ಪ್ರತಿಯೊಬ್ಬರಿಗೆ ಉತ್ತಮ ಸಂಸ್ಕೃತಿ ಸಂಸ್ಕಾರ ಇರಬೇಕು
ಯಮಕನಮರಡಿ 20 : ಸಮಾಜದಲ್ಲಿ ಎಲ್ಲರೂ ಸಮಾನತೆ ಉಳ್ಳವರಾಗಿರಬೇಕು ಶ್ರೇಷ್ಟ ಕನಿಷ್ಟ ಎನ್ನದೆ ಸಮಭಾವ ಸಮಾನತೆ ಬೆಳಸಿಕೊಳ್ಳಬೇಕು ಹೋಲ ಗದ್ದೆ ಮನೆ ಬದುಕಲು ಆಸ್ತಿ ಮಾತ್ರ ಮುಖ್ಯವಲ್ಲ ಪ್ರತಿಯೋಬ್ಬರಿಗೂ ಜ್ಞಾನ ಮಾತ್ರ ನಿಜವಾದ ಆಸ್ತಿ ಎಂದು ಹಾವೇರಿ ಜಿಲ್ಲೆಯ ಹಂದಿಗನೂರದ ವಿರೇಶ ಶರಣರು ಹೆಳಿದರು.
ಬುದವಾರ ದಿ 18 ರಂದು ಹುಕ್ಕೇರಿ ತಾಲೂಕಿನ ಯಮಕನಮರಡಿಯ ಭೀಮ ನಗರದಲ್ಲಿ ಆಯೋಜಿಸಲಾಗಿದ್ದ ಬಸವಾದಿ ಶರಣರ ಕೃಪಾ ಬೆಳಕಿನಲ್ಲಿ ವಚನ ಜ್ಯೋತಿ ಯಾತ್ರೆ ಹಾಗೂ ಐದು ದಿನಗಳ ಕಾಲ ನಡೆದ ಆಧ್ಯಾತ್ಮಿಕ ಪ್ರವಚನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿರೇಶ ಶರಣರು ಮಾತನಾಡಿದರು. ಬುದ್ದಿ ವಿವೇಕ ಜ್ಞಾನ ಎಂಬುದು ಮನುಷ್ಯನಿಗೆ ನಿಜವಾದ ಆಸ್ತಿ ಎಂದು ಹೆಳುತ್ತಾ ಹನ್ನೇರಡನೇಯ ಶತಮಾನದಲ್ಲಿ ಆಗಿ ಹೋದ ಅಲ್ಲಮಪ್ರಬು ಅವರು ಈ ಮಾತು ಸ್ಪಷ್ಟವಾಗಿ ವಿವರಿಸಿದ್ದಾರೆ. ಇಂದಿನ ದಿನಮಾನಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕೃತಿ ಸಂಸ್ಕಾರ ಕಲಿಸಿ ಆಸ್ತಿವಂತರಾಗಿ ಮಾಡಬೇಕು ಹಾಗೂ ಹಳೇಯ ಸಂಪ್ರದಾಯಗಳನ್ನು ಬಿಡಬೇಕು ಎಂದು ಹೇಳಿದರು. ಹಾಗೂ
ಯಮಕನಮರಡಿ ಹುಣಸಿಕೊಳ್ಳಮಠದ ಪೂಜ್ಯರಾದ ಸಿದ್ದಬಸವ ದೇವರು ಆಶಿರ್ವಚನ ನಿಡುತ್ತ ಹುಟ್ಟು ಸಹಜ ಸಾವು ಆಕಸ್ಮಿಕ ದೆವ್ವ ಭೂತ ಇದೆ ಅನ್ನುವುದು ಕೇವಲ ಊಹೆ ಮಾತ್ರ ದೆವ್ವ ಭೂತ ಎಂದು ಭಯ ಬೀತರಾಗದೆ ಎಲ್ಲರೂ ನಮ್ಮದಿ ಬದುಕು ಸಾಗಿಸಬೇಕೆಂದು ಹೇಳಿದರು. ಮುಂಬರುವ ದಿನಗಳಲ್ಲಿ ಸಂವಿದಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೆಡ್ಕರ ಅವರ ಪುರಾಣ ಪ್ರವಚನ ಯೂಟ್ಯೂಬ ಮೂಲಕ ಬಿತ್ತರಿಸಲು ಯೊಜನೆ ರೂಪಿಸಲಾಗಿದೆ. ಅಂಬೆಡ್ಕರ ರವರ ಆದರ್ಶ ಮೌಲ್ಯಗಳ ಪ್ರಚಾರದ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೆಕೆಂದು ತಿಳಿಸಿದರು.ಪ್ರವಚನ
ಅದರಂತೆ ಹತ್ತರಗಿ ಕಾರಿಮಠದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡುತ್ತಾ ಪ್ರವಚನ ಆಳಿಸುವುದರಿಂದ ಮನುಷ್ಯನ ಜೀವನ ಪಾವನವಾಗುತ್ತದೆ ಎಂದು ಹೆಳಿದರು. ಡಾ. ಬಾಬಾ ಸಾಹೇಬ ಅಂಬೆಡ್ಕರರವರು ತಮ್ಮ ಜೀವನದಲ್ಲಿ ಸಾಕಷ್ಟು ಕಷ್ಟ ನೋವುಗಳನ್ನು ಎದುರಿಸಿ ಉತ್ತಮ ಶಿಕ್ಷಣ ಪಡೆದವರಾಗಿದ್ದರು. ಸಮಾಜದಲ್ಲಿ ಬೀಡು ಬಿಟ್ಟಿರುವ ಕಂದಾಚಾರ ಮೂಡನಂಬಿಕೆ ಹೋಗಲಾಡಿಸಬೇಕಾಗಿದೆ. ಎಲ್ಲರೂ ಸಮಾನತೆಯಿಂದ ಬದುಕಬೇಕೆಂದು ಡಾ. ಬಾಬಾ ಸಾಹೇಬ ಅಂಬೆಡ್ಕರ ರವರು ಸಂವಿಧಾನ ರಚಿಸಿದ್ದರಿಂದ ಎಲ್ಲರೂ ಶಿಕ್ಷಣ ಪಡೆದು ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದು ಹತ್ತರಗಿ ಕಾರಿಮಠದ ಸ್ವಾಮಿಜಿ ಹೇಳಿದರು. ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ದೀಲೀಪ ಹೊಸಮನಿ ಅಡ್ವೋಕೆಟ್ ವಿಕ್ರಮ ಕರ್ನಿಂಗ್ ರಾಜೇಶ ಮೋಶಿ ಗಣ್ಯರಾದ ಬಾಳಾರಾಮ ರಜಪೂತ ಮುಂತಾದವರು ಮಾತನಾಡಿದರು ಕಾರ್ಯಕ್ರಮದಲ್ಲಿ ಗ್ರಾಮ ದ ಪ್ರಮುಖರಾದ ಜಯಂತ ಸಬನಿಸ, ಕೀರಣ ಹತ್ತರಗಿ, ಧರನಟ್ಟಿ, ನಿಂಗಪ್ಪ ಕೋಚರಗಿ ಯಮನಪ್ಪ ಗಿರೇನ್ನವರ ಮಲ್ಲಿಕಾರ್ಜುನ ರಾಶಿಂಗೆ, ಮಹಾದೇವ ತಳವಾರ, ಸೋಮೇಶ ಜೀವನ್ನವರ, ರಮೇಶ ಜೀವನ್ನವರ, ಕಾಶಿನಾಥ ಮೇತ್ರಿ, ಸಾಗರ ತಳಗೇರಿ, ಪ್ರಕಾಶ ಕಾಂಬಳೇ, ಸುರೇಶ ಗುಡಿಕಡೆ, ಕಲ್ಲಪ್ಪ ಪೂಜೇರಿ, ಮಾರುತಿ ಶಿರಗಾವಿ, ಅನಿಲ ಶಿರಗಾವಿ, ಬಸವರಾಜ ಕಟ್ಟಿಮನಿ ಇತರರು ಉಪಸ್ಥಿತರಿದ್ದು ಶ್ರೀಮತಿ. ಪ್ರಿಯಾಂಕ ಗೀರೇನ್ನವರ ಸ್ವಾಗತೀಸಿ ನಿರೂಪಿಸಿ ವಂದಿಸಿದರು.