ಲೋಕದರ್ಶನ ವರದಿ
ರಾಯಬಾಗ 25: ಪ.ಜಾತಿ ಕಾಲಿನಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಬೇಕೆಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು. ಶುಕ್ರವಾರ ತಾಲೂಕಿನ ಭಿರಡಿ ಗ್ರಾಮದ ಮಾತಂಗಿಗಲ್ಲಿ ಮತ್ತು ಅಂಬೇಡ್ಕರ್ ಗಲ್ಲಿಗಳಲ್ಲಿ ಜಿ.ಪಂ. ಇಲಾಖೆಯ ಮಾದರಿ ಗ್ರಾಮ ಯೋಜನೆಯಡಿ ರೂ.75 ಲಕ್ಷರೂ ವೆಚ್ಚದಲ್ಲಿ ಪ್ಲೇವರ್ ಬ್ಲಾಕ್, ಸಿಸಿ ರಸ್ತೆ, ಚರಂಡಿ, ಹೈಮಾಸ್ ವಿದ್ಯುತ್ ಬಲ್ಬ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮದಲ್ಲಿ ಪ್ರವಾಹ ಮತ್ತು ಮಳೆಯಿಂದ ಅಪಾರ ಹಾನಿಯಾಗಿದ್ದು, ಸಂತ್ರಸ್ತರಿಗೆ ಸರಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಯತ್ನಿಸುವುದಾಗಿ ಹೇಳಿದರು. ತಾ.ಪಂ.ಸದಸ್ಯ ಶ್ರೀಧರ ಕುಡಚೆ, ಮಹಾದೇವ ಬೊರಗಾಂವೆ, ಸದಾನಂದ ಹಳಿಂಗಳಿ, ಸದಾಶಿವ ಘೋರ್ಪಡೆ, ರಾಮು ನಿಶಾನಂದಾರ, ಗ್ರಾ.ಪಂ.ಅಧ್ಯಕ್ಷ ಮುರಘೇಂದ್ರ ನಿಶಾನಂದಾರ, ಸುಭಾಷ ನಡೋಣಿ, ಬಸವರಾಜ ಮೇತ್ರಿ, ಕೆಂಪಣ್ಣ ಮೈಶಾಳೆ, ಸುಭಾಷ ಬನಗೆ, ಕಲ್ಮೇಶ ನಡವಣಿ, ನಿಂಗಣ್ಣ ಮಿರ್ಜೆ, ಶಿವು ಮಗದುಮ್ಮ ಸೇರಿದಂತೆಗ್ರಾಮಸ್ಥರು ಉಪಸ್ಥಿತರಿದ್ದರು.