ಎಲ್ಲರೂ ಕೂಡಿ ಬಾಳುವ, ಚಿಂತನೆ ಸಹಕಾರಿ ಕ್ಷೇತ್ರದಲ್ಲಿರಬೇಕು:ಕುಲಕರ್ಣಿ

ಧಾರವಾಡ : ``ವ್ಯಕ್ತಿಗಾಗಿ ಸಮಾಜ-ಸಮಾಜಕ್ಕಾಗಿ ವ್ಯಕ್ತಿ'' ``ನಾವು ನಿಮಗಾಗಿ-ನೀವು ನಮಗಾಗಿ'' ಇವು ಸಹಕಾರಿ ತತ್ವಗಳ ಮೂಲಮಂತ್ರಗಳಾಗಿದ್ದು, ಎಲ್ಲರೂ ಕೂಡಿ ಬಾಳುವ, ಬೆಳೆಯುವ, ಬೆಳೆಸುವ ಉದಾತ್ತ ಚಿಂತನೆ ಸಹಕಾರಿ ಕ್ಷೇತ್ರದಲ್ಲಿರಬೇಕು, ಧಾರವಾಡ ಜಿಲ್ಲೆಯನ್ನು ಭಾರತದ ಸಹಕಾರಿ ಚಳುವಳಿಯ ತೊಟ್ಟಿಲು ಎಂದು ಕರದಿರುವುದು ಔಚಿತ್ಯಪೂರ್ಣವಾಗಿದೆ ಎಂದು ಸಹಕಾರಿ ಸಂಘಗಳ ಅಪರ್ ನಿಬಂಧಕರಾದ ಶಿವಾ ಕುಲಕಣರ್ಿ ಹೇಳಿದರು.

   ನಗರದ ಕನರ್ಾಟಕ ವಿದ್ಯಾವರ್ಧಕ ಸಂಘವು ದಿ. ಎಸ್. ಎಂ. ಹೊಳೆಯಣ್ಣವರ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ``ಸಹಕಾರ-ಪ್ರಸ್ತುತತೆ'' ವಿಷಯದ ಕುರಿತು ಅವರು ಮಾತನಾಡಿ, ಬಹುಜನ ಸುಖಾಯ, ಬಹುಜನ ಹಿತಾಯವು ಸಹಕಾರದ ಬೀಜಮಂತ್ರ. ಭಾರತದ ಸಂಸ್ಕೃತಿಯ ಧ್ಯೇಯವಾದ ಸವರ್ೇಜನ ಸುಖಿನೋಭವಂತು ಎಂಬುದು ನಮ್ಮ ಪ್ರಾಚೀನ ಭಾರತದಲ್ಲಿ ಸಹಕಾರದ ಪರಿಕಲ್ಪನೆ ಇತ್ತು ಎಂಬುದಕ್ಕೆ ಸ್ಪಷ್ಟತೆ ಇದೆ. ನಂದಿನಿ ಹಾಲು ಮತ್ತು ಹಾಲಿನ ಉತ್ಪಾದನೆ ಮತ್ತು ರೈತರ ಬಾಳಿನ ಆಶಾಕಿರಣವಾದ ಇಪ್ಕೋ ರಸಾಯನಿಕ ಗೊಬ್ಬರಗಳು ಸಹಕಾರಿ ಕ್ಷೇತ್ರದ ಅದ್ಭುತ ಕೊಡುಗೆಗಳಾಗಿವೆ ಎಂದು ಸ್ಮರಿಸಿದರು. 

ಸಹಕಾರ ಕ್ಷೇತ್ರದಲ್ಲಿ ಲಾಭಕ್ಕಿಂತ ಸೇವೆ ಮುಖ್ಯ. ಇದು ಪ್ರಜಾತಾಂತ್ರಿಕ ವ್ಯವಸ್ಥೆ ಹೊಂದಿದ್ದರಿಂದ ಬಂದ ಲಾಭವು ಎಲ್ಲರಿಗೂ ಸಮನಾಗಿ ಹಂಚಿಕೆಯಾಗುತ್ತದೆ. ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಸಹಕಾರವು ನಮಗೊಂದು ಆಶಾಕಿರಣವಾಗಿದೆ ಎಂದರು.

   ಪ್ರಪಂಚದಲ್ಲಿ 1844 ರಲ್ಲಿ ಇಂಗ್ಲೆಂಡಿನಲ್ಲಿ ರಾಬರ್ಟ ಓನೆನ್ ಮೊದಲ ಸಹಕಾರಿ ಸಂಘ ಸ್ಥಾಪಿಸಿದರೆ, 1905 ರಲ್ಲಿ  ಭಾರತದಲ್ಲಿ ಪ್ರಥಮ ಸಹಕಾರ ಸಂಘವನ್ನು ಸಿದ್ಧನಗೌಡ್ರು ಪಾಟೀಲ ಎಂಬುವವರು ಅವಿಭಜಿತ ಧಾರವಾಡ ಜಿಲ್ಲೆ ಕಣಗಿನಹಾಳದಲ್ಲಿ  ಸ್ಥಾಪಿಸಿ ರೈತರ ಪಾಲಿಗೆ ಸಂಜೀವಿನಿಯಾದರು ಎಂದರು. 

 ಕುಮಾರೇಶ್ವರ ಗೃಹ ನಿಮರ್ಾಣ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷರಾದ ಪ್ರೊ. ಎಸ್. ಎಸ್. ದೇಸಾಯಿ ಮಾತನಾಡಿ, ವ್ಯಕ್ತಿಗೆ ಒಂದು ಮುಖವಾದರೆ ವ್ಯಕ್ತಿತ್ವಕ್ಕೆ ಹಲವು ಮುಖಗಳು. ದಿ. ಎಸ್. ಎಂ. ಹೊಳೆಯಣ್ಣವರ ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ಅವರು ಭವಿಷ್ಯಕ್ಕೊಂದು ಭರವಸೆಯ ವ್ಯಕ್ತಿಗಳಾಗಿದ್ದರು, ನೊಂದವರಿಗೆ-ಬೆಂದವರಿಗೆ  ಧ್ವನಿಯಾಗಿದ್ದರು. ಸಹಕಾರ ಎಂಬುವದು ವ್ಯವಹಾರಿಕ ಎಂಬ ಭಾವನೆ ಹೊಂದದೇ ಅದೊಂದು ಜೀವನ ವಿಧಾನ ಎಂದು ನಂಬಿ ನಡೆದವರಾಗಿದ್ದರು.

  ಸತತ ಪರಿಶ್ರಮ, ನಿಷ್ಠೆ, ಪ್ರಾಮಾಣಿಕತೆ, ಛಲ, ಆತ್ಮವಿಶ್ವಾಸ, ಸ್ವೀಕಾರ ಶೀಲತೆ, ಬದ್ಧತೆಗಳು ಅವರ ಬಹುಮುಖ ವ್ಯಕ್ತಿತ್ವಕ್ಕೆ ಸಾಕ್ಷಿ. ಅವರು ಸಹಕಾರಿ ರಂಗವನ್ನು ನಂಬಿದವರು, ಬದುಕಿದವರು, ಬೆಳೆಸಿದವರು. 55 ವರ್ಷಗಳ ತಮ್ಮ ಸಾರ್ಥಕ ಜೀವನದಲ್ಲಿ ಕುಮಾರೇಶ್ವರ ಗೃಹ ನಿಮರ್ಾಣ ಅಭಿವೃದ್ಧಿ ಸಂಘ ಹಾಗೂ ಮೃತ್ಯುಂಜಯ ಸಹಕಾರಿ ಬ್ಯಾಂಕಿಗೆ ಆಧಾರ ಸ್ತಂಭವಾಗಿ ಇಂದು ಎರಡೂ ಸಂಘಗಳು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವಲ್ಲಿ ಅವರ ದೂರದಶರ್ಿತ್ವ, ಶ್ರಮ ಮತ್ತು ತ್ಯಾಗ ಕಾರಣೀಭೂತವಾಗಿವೆ ಎಂದು ಹೇಳಿದರು. 

     ಕಾರ್ಯಕ್ರಮದಲ್ಲಿ ದಿ. ಎಸ್. ಎಂ. ಹೊಳೆಯಣ್ಣವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. 

   ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಜೂನ ತಿಂಗಳ ದತ್ತಿ ಕಾರ್ಯಕ್ರಮಗಳ ಸಂಯೋಜಕರಾದ ಶ್ರೀಮತಿ ವಿಶ್ವೇಶ್ವರಿ ಬ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.  ಜಯಶ್ರೀ ಗೌಳಿ ನಿರೂಪಿಸಿದರು. ಗಿರಿಜಾ ಹಿರೇಮಠ ವಂದಿಸಿದರು. 

  ಕಾರ್ಯಕ್ರಮದಲ್ಲಿ ಸಂಘದ ಕಾ. ಕಾ. ಸಮಿತಿ ಸದಸ್ಯರಾದ ಸತೀಶ ತುರಮರಿ, ಶಾಂತೇಶ ಗಾಮನಗಟ್ಟಿ, ಡಾ. ಪಾರ್ವತಿ ಸುರೇಶ ಹಾಲಭಾವಿ ದಂಪತಿಗಳು, ವೀರಣ್ಣ ಒಡ್ಡೀನ, ಬಸವರಾಜ ತಾಳಿಕೋಟಿ, ಬಸಲಿಂಗಯ್ಯ ಹಿರೇಮಠ ಜಿ. ಬಿ. ಹೊಂಬಳ, ಬಿ. ಕೆ. ಹೊಂಗಲ, ಶಿ. ಮ. ರಾಚಯ್ಯನವರ, ಪ್ರೊ. ಹರ್ಷ ಡಂಬಳ, ಡಾ. ವಿಶ್ವನಾಥ ಚಿಂತಾಮಣಿ ಹಾಗೂ ಕುಮಾರೇಶ್ವರ ಗೃಹ ನಿಮರ್ಾಣ ಅಭಿವೃದ್ಧಿ ಸಂಘದ ನಿದರ್ೇಶಕರಾದ ವ್ಹಿ. ಬಿ. ಪಾಟೀಲ, ಎಸ್. ಬಿ. ಹೂಗಾರ, ಬಿ. ಬಿ. ಭೂಮನಗೌಡರ, ಪರಪ್ಪ ಕುಸುಗಲ್ಲ, ವ್ಹಿ. ಬಿ. ಗೋಲಣ್ಣವರ, ಗದಿಗೆಪ್ಪ ಜಕ್ಕಣ್ಣವರ, ಆರ್. ವ್ಹಿ. ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.