ಪ್ರತಿಯೊಬ್ಬರಿಗೆ ಆರೋಗ್ಯ ಸೇವೆಗಳನ್ನು ಪಡೆಯುವ ಹಕ್ಕುಗಳಿವೆ: ಟಿ. ಶ್ರೀನಿವಾಸ್

ಕೊಪ್ಪಳ 09: ಈ ಸಮಾಜದಲ್ಲಿ ಬದುಕಲು ಪ್ರತಿಯೊಬ್ಬರಿಗೆ ಆರೋಗ್ಯ ಸೇವೆಗಳನ್ನು ಪಡೆಯುವ ಹಕ್ಕುಗಳು ಇರುತ್ತವೆ. ಇವುಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದಶರ್ಿ ಟಿ. ಶ್ರೀನಿವಾಸ್ ರವರು ಹೇಳಿದರು.  

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ನಗರಸಭೆ ಇವರ ಸಹಯೋಗದಲ್ಲಿ ನಗರದ ಹಮಾಲರ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಇಂದು (ಸೆ.09) ಹಮ್ಮಿಕೊಳ್ಳಲಾದ ''ಪೋಷಣಾ ಅಭಿಯಾನ'' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತ ಹಳ್ಳಿಗಳ ದೇಶ ಹಳ್ಳಿಗಳ ಅಭಿವೃದ್ಧಿ ದೇಶದ ಅಭಿವೃದ್ಧಿಯಾಗಿದೆ. ಹಳ್ಳಿಗಳಲ್ಲಿ ವಾಸಿಸುವ ಪ್ರತಿಯೊಬ್ಬರ ಆರೋಗ್ಯ ಹಾಗೂ ವಿಶೇಷವಾಗಿ ಗಭರ್ಿಣಿಯರು, ಕಿಶೋರಿಯರು ಹಾಗೂ 05 ವರ್ಷದೊಳಗಿನ ಮಕ್ಕಳ ಆರೊಗ್ಯ ಬಹಳ ಮುಖ್ಯವಾಗಿದೆ. ಸಮಾಜದಲ್ಲಿ ವಾಸಿಸುವ ಪ್ರತಿಯೊಬ್ಬರು ಆರೊಗ್ಯವಂತರಾಗಿರ ಬೇಕಾದರೆ ಪೌಷ್ಠಿಕ ಆಹಾರ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಜನಸಮುದಾಯಕ್ಕೆ ಪ್ರತಿದಿನ ಆಹಾರದಲ್ಲಿ ಕಾಬರ್ೊಹೈಡ್ರೆಟ್, ಪ್ರೋಟರ್ಿನ್, ಕೊಬ್ಬು, ವಿಟಮಿನ್ಸ್ ಮತ್ತು ಮಿನರಲ್ಸ್ ಎಲ್ಲಾ ಬಗೆಯ ಸೊಪ್ಪು ಮತ್ತು ಹಸಿರು ತರಕಾರಿಗಳು, ಹಣ್ಣುಗಳು ಮತ್ತು ಹಾಲಿನ ಉತ್ಪನ್ನಗಳು, ಮೊಟ್ಟೆ, ಮೀನು ಮುಂತಾದ ಆಹಾರ ಪದಾರ್ಥಗಳನ್ನು ಸೇವಿಸುವಂತೆ ಮಾಹಿತಿ ನೀಡಿದರು. ತಾಯಿಂದಿರಲ್ಲಿ, ಗಭರ್ಿಣಿಯರಲ್ಲಿ ಮತ್ತು ಮಕ್ಕಳಲ್ಲಿ ರಕ್ತ-ಹೀನತೆ ತಡೆಗಟ್ಟುವ ಸಲುವಾಗಿ ಪ್ರತಿದಿನ ಸ್ಥಳೀಯವಾಗಿ ದೊರಕುವ ಆಹಾರ ಪದಾರ್ಥಗಳನ್ನು ಬಳಸಿ ಅಪೌಷ್ಠಿಕತೆಯನ್ನು ತಡೆಗಟ್ಟಿಬೇಕು.  ಈ ಸಮಾಜದಲ್ಲಿ ಬದುಕಲು ಪ್ರತಿಯೊಬ್ಬರಿಗೆ ಆರೋಗ್ಯ ಸೇವೆಗಳನ್ನು ಪಡೆಯುವ ಹಕ್ಕುಗಳು ಇರುತ್ತವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದಶರ್ಿ ಟಿ. ಶ್ರೀನಿವಾಸರವರು ಹೇಳಿದರು.

ಕೊಪ್ಪಳ ನಗರ ಸಭೆ ಸದಸ್ಯ ಅಮಜದ್ ಪಟೇಲ್ ರವರು ಮಾತನಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಯವರು ಹಮ್ಮಿಕೊಳ್ಳುವ ಸಮಾಜಮುಖಿ ಕಾರ್ಯಕ್ರಮಗಳಿಗೆ ಕೊಪ್ಪಳ ನಗರ ಪ್ರದೇಶದ ಕೊಳಚೆ ಪ್ರದೇಶ ಜನರು ಹಾಗೂ ಇತರ ಪ್ರದೇಶದ ಸಾರ್ವಜನಿಕರು ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳುಬೇಕು ಎಂದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಿ ಜಂಬಯ್ಯ ಮಾತನಾಡಿ, ಸಮತೋಲನ ಆಹಾರ ಹೇಗೆ ಪಡೆಯಬೇಕು ವಿಟಮಿನ್ ಮತ್ತು  ಮಿನಿರಲ್ಸ್ನಲ್ಲಿ ಕೊಬ್ಬು, ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ಯಾವ ಯಾವ ಪೋಷ್ಠಿಕಾಂಶ ದೊರೆಯುತ್ತವೆ ವಿಶೇಷವಾಗಿ ರಕ್ತಹೀನತೆ ತಡೆಗಟ್ಟುವ ಆಹಾರವನ್ನು ಹೆಚ್ಚು ಸೇವಿಸುವಂತೆ ತಿಳಿಸಿದರು. ಈ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮದಲ್ಲಿ ವಿಶೇಷವಾಗಿ ''ಮಗುವಿನ ಜನನ ನಂತರ 1000 ದಿನಗಳ ಆರೋಗ್ಯ ರಕ್ಷಣೆ, ಅನಿಮಿಯಾ ಮುಕ್ತ ಭಾರತ್, ಅತಿಸಾರ ಬೇಧಿ ನಿಯಂತ್ರಣ, ನೀರು ಮತ್ತು ನೈರ್ಮಲ್ಯ ಸ್ವಚ್ಛತೆ, ಪೌಷ್ಠಿಕ ಆಹಾರ ಸೇವನೆ''. ಇವುಗಳಿಗೆ ಹೆಚ್ಚು ಮಹತ್ವ ನೀಡಿ ಕಾರ್ಯಕ್ರಮದ ಬಗ್ಗೆ ಆರೋಗ್ಯ ಸಹಾಯಕರು, ಆರೋಗ್ಯ ಶಿಕ್ಷಣಾಧಿಕಾರಿಗಳು, ಆಶಾ ಕಾರ್ಯಕತರ್ೆಯರು, ಅಂಗನವಾಡಿ ಸಹಾಯಕರು, ಸಮುದಾಯದ ಜನರಿಗೆ ಮನನ ಮಾಡಬೇಕು ಎಂದರು.

ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾತೃ ಪೂರ್ಣ ಯೋಜನೆ ಹಾಗೂ ಇಲಾಖೆಯ ಸೌಲಭ್ಯ ಕುರಿತು ಉಪ ನಿದರ್ೆಶಕ ಈರಣ್ಣ ಪಾಂಚಾಳ ರವರು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಕುಮಾರ ಎಸ್ ಯರಗಲ್ಲ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಲಿಂಗರಾಜು ಟಿ,  ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ತಾಲೂಕ ಆರೋಗ್ಯಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವೈಧ್ಯಾಧಿಕಾರಿಗಳು, ಆರೋಗ್ಯ ಶಿಕ್ಷಣಾಧಿಕಾರಿಗಳು, ಐ.ಸಿ.ಡಿ.ಎಸ್ ಇಲಾಖೆಯ ಮೇಲ್ವಿಚಾರಕರು, ಹಿರಿಯ, ಕಿರಿಯ ಆರೋಗ್ಯ ಸಹಾಯಕರು, ಆಶಾ, ಅಂಗನವಾಡಿ ಕಾರ್ಯಕತರ್ೆಯರು, ಗಭರ್ಿಣಿಯರು, ಕಿಶೋರಿಯರು, ತಾಯಂದಿರು, ಇಲಾಖೆಯ ಸಿಬ್ಬಂದಿಗಳು ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.