ಪ್ರತಿಯೊಬ್ಬರೂ ಪರಿಶುದ್ದ ಮನಸ್ಸು ಉಳ್ಳವರಾಗಿರಬೇಕು

ಲೋಕದರ್ಶನ ವರದಿ

ಬೈಲಹೊಂಗಲ 03: ಪ್ರತಿಯೊಬ್ಬರೂ ಪರಿಶುದ್ದ ಮನಸ್ಸು ಉಳ್ಳವರಾಗಿ ಸತ್ಸಂಗಗಳಲ್ಲಿ ಪಾಲ್ಗೊಂಡು ಗುರುವಿನ ಕೃಪಾ ಆಶೀರ್ವಾದಕ್ಕೆ ಪಾತ್ರರಾಗಿ ಜನ್ಮ ಸಾರ್ಥಕ ಮಾಡಿಕೊಳ್ಳಬೇಕೆಂದು ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಮಹಾಸ್ವಾಮಿಜಿ ಹೇಳಿದರು.

ತಾಲೂಕಿನ ಮುರಕೀಬಾಂವಿ ಗ್ರಾಮದ ಸಿದ್ದಾರೂಡ ಮಠದಲ್ಲಿ ನಡೆದ ಮುಕ್ತಾನಂದ ಭಾರತಿ ಸ್ವಾಮೀಜಿಗಳ 5ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿ, ಪರಮಾತ್ಮನು ಬಹಳ ಹತ್ತಿರವಿದ್ದರೂ ದೂರವಾಗಿರುತ್ತಾನೆ ಎಂದು ಶೃತಿ ಹೇಳುತ್ತದೆ.

  ಅಸಂಸ್ಕೃತ ಬುದ್ದಿ ಉಳ್ಳವರಿಗೆ ನೂರು ಜನ್ಮ ಎತ್ತಿದರೂ ಹತ್ತಿರವಾಗದಷ್ಟು ದೂರವಾಗಿದ್ದಾನೆ. ನಮ್ಮ ಮನಸ್ಸು ಬುದ್ದಿ ಪರಿಶುದ್ದವಾಗಿಲ್ಲದಿದ್ದರೆ ನಿತ್ಯ ಸತ್ಯನಾದ ಭಗವಂತನ ಪ್ರಾಪ್ತಿ ನಮಗೆ ಆಗುವದಿಲ್ಲ ಮತ್ತು ನಿತ್ಯ ಆನಂದ ಅನುಭವ ದೊರೆಯುವದಿಲ್ಲ ಎಂದರು.

ಕಾರ್ಯಕ್ರಮದಂಗವಾಗಿ ರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ, ಡಾ.ಶಿವಾನಂದ ಭಾರತಿ ಮಹಾಸ್ವಾಮಿಜಿ ಕೀರಿಟ ಪೂಜೆ, ಭಜನೆ, ಮಹಾಪ್ರಸಾದ  ನಡೆಯಿತು.

ಪೂರ್ಣಾನಂದ ಭಾರತಿ ಸ್ವಾಮೀಜಿ, ಸಂಕ್ರಟ್ಟಿ ಶಂಕರಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಿದ್ದಾರೂಡ ಮಠದ ಕಮೀಟಿ ಸದಸ್ಯರು, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.