ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು: ಬಸಪ್ಪನವರ

ರಾಣೇಬೆನ್ನೂರು24:   ಜಾಗತಿಕ ತಾಪಮಾನದಲ್ಲಿ ಏರುಪೇರುಗಳಿಗೆ ಕಡಿವಾಣ ಹಾಕಬೇಕಾದರೆ ಪ್ರತಿಯೊಬ್ಬರು ಗಿಡಗಳನ್ನು ಸಂರಕ್ಷಿಸುವುದರ ಜೋತೆಗೆ ಹೆಚ್ಚು ಗಿಡಗಳನ್ನು ನೆಡುವುದು ಅನಿವಾರ್ಯವಾಗಿದೆ ಮತ್ತು ನಮ್ಮೆಲ್ಲರ ಜವಬ್ದಾರಿಯೂ ಸಹ ಆಗಿದೆ ಎಂದು ಬಿಎಜೆಎಸ್ಎಸ್ಸ ಪ್ರಥಮ ದಜರ್ೆ ಕಾಲೇಜು ಪ್ರಾಚಾರ್ಯ ಪ್ರಕಾಶ ಬಸಪ್ಪನವರ ಹೇಳಿದರು. 

ಅವರು ಬುಧವಾರ ಕಾಲೇಜು ಅವರಣದಲ್ಲಿ ಎನ್ಎಸ್ಎಸ್ ಘಟಕ-1 ಮತ್ತು 2 ಸಂಯುಕ್ತವಾಗಿ ಆಯೋಜಿಸಿದ್ದ, ಸಸಿ ನೆಡುವ ಕಾರ್ಯಕ್ರಮಕ್ಕೆ ನೀರೆರೆದು ಚಾಲನೆ ನೀಡಿ ಮಾತನಾಡಿದರು. 

ವಿದ್ಯಾಥರ್ಿಗಳು ಸ್ವಯಂ ಪ್ರೇರಿತರಾಗಿ ಪ್ರತಿಯೊಬ್ಬರು ಸಸಿಗಳನ್ನು ನಿಮ್ಮ ಗ್ರಾಮಗಳಲ್ಲಿ ಹೆಚ್ಚಾಗಿ ಸಸಿಗಳನ್ನು ನೆಡಬೇಕು. 

       ಅಷ್ಟೇ ಅಲ್ಲದೇ ಅವುಗಳನ್ನು ತಮ್ಮ ಮಕ್ಕಳಂತೆ ಪೋಷಿಸಿ ಬೆಳೆಸಬೇಕು ಅಂದಾಗ ಮಾತ್ರ ಪರಿಸರದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುವುದು.  ಇಂದೇ ಜಾಗೃತರಾಗಬೇಕು ಎಂದು ಕರೆನೀಡಿದರು. 

ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಅಧಿಕಾರಿಗಳಾದ ರವೀಂದ್ರಕುಮಾರ ಬಣಕಾರ ವಿದ್ಯಾಥರ್ಿಗಳನ್ನು ಉದ್ದೇಶಿಸಿ 

ಬೆಣ್ಣಿ,  ಉಪನ್ಯಾಸಕರಾದ ಪ್ರೊ|| ಲಕ್ಷ್ಮಣ ಗುಡಿಗೇರಿ, ಪ್ರೊ|| ಸುಮನ್, ಪ್ರೊ|| ಸುದಾ ಕೊಪ್ಪದ, ಪ್ರೊ|| ಎಮ್. ಡಿ. ಹೊನ್ನಮ್ಮನವರ ಸೇರಿದಂತೆ ಕಾಲೇಜು ಸಿಬ್ಬಂದಿಗಳು, ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.