ಸ್ವಚ್ಛತೆ ಕಾಪಾಡುವಲ್ಲಿ ಪ್ರತಿಯೊಬ್ಬರು ಭಾಗಿಗಳಾಗಿ: ಪುರೋಹಿತ

ಧಾರವಾಡ 29: ಸ್ವಚ್ಛತೆ ಕಾಪಾಡುವಲ್ಲಿ ಪ್ರತಿಯೊಬ್ಬರು ಭಾಗಿಗಳಾಗಿ ದೇಶಕ್ಕೆ  ಅಳಿಲು ಸೇವೆ ಮಾಡಬೇಕಿದೆ ಎಂದು ಕೆ ಇ ಬೋರ್ಡ ಕಾಲೇಜು ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷ ಡಾ ಸುನಿತ ಪುರೋಹಿತ ತಿಳಿಸಿದರು.

ಭಾರತ ಸರಕಾರದ ಕ್ಷೇತ್ರ ಜನಸಂಪರ್ಕ ಕಾಯರ್ಾಲಯ, ಧಾರವಾಡ ಮತ್ತು ವಿಜಯಪುರ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಕೆ ಇ ಬೋಡರ್ಿನ ಪ್ರಥಮ ದಜರ್ೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಪದವಿ ಪೂರ್ವ ಮಹಾವಿದ್ಯಾಲಯ, ಭಗೀರಥ ಸಂಸ್ಥೆ ಇವರುಗಳ ಸಂಯುಕ್ತ್ತ ಆಶ್ರಯದಲ್ಲಿ ದಿ. 28ರಂದು ಕೆ.ಇ.ಬೋಡರ್ಿನ ಪ್ರಥಮದಜರ್ೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛ ಭಾರತ ಮಿಷನ್ (ನಗರ) ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕರು ಸ್ವಪ್ರೇರಣೆಯಿಂದ ಸ್ವಚ್ಛತೆಯಲ್ಲಿ ತೊಡಗಿಕೊಂಡು  ಸ್ವಚ್ಛ ಭಾರತ ಮಿಷನ್ ಯಶಸ್ವಿಯಾಗಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ವಾತರ್ಾ ಮತ್ತು ಪ್ರಸಾರ ಸಚಿವಾಲಯದ ಪ್ರಾದೇಶಿಕ ಕ್ಷೇತ್ರ ಜನಸಂಪರ್ಕ ಕಾಯರ್ಾಲಯ ಬೆಂಗಳೂರಿನ ನಿದರ್ೇಶಕ ನತಾಶ ಎಸ್. ಡಿಸೋಜಾ ಮಾತನಾಡಿ ವಿಶೇಷವಾಗಿ ಶಾಲಾ ಮತ್ತು ಕಾಲೇಜಿನ ವಿದ್ಯಾಥರ್ಿಗಳು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು. ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸ್ವಪ್ರರೇರಣೆಯಿಂದ ಸ್ವಚ್ಛತೆಯನ್ನು ಕೈಗೊಂಡಲ್ಲಿ ಇತರೆ ಸಾಮಾನ್ಯ ಮಂದಿಯೂ ನಿಮ್ಮನ್ನು ಹಿಂಬಾಲಿಸುವುದರಲ್ಲಿ ಅನುಮಾನವಿಲ್ಲ ಎಂದರು.

ಅವರು ಕಾರ್ಯಕ್ರಮದಲ್ಲಿ ನೆರೆೆದಿದ್ದವರಿಗೆ ಸ್ವಚ್ಛತೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪರಿಸರ ಅಭಿಯಂತರರಾದ ಸಂತೋಷ್ ಯರಂಗಳಿ ಮಾತನಾಡಿ ಪ್ಲಾಸ್ಟಿಕ್ ಉತ್ಪಾದನಾ ಉದ್ದಿಮೆಗಳನ್ನು ರಾಜ್ಯದಲ್ಲಿ ಬಂದ್ ಮಾಡಲಾಗಿದೆ. ಆದರೆ ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಪ್ಲಾಸ್ಟಿಕ್ ಚೀಲಗಳು ರಾಜ್ಯಕ್ಕೆ ಬರುತ್ತಿವೆ. ಆದ್ದರಿಂದ ಜನರೇ ಮನಸ್ಸು ಮಾಡಿ ಪ್ಲಾಸ್ಟಿಕ್ ಚೀಲ ಮತ್ತು ಒಮ್ಮೆ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸುವುದನ್ನು ಬಿಟ್ಟುಬಿಡಬೇಕು ಎಂದು ಮನವಿ ಮಾಡಿದರು.

ಭಗೀರಥ ಸಂಸ್ಥೆ, ಧಾರವಾಡದ ಮುಖ್ಯಸ್ಥೆ ನಿವೇದಿತಾ ದೀಕ್ಷಿತ್ ಪ್ರಾತ್ಯಕ್ಷಿಕೆ ಮೂಲಕ ಹಸಿ ಮತ್ತು ಒಣ ಕಸ ವಿಂಗಡನೆಯನ್ನು ವಿದ್ಯಾಥರ್ಿಗಳಿಗೆ ತೋರಿಸಿಕೊಟ್ಟು, ಈ ವಿಧಾನವನ್ನು ತಮ್ಮ ಸುತ್ತಮುತ್ತಲಿನ ಮಂದಿಗೆ ಪ್ರಚಾರಗೊಳಿಸಲು ಉತ್ತೇಜಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಪ್ರಚಾರ ಅಧಿಕಾರಿ ಜಿ ತುಕಾರಾಮಗೌಡ ಅವರು, ಪ್ಲಾಸ್ಟಿಕ್ ಮುಕ್ತ ನಗರ ನಿಮರ್ಾಣ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ಕೇಂದ್ರ ಸಕರ್ಾರ ಹಮ್ಮಿಕೊಂಡ ವಿವಿಧ ಯೋಜನೆಗಳ ಸಮಗ್ರ ಪರಿಚಯ ನೀಡಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ಕೆ ಎಸ್ ಹಂಚಿನಮನಿ ಮಾತನಾಡಿದರು. ಕೆ ಇ ಬೋಡರ್ಿನ ಪ್ರಥಮ ದಜರ್ೆ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಪ್ರೋ.ಮೋಹನ್ ಸಿದ್ಧಾಂತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಪೂರ್ವಭಾವಿಯಾಗಿ ಕಾಲೇಜಿನ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ಎನ್ಎಸ್ಎಸ್ ಸ್ವಯಂ ಸೇವಕರಿಗೆ "ಕಸದಿಂದ ರಸ"ಶಿಷರ್ಿಕೆಯಡಿಯಲ್ಲಿ ಮಾದರಿ ತಯಾರಿಕೆ ಹಾಗೂ ಚಿತ್ರಕಲೆ ಸ್ಪಧರ್ೆ ನಡೆಸಿ ಬಹುಮಾನ ವಿತರಿಸಲಾಯಿತು.

ಸಿ ಕೆ ಸುರೇಶ್ ಸ್ವಾಗತಿಸಿದರು. ಮುರುಳಿಧರ ಕಾರಬಾರಿ ನಿರೂಪಿಸಿದರು. ಈಶ್ವರ್ ಕರಾಟ್ ವಂದಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿದ್ಯಾಥರ್ಿಗಳು  ನಗರದಲ್ಲಿ ಸ್ವಚ್ಛತೆ ಕುರಿತು ಜಾಥಾ ನಡೆಸಿದರು.