ಪ್ರತಿಯೊಬ್ಬರೂ ಸಂವಿಧಾನದ ಮೂಲ ತತ್ವಗಳನ್ನು ಪಾಲಿಸಿ: ಮುಜಾವರ

ಲೋಕದರ್ಶನವರದಿ

ಬ್ಯಾಡಗಿ28 : ಭಾರತಕ್ಕೆ ಸಂವಿಧಾನವು ಪವಿತ್ರ ಗ್ರಂಥವಾಗಿದ್ದು, ಸಂವಿಧಾನದ ಮೂಲ ತತ್ವಗಳಿಗೆ ಭಂಗವಾಗದಂತೆ ಪ್ರತಿಯೊಬ್ಬರೂ ಅದನ್ನು ಪಾಲಿಸಿ ಗೌರವಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಇಬ್ರಾಹಿಂ ಮುಜಾವರ ಹೇಳಿದರು. 

  ಸ್ಥಳೀಯ ನ್ಯಾಯಾಲಯದ ಸಭಾಭವನದಲ್ಲಿ 70 ನೇ, ಸಂವಿಧಾನದ ದಿನಾಚರಣೆಯ ಅಂಗವಾಗಿ ನಡೆದ ಕಾನೂನು ಜಾಗೃತಿ ಅಭಿಯಾನ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದೇಶದಲ್ಲಿ ವಿವಿಧ ಧರ್ಮಗಳಿಗೆ ಧರ್ಮ ಗ್ರಂಥಗಳಿ ರುವಂತೆ ಭಾರತಕ್ಕೆ ಸಂವಿಧಾನವು ಬಹು ಮುಖ್ಯ ಗ್ರಂಥವಾಗಿದೆ. 

  1949 ರ ನ. 26 ರಂದು ಡಾ. ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬ ಪ್ರಜೆಗೂ  ಮೂಲಭೂತ ಹಕ್ಕುಗಳು ಲಭ್ಯವಾಗಬೇಕು ಎನ್ನುವ ಸದುದ್ದೇಶದಿಂದ ರಚಿಸಿ ಜಾರಿಯಾಗಿರುವ ಸಂವಿಧಾನವು ಪವಿತ್ರ ಗ್ರಂಥ ವಾಗಿದ್ದು ದೇಶದ ಜನರ ನಾಡಿ ಮಿಡಿತವಾಗಿದೆ ಎಂದು ತಿಳಿಸಿದರು. 

   ಮುಖ್ಯ ಅತಿಥಿಯಾಗಿದ್ದ ಕಿರಿಯ ದಿವಾಣಿ ನ್ಯಾಯಾಧೀಶ ರಾಜೇಶ ಹೊಸಮನಿ ಮಾತನಾಡಿ, ಭಾರತ ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಅಗೌರವ ತೋರುವ, ಚ್ಯುತಿ ಬರುವಂತಹ ಹಾಗೂ ಸಂವಿಧಾನದ ಆಶಯಗಳನ್ನು ಧಿಕ್ಕರಿಸುವ ವಂತಹ ಕಾರ್ಯದಲ್ಲಿ  ತೊಡಗಬಾರದು. ಸಂವಿಧಾನವು ಸಾರ್ವಜನಿಕರ ಅಸ್ತಿಯಾಗಿದ್ದು ಅದರ ಮೌಲ್ಯಗಳನ್ನು ಪ್ರತಿಯೊಬ್ಬ ಪ್ರಜೆಯೂ ಗೌರವಿಸಿ ತಮ್ಮಲ್ಲಿ  ಅಳವಡಿಸಿಕೊಳ್ಳಬೇಕೆಂದು  ಹೇಳಿದರು. 

   ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪ್ರಕಾಶ ಬನ್ನಿಹಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಸಕರ್ಾರಿ ಅಭಿಯೋಜಕಿ ಸುನಂದಾ ಮಡಿವಾಳರ, ನ್ಯಾಯವಾದಿಗಳಾದ ಎಫ್. ಎಂ. ಮುಳಗುಂದ, ಸಿ. ಪಿ. ದೊಣ್ಣೆರ, ಆರ್. ವಿ. ಬೆಳಕೇರಿಮಠ, ಬಿ. ಎಸ್. ಚೂರಿ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.