ಎಲ್ಲರೂ ಒಟ್ಟಾಗಿ ಕೋವಿಡ್‍-19 ವಿರುದ್ಧ ಹೋರಾಡಬೇಕು: ಗಂಭೀರ್‍

ನವದೆಹಲಿ, ಏ.16, ಕೊರೊನಾ ವೈರಸ್‌ನಿಂದ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡಿ ಜಯಿಸಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.
ಕೊರೊನಾ ವೈರಸ್‌ನಿಂದಾಗಿ ಭಾರತ ಸರ್ಕಾರ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದೆ, ಇದು ಮೇ 3 ರವರೆಗೆ ಇರುತ್ತದೆ. ಗಂಭೀರ್ ತಮ್ಮ ಸಂಸದ ನಿಧಿಯಿಂದ ಒಂದು ಕೋಟಿ ರೂ.ಗಳನ್ನು ಪ್ರಧಾನಿ ಪರಿಹಾರ ನಿಧಿಗೆ ನೀಡಿದ್ದಾರೆ.ಸ್ಟಾರ್ ಸ್ಪೋರ್ಟ್ಸ್ ಶೋ ಕ್ರಿಕೆಟ್ ಕನೆಕ್ಟೆಡ್ ನಲ್ಲಿ ಗಂಭೀರ್, “ನಾವು ಈ ಹೋರಾಟವನ್ನು ಒಂದುಗೂಡಿ ಎದುರಿಸಿದಾಗ ಮಾತ್ರ ಗೆಲ್ಲಬಹುದು. ಪ್ರಮುಖವಾದುದು ಮಾರ್ಗಸೂಚಿಗಳನ್ನು ಅನುಸರಿಸುವುದು. ನಾವು ಮನೆಯಲ್ಲಿಯೇ ಇರಬೇಕು, ಮನೆ ಬಿಟ್ಟು ಹೊರ ಬರಾರದು. ನಾವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ” ಎಂದಿದ್ದಾರೆ."ನಾವು ಸಹಾಯದ ಬಗ್ಗೆ ಮಾತನಾಡಿದರೆ, ನನ್ನ ದೃಷ್ಟಿಯಲ್ಲಿ, ದಾನ ಮಾಡಲು ಯಾವುದೇ ಮಿತಿಯಿಲ್ಲ. ಒಬ್ಬ ವ್ಯಕ್ತಿಯು ತನ್ನ ಇಚ್ಛೆಯಂತೆ ಒಂದು ರೂಪಾಯಿ ದಾನ ಮಾಡಿದರೆ ಅದು ದೊಡ್ಡ ಸಹಾಯವಾಗಿದೆ" ಎಂದು ತಿಳಿಸಿದ್ದಾರೆ. “ಲಾಕ್ ಡೌನ್ ಸಮಯದಲ್ಲಿ ಸಸ್ಯಗಳು ಮತ್ತು ತೋಟಗಳಲ್ಲಿ ಹುಲ್ಲನ್ನು ಸರಿಯಾಗಿ ಇಟ್ಟುಕೊಳ್ಳುವ ಜವಾಬ್ದಾರಿಯನ್ನು ನನಗೆ ನೀಡಲಾಗಿದೆ. ಆದರೆ ತಮಾಷೆಯೆಂದರೆ, ನಾನು ಮೂರು ದಿನಗಳಿಂದ ಹುಲ್ಲಿಗೆ ನೀರುಣಿಸುತ್ತಿದ್ದೇನೆ ಆದರೆ ಇನ್ನೂ ಅದು ಬೆಳೆಯುತ್ತಿಲ್ಲ” ಎಂದು ಬಿಡುವಿನ ವೇಳೆಯಲ್ಲಿ ಮಾಡುತ್ತಿರುವ ಕೆಲಸದ ಬಗ್ಗೆ ಗೌತಿ ಮಾತನಾಡಿದ್ದಾರೆ.