ಲೋಕದರ್ಶನ ವರದಿ
ಬೆಳಗಾವಿ 11: ನಗರದ ಪ್ರತಿಷ್ಠಿತ ಕೆ.ಎಲ್.ಇ ಸಂಸ್ಥೆಯ ರಾಜಾ ಲಖಮಗೌಡ (ಸ್ವಾಯತ್ತ) ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಿಶೇಷ ವಾಷರ್ಿಕ ಶಿಬಿರದ ಮೂರನೆ ದಿನದ ಕಾರ್ಯಕ್ರಮ ದತ್ತು ಗ್ರಾಮವಾದ ಮಾರೀಹಾಳ ಗ್ರಾಮದಲ್ಲಿ ದಿ. 07ರಂದು ಆಯೋಜಿಸಲಾಗಿತ್ತು.
"ಮಳೆ ನೀರಿನ ಸಂಗ್ರಹ ಮತ್ತು ಪುನರಬಳಕೆ" ಗೋಷ್ಠಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್.ಎಲ್.ಎಸ್. ಕಾಲೇಜಿನ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಆರ್.ಆರ್. ವಡಗಾವಿ, ಅವರು ಮಾತನಾಡುತ್ತಾ, ಈ ಶಿಬಿರದಿಂದ ಗ್ರಾಮವು ಸ್ವಚ್ಛಗೊಳ್ಳವುದು ಅಲ್ಲದೇ ನಿಮ್ಮ ಕಾರ್ಯಗಳನ್ನು ಊರಿನ ಜನರು ನೋಡಿ, ಅವರೂ ಸಹ ಜಾಗೃತಗೊಂಡು ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛಂದವಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ನಾವು ನಮ್ಮನ್ನು ಯಾವುದಾದರೂ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ನೀರಿನ ಅಭಾವದಿಂದ ಎಷ್ಟೋ ಹೋರಾಟಗಳು ನಡೆದಿವೆ. ಈಗಲೇ ಎಚ್ಚೆತ್ತುಕೊಳ್ಳಲಿಲ್ಲವೆಂದರೇ ಈ ಹೋರಾಟಗಳು ಸಂಭವಿಸುತ್ತವೆ. ಅದಕ್ಕಾಗಿ ಪ್ರತಿಯೊಬ್ಬರು ಮಳೆನೀರು ಕೊಯ್ಲು ಪದ್ಧತಿಯನ್ನು ಪಾಲಿಸಬೇಕು. ಇದರಿಂದ ಮಳೆ ನೀರನ್ನು, ಹೊಳೆ ಸಮುದ್ರಗಳಿಗೆ ಸೇರುವ ಬದಲು ನಮ್ಮ ದಿನನಿತ್ಯದ ಉಪಯೋಗಕ್ಕಾಗಿ ಶೇಖರಣೆ ಮಾಡಬೇಕೆಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾರಿಹಾಳ ಗ್ರಾಮ ಪಂಚಾಯತಿ ಸದಸ್ಯರಾದ ಭೀಮವ್ವಾ ಜಿ. ಹನ್ನೂರ ಮಾತನಾಡುತ್ತಾ, ಎಲ್ಲಾ ಶಿಬಿರಾಥರ್ಿಗಳಿಗೆ ಊರಿನವರು ಸದಾಕಾಲ ಸ್ಪಂದಿಸುತ್ತಾರೆ. ತಾವು ಒಳ್ಳೇಯ ಕಾರ್ಯಗಳನ್ನು ಮಾಡಬೇಕೆಂದು ಹೇಳಿದರು.
ಕೀತರ್ಿ ಹಾಗೂ ಸಂಗಡಿಗರು ಎನ್.ಎಸ್.ಎಸ್. ಗೀತೆಹಾಡಿದರು. ಕುಮಾರ. ಬಸವರಾಜ ಸ್ವಾಗತಿಸಿದರು. ಪೂಜಾ ವಂದಿಸಿದರು. ಸೌಮ್ಯಾ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿದರು.ಈ ಸಮಾರಂಭದಲ್ಲಿ ಎನ್.ಎಸ್.ಎಸ್. ಸಂಯೋಜನಾಧಿಕಾರಿಗಳಾದ ಪ್ರೊ. ಎಸ್.ಎಸ್. ಅಬ್ಬಾಯಿ ಹಾಗೂ ಗ್ರಾಮದ ನಾಗರಿಕರು ಮತ್ತು ಶಿಬಿರದ ಸ್ವಯಂ ಸೇವಕರು ಉಪಸ್ಥಿತರಿದ್ದರು. ಉಪಸ್ಥಿತರಿದ್ದರು.