ಬೆಳಗಾವಿ: ಪ್ರತಿಯೊಬ್ಬರು ಸ್ವಯಂ ಉದ್ಯೋಗದತ್ತ ಗಮನಹರಿಸಬೇಕು
ಬೆಳಗಾವಿ: ಪ್ರತಿಯೊಬ್ಬರು ಸ್ವಯಂ ಉದ್ಯೋಗದತ್ತ ಗಮನಹರಿಸಬೇಕು Everyone should focus on self-employment
Lokadrshan Daily
12/9/24, 2:05 AM ಪ್ರಕಟಿಸಲಾಗಿದೆ
ಲೋಕದರ್ಶನ ವರದಿ
ಬೆಳಗಾವಿ 09: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಕೌಶಲ್ಯವನ್ನು ಪಡೆದುಕೊಂಡು ಸ್ವಯಂ ಉದ್ಯೋಗದತ್ತ ಗಮನಹರಿಸಬೇಕು. ಕುಟುಂಬದ ಎಳ್ಗಗೆ ಪುರುಷ ಹಾಗೂ ಮಹಿಳೆ ಇಬ್ಬರೂ ಆಥರ್ಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಮಾತ್ರ ಪ್ರಗತಿ ಸಾಧ್ಯ ಎಂದು ನಿವೃತ್ತ ಆರೋಗ್ಯಾಧಿಕಾರಿ ಎಸ್. ಕೆ. ಅಜ್ಜನ್ನವರ ಅಭಿಪ್ರಾಯಪಟ್ಟರು.
ನಗರದ ಭಾರತ ಕಾಲನಿಯ ಮಹಿಳಾ ಕಲ್ಯಾಣ ಸಂಸ್ಥೆ ಸಭಾಗೃಹದಲ್ಲಿ ಎಫ್. ವಿ. ಟಿ. ಆರ್. ಎಸ್ ಬೆಂಗಳೂರು ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ್ಲ ನಿರುದ್ಯೋಗಿ ಯುವತಿಯರಿಗಾಗಿ ಆಯೋಜಿಸಿದ್ದ ಆರು ತಿಂಗಳ ಉಚಿತ ಹೋಂ ನಸರ್ಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ತರಬೇತಿ ಪೂರೈಸಿದ ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಇನ್ನೊರ್ವ ಅತಿಥಿ ಎಂ. ಎಸ್. ಚೌಗಲಾ ಮಾತನಾಡಿ ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗವಕಾಶ ಲಭ್ಯತೆ ಇದೆ. ಹಂತ ಹಂತವಾಗಿ ಶಿಭಿರಾಥರ್ಿಗಳು ಪ್ರಾಯೋಗಿಕ ಜ್ಞಾನ ಹೆಚ್ಚಿಸುವ ಮೂಲಕ ಉತ್ತಮ ಸಂಬಳ ಪಡೆಯಬೇಕೆಂದರು.
ಯೋಜನಾ ನಿದರ್ೇಶಕಿ ಸುರೇಖಾ ಪಾಟೀಲ ಮಾತನಾಡಿ ಜೀವನದಲ್ಲಿ ಯಶಸ್ಸು ಸಾಧಿಸಲು ಶಕ್ತಿ ಮತ್ತು ಉತ್ಸಾಹವಿರಬೇಕು. ಗುರಿ ಮುಟ್ಟಲು ದೃಢ ನಿಷ್ಠೆಯೊಂದಿಗೆ ಮುನ್ನಡೆಯಬೇಕು ಹಿರಿಯ ನಾಗರಿಕರ ಸೇವೆ ಮಹತ್ವದಾಗಿದೆ ಎಂದು ಹೇಳಿದರು.
ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದಶರ್ಿ ವೈಜಯಂತಿ ಚೌಗಲಾ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರು ವಿವಿಧ ವೃತ್ತಿಗಳಲ್ಲಿ ನಿರತರಾಗಿ ಕೈ ಜೋಡಿಸಿದಾಗ ಮಾತ್ರ ಕುಟುಂಬದ ಆಥರ್ಿಕ ಪ್ರಗತಿ ಸಾಧ್ಯ ಮಹಿಳೆಯರು ಸ್ವಯಂ ಉದ್ಯೋಗಗಳಲ್ಲಿ ತೊಡಗುವ ಅನಿವಾರ್ಯತೆ ಇದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಯೋಜಕ ಎಂ ಎಂ ಗಡಗಲಿ, ಶಶಿಕಲಾ ಕಟ್ಟಿಮನಿ ಉಪಸ್ಥಿತರಿದ್ದರು.