲ, ಸಾದನೆ ಇರಬೇಕು ಅಂದಾಗ ಯಶಸ್ಸು ತಾನೇ ಬರುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ  ಎಸ್.ಜಿ. ಸಲಗರೆ ಅವರು ನುಡಿದರು.

ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಪೊಲೀಸ ಇಲಾಖೆ, ವಾತರ್ಾ ಇಲಾಖೆ, ಶಿಕ್ಷಣ, ಆರೋಗ್ಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸರ್ಕಾರಿ ಮತ್ತು ಅರೇ ಸಕರ್ಾರಿ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬಳಗಾನೂರಿನ ಚಿಕ್ಕೇನಕೊಪ್ಪದ ಚನ್ನವೀರ ಶರಣರ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಥರ್ಿಗಳಿಗಾಗಿ ಏರ್ಪಡಿಸಿದ್ದ ಕಾನೂನು ಸಾಕ್ಷರತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಹಾಗೂ ಮಕ್ಕಳ ಕಳ್ಳ ಸಾಗಾಣಕೆ ಕುರಿತು ಮಾತನಾಡಿ ಅಪರಿಚಿತರಿಂದ ಮಕ್ಕಳು ಎಚ್ಚರದಿಂದ ಇರಬೇಕು, ಸಂಶಯಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಪಾಲಕರಿಗೆ, ಶಿಕ್ಷಕರಿಗೆ ತಿಳಿಸಬೇಕು ಎಂದು ನುಡಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ ಅವರು ಮಾತನಾಡಿ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಇಬ್ಬರೂ ಸಮಾನರು, ಮೇಲು ಕೀಳು ಎಂಬ ಭಾವನೆ ಪಾಲಕರಲ್ಲಿ ಬೇಡ. ಲಿಂಗತಾರತಮ್ಯ ಹೊಡಿದೊಡಿಸಲು ಪ್ರತಿಯೊಬ್ಬರೂ ಹೆಣ್ಣು ಮಕ್ಕಳಿಗೆ ಗೌರವ ನೀಡಬೇಕು ಎಂದು ನುಡಿದರು. ವಕೀಲರಾದ ಶ್ರೀಮತಿ ಸುಮಾ ಶ್ರೀಗಿರಿ ಅವರು ಮಕ್ಕಳ ವ್ಯಕ್ತಿತ್ವ ಹಾಗೂ ಮಕ್ಕಳ ಹಕ್ಕುಗಳ ಕುರಿತು, ಶ್ರೀಮತಿ ಸುವರ್ಣಾ ಅಕ್ಕಿ ಅವರು ಸಂವಿಧಾನ, ಮೂಲಬೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ಮಾತನಾಡಿದರು. ಉಪನ್ಯಾಸಕರಾಗಿ ಆಗಮಿಸಿದ್ದ ನ್ಯಾಯವಾದಿ ಶ್ರೀಮತಿ ಸುಪಣರ್ಾ ಬ್ಯಾಹಟ್ಟಿ ಅವರು ಮಗಳನ್ನು ರಕ್ಷಿಸಿ, ಮಗಳನ್ನು ಓದಿಸಿ, ಪೋಕ್ಸೊ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ಧೆ ಬ್ರೂಣಹತ್ಯೆ ನಿಷೇದ, ಬಾಲ್ಯ ವಿವಾಹ ನಿಷೇದ ಕುರಿತು ಉಪನ್ಯಾಸ ಮಂಡಿಸಿದರು.  

ಸಮಾರಂಬದ ಅದ್ಯಕ್ಷತೆಯನ್ನು ಚ. ಶರಣರ ಮಠದ ವಿದ್ಯಾಪೀಠ ಟ್ರಸ್ಟ್ದ ಕಾಯರ್ಾದ್ಯಕ್ಷರಾದ ಎಂ.ಬಿ.ಸಿಕ್ಕೆದೇಸಾಯಿ ವಹಿಸಿದ್ದರು. ವೇದಿಕೆ ಮೇಲೆ ಜಿಲ್ಲಾ ವಕೀಲರ ಸಂಘದ ಜಂಟಿ ಕಾರ್ಯದಶರ್ಿ ವಾ.ಡಿ.ತಳವಾರ,  ಮುಖ್ಯೊಪಾದ್ಯಯರಾದ ಎಂ.ಎಸ್.ಕುಂಬಾರ, ಎಎಸ್ಐ ಎ.ಆರ್.ರಾಮೇನಹಳ್ಳಿ, ಮಕ್ಕಳ ಸಹಾಯವಾಣಯ ಪ್ರಭಾವತಿ ಬೆಟಗೇರಿ ಹಾಗೂ ವಕೀಲರು, ಶಿಕ್ಷಕರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಪ್ರಾಚಾರ್ಯರಾದ ಐ.ಎಫ್.ಹೂಗಾರ ನಿರೂಪಿಸಿದರು.