ಪ್ರತಿಯೊಬ್ಬರು ಕೂಡ ಆರೋಗ್ಯ ತಪಾಸಣೆ ಮಾಡಿಸಿ ಕೊಳ್ಳಬೇಕು : ಓಲೇಕಾರ
ಶಿಗ್ಗಾವಿ 18 : ಪ್ರತಿಯೊಬ್ಬರು ಕೂಡ ಆರೋಗ್ಯದ ತಪಾಸಣೆ ಮಾಡಿಸಿ ಆರೋಗ್ಯದ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನು ಹರಿಸಬೇಕು ಎಂದು ಕಾರ್ಮಿಕ ಸಂಘಟನೆ ರಾಜ್ಯಾದ್ಯಕ್ಷ ಡಿ.ಎಸ್. ಓಲೇಕಾರ ಹೇಳಿದರು.ತಾಲೂಕಿನ ಕ್ಯಾಲಕೊಂಡ ಗ್ರಾಮದ ಆಯುಷ್ಮಾನ ಅರೋಗ್ಯ ಮಂದಿರದಲ್ಲಿ ನಡೆದ ಕಟ್ಟಡ ಕಾರ್ಮಿಕ ಸಂಘ ಮತ್ತು ಕಾರ್ಮಿಕ ಇಲಾಖೆ ಯಿಂದ ಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರ ಉದ್ದೇಶಿಸಿ ಮಾತನಾಡಿದ ಇಂದಿನ ಒತ್ತಡದ ದಿನಗಳಲ್ಲಿ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸದೇ ಅರೋಗ್ಯ ಹಾಳಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಆರೋಗ್ಯ ಕಡೆಗೆ ಗಮನ ಹರಿಸಿ ಸದೃಢರಾಗಿರಬೇಕು ಎಂದರು.ಕ್ಯಾಲಕೊಂಡ ಗ್ರಾಮ ಪಂಚಾಯತಿ ಅದ್ಯಕ್ಷ ಚಂದ್ರು ಕೊತಂಬರಿ ಶಿಬಿರವನ್ನು ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಮಿಕ ಇಲಾಖೆಯಿಂದ ಶಿಬಿರವನ್ನು ಹಮ್ಮಿಕೊಂಡಿದ್ದು ಎಲ್ಲಾ ಕಾರ್ಮಿಕರು ಕೂಡ ಇದರ ಸದುಪಯೋಗ ಪಡೆದುಕೊಂಡು ಅರೋಗ್ಯಯುತವಾದ ಜೀವನ ನಿರ್ವಹಣೆ ಮಾಡಬೇಕು ಎಂದ ಝಕ್ಸ ಸುದ್ದಿ : ಈ ಶಿಬಿರದಲ್ಲಿ 95ಕ್ಕೂ ಹೆಚ್ಚು ಕಾರ್ಮಿಕರ ಆರೋಗ್ಯದ ತಪಾಸಣೆ ಮಾಡಿ ನಂತರ ಎಲ್ಲಾ ಕಾರ್ಮಿಕರಿಗೆ ದ್ವಿದಳ ಧಾನ್ಯದ ಕಿಟ್ಟನ್ನು ವಿತರಸಿದರು . ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ಕಾರ್ಮಿಕ ಸಂಘದ ಅಧ್ಯಕ್ಷ ಗಂಗಾಧರಯ್ಯ ಚರಂತಿಮಠ,ಹಾವೇರಿ ಜಿಲ್ಲಾ ಉಪಾಧ್ಯಕ್ಷ ಡಿ ಅರ್ ಉಳ್ಳಟ್ಟಿ, ಗ್ರಾಮ ಪಂಚಾಯತಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಗೂ ,ಕಾರ್ಮಿಕ ಆರೋಗ್ಯ ಇಲಾಖೆಯ ಕುಶಾಲ ಜೈನ್,ಸುಮಿತ್ಮ ಮರೆಣ್ಣನವರ, ಸಮುದಾಯ ಆರೋಗ್ಯ ಅಧಿಕಾರಿ ಮಲ್ಲಿಕಾರ್ಜುನಗೌಡ ಕೊಣ್ಣೂರ,ಪ್ರಾಥಮಿಕ ಅರೋಗ್ಯ ಸುರಕ್ಷಣಾಧಿಕಾರಿ ವಿದ್ಯಾಶ್ರೀ ಕಟ್ಟಿ , ಗ್ರಾಮದ ಮುಖಂಡ ಜಾಪರ್ ಬಾಗವಾನ ಹಾಗೂ ಆಯುಷ್ಮಾನ ಆರೋಗ್ಯ ಮಂದಿರ ಆಶಾಕಾರ್ಯಕರ್ತೆಯರು ಹಾಗೂ ಗ್ರಾಮದ ಎಲ್ಲಾ ಕಾರ್ಮಿಕರು ಉಪಸ್ಥಿತರಿದ್ದರು.