ಬೆಳಗಾವಿ 23: ಪ್ರತಿಯೊಬ್ಬರು ಅತಿಥಿಗಳ ಸೇವೆ, ಅಧ್ಯಯನ ಮಾಡುವ ಹುಮ್ಮಸು ಹಾಗೂ ದಾನ ಮಾಡುವ ಮನಸ್ಸು ಹೊಂದಿದಾಗ ಮಾತ್ರಒಬ್ಬ ಒಳ್ಳೆಯ ಗ್ರೃಹಸ್ಥರಾಗಿರಲು ಸಾಧ್ಯ ಎಂದು ನಾಗನೂರು ರುದ್ರಾಕ್ಷಿಮಠದ ಡಾ. ಸಿದ್ಧರಾಮ ಸ್ವಾಮೀಜಿವರು ಹೇಳಿದರು.
ನಗರದ ಕನ್ನಡ ಸಾಹಿತ್ಯ ಭನದಲ್ಲಿ ಭಾನುವಾರ 22ರಂದು ಶಿವಯೋಗಿ ಗು. ಕುಸುಗಲ್ಲ ಅವರ ಬದುಕು-ಬರಹ ವಿಚಾರ ಸಂಕಿರಣ ಹಾಗೂ `ಬೆಳಗು' ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶರ್ಿವಚನ ನೀಡಿದರು.
ಉತ್ತಮವಾದ ಗೃಹಸ್ಥರು ಒಂದು ಒಳ್ಳೆಯ ಸಮಾಜ ನಿಮರ್ಾಣಕ್ಕೆ ಸಹಾಯ ಆಗುತ್ತಾರೆ. ಅಂತಹ ಒಳ್ಳೆಯ ಸಂಸ್ಕೃತಿಯುಳ್ಳ ಹಾಗೂ ಶಿಸ್ತು, ಸೌಜನ್ಯದ ಸಹಕಾರ ಮೂತರ್ಿ ಶಿವಯೋಗಿ ಗು. ಕುಸುಗಲ್ಲ ಅವರು ಒಳ್ಳೆಯ ಗೃಹಸ್ಥರಿಗೆ ಉದಾಹರಣೆಯಾಗಿದ್ದರೆ.
ಒಬ್ಬ ಮನುಷ್ಯ ಎಷ್ಟು ವರ್ಷ ಬದುಕುತ್ತಾನೆ ಎಂಬುವುದಕ್ಕಿಂತ ಅವನು ಬದುಕಿದಾಗ ಸಮಾಜಕ್ಕಾಗಿ ಏನು ಉತ್ತಮವಾದ ಕೆಲಸ ಮಾಡಿದ್ದಾನೆ ಎಂಬುವುದು ಮುಖ್ಯವಾಗಿರುತ್ತದೆ. ಶಿವಯೋಗಿ ಗು. ಕುಸುಗಲ್ಲ ಅವರು ಸಮಾಜದ ಸ್ವಾಸ್ತ್ಯವನ್ನು ಕಾಪಾಡುವಲ್ಲಿ ಪ್ರಮುಖರಾಗಿದ್ದಾರೆ.
ಕುಸುಗಲ್ಲ ಬರೆದ ಬೆಳಗು ಕೃತಿಯಲ್ಲಿ ಸಮಾಜ, ಮಹಿಳೆಯರು, ವಾಲ್ಮೀಕಿ ಸಮಾಜ, ಮಠಗಳ ಬಗ್ಗೆ ಸೇರಿದಂತೆ ಸಹ ವಿವರವಾಗಿ ಸರಳ ಭಾಷೆಯಲ್ಲಿ ಓದುಗರ ಮನಮುಟ್ಟುವಂತೆ ಕೃತಿಯನ್ನು ರಚನೆ ಮಾಡಿದ್ದಾರೆ ಎಂದರು.
ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ಮನೆಯಲ್ಲಿ ಟಿ.ವಿ ಇರಬಾರದು. ಇದರಿಂದ ಎಷ್ಟೋ ಸಂಸಾರಗಳು ದೂರವಾಗುತ್ತವೆ ಎಂದು ಕಿವಿ ಮಾತು ಹೇಳಿದರು.
ಶಿವಯೋಗಿ ಗು. ಕುಸುಗಲ್ಲ ಅವರು 70 ವಯಸ್ಸಿನಲ್ಲಿಯೂ 20ರ ಹರಯದ್ದಂತೆ ಕಾಣುತ್ತಿದ್ದಾರೆ. ದೇವರು ಇನ್ನು ಹೆಚ್ಚಿನ ಆಯುಷ ನೀಡಲಿ ಎಂದು ಆಶರ್ಿವಾದ ಮಾಡಿದರು.
ಸಾಹಿತಿ ಸುನಂದಾ ಎಮ್ಮಿ ಮಾತನಾಡಿ ಹಿರಿಯರನ್ನು ಗೌರವಿಸುವುದು ಮಾನವೀಯ ಧರ್ಮವಾಗಿದೆ. ಸಾಹಿತಿ ಬರೆದ ಕಾವ್ಯದಲ್ಲಿ, ಸಾಹಿತ್ಯದ ಜೊತೆಗೆ ಕವಿಯ ಆತ್ಮವಿರುತ್ತದೆ. ಶಿವಯೋಗಿ ಗು. ಕುಸುಗಲ್ಲ ಅವರು ರಚಿಸಿದ ಬೆಳಗು ಕೃತಿಯಲ್ಲಿ ಅಂತಹ ಅಂಶಗಳಿವೆ. 21 ಅಧ್ಯಯನಗಳಲ್ಲಿ ನಾಡು, ನುಡಿ, ಸಂಸ್ಕೃತಿ, ಜಾನಪದ, ಮಹಿಳೆಯರ ಬಗ್ಗೆ ಹಾಗೂ ನಾಯಕ ಜನಾಂಗ ಗಟ್ಟಿಗ ಜನಾಂಗ, ಕನ್ಯಾದಾನದ ಬಗ್ಗೆ ಹೀಗೆ ಹಲವು ವಿಷಯವನ್ನು ಅಚ್ಚಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಕೃತಿ ಪರಿಚಯವನ್ನು ಮಾಡಿಕೊಟ್ಟರು.
ಹಿರಿಯ ಸಾಹಿತಿ ಡಾ. ಚಂದ್ರಕಾಂತ ಕುಸನೂರ ಕೃತಿ ಬಿಡುಗಡೆ ಮಾಡಿ ಮಾತನಾಡಿದವರು ಸದ್ಯದ ದಿನಗಳಲ್ಲಿ ಸಾಹಿತ್ಯದಲ್ಲಿ ಜನರ ಆಸಕ್ತಿ ಕಡಿಮೆ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಟಿ.ವಿ, ಮೊಬೈಲ್ ಬಂದ ಮೇಲೆ ಜನರ ಬೇರೆ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಿವಯೋಗಿ ಗು. ಕುಸುಗಲ್ಲ ಅವರು ಬೆಳೆಯುತ್ತಿರುವುದು ಒಳ್ಳೆಯ ಸಂಗತಿ. ಅವರ ಬರಹ ಓದುಗರಿಗೆ ಖುಷಿಯನ್ನು ತರುವುದರಲ್ಲಿ ಎರಡು ಮಾತಿಲ್ಲ ಎಂದರು.
ಕೃತಿಕಾರ ಕುಸುಗಲ್ಲ ಮಾತನಾಡಿ ಶಿಕ್ಷಣಗಿಂತ ಸಂಸ್ಕಾರ ಮುಖ್ಯವಾಗಿದೆ. ನಾವು ಎಷ್ಟೇ ಬೆಳೆದರು ಬೆಳೆಸಿದವರನ್ನು ಮರೆಬಾರದು. ತಮ್ಮ ಕೃತಿ ರಚನೆ ಮಾಡಲು ಸಹಕರಿಸಿದವರಿಗೆ ಧನ್ಯವಾದ ತಿಳಿಸಿದರು.
ಹಿರಿಯ ಸಾಹಿತಿ ಜಿನದತ್ತ ದೇಸಾಯಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಾಹಿತಿ ಎಮ್. ಎಸ್. ಇಂಚಲ ಮಾತನಾಡಿದರು.
ಕುಸುಗಲ್ಲ ಅವರ ಅಳಿಯ ಡಾ. ವೀರಣ್ಣ, ಡಾ. ಕವಿತ ಪ್ರಸ್ತಾವಿಕವಾಗಿ ಮಾತನಾಡಿದರು.
ಹಿರಿಯ ಸಾಹಿತಿಗಳಾದ ಗುರುದೇವಿ ಹುಲೆಪ್ಪನವರಮಠ, ಎಲ್.ಎಸ್. ಶಾಸ್ತ್ರಿ, ಎಚ್.ಐ. ತಿಮ್ಮಾಪುರ, ಗಂಗಾದೇವಿ, ರವಿಕುಮಾರ, ಆನಂದ, ಡಾ.ಪಲ್ಲವಿ, ಸಂಗೀತಾ, ಮಂಜುಳಾ ಸೇರಿದಂತೆ ಇತರರು ಉಪಸ್ಥಿತರಿದರು.