ಕನ್ನಡ ಉಳಿಸಿ ಬೆಳೆಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ: ದೇಸಾಯಿ

ರಾಮದುರ್ಗ 04: ಕಿವಿಗೆ ಇಂಪು ಕೊಡುವ ಭಾಷೆ ಕನ್ನಡ, ಕನ್ನಡದಂತಹ ಭಾಷೆ ಬೇರೊಂದಿಲ್ಲ. ಪ್ರತಿ ಮನೆಯಲ್ಲಿ ಕನ್ನಡ ಜೋತಿಯನ್ನ ಬೆಳಗಿಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವೆಂದು ಸಾಹಿತಿ ಸುರೇಶ ದೇಸಾಯಿ ಹೇಳಿದರು.

ಪಟ್ಟಣದ ಸಿ.ಡಿ. ಹಲ್ಯಾಳ ಪ್ರೌಢ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡ ಕನರ್ಾಟಕ ರಾಜೋತ್ಸವ ಹಾಗೂ ಕನಕದಾಸರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇತ್ತಿಚಿನ ದಿನಗಳಲ್ಲಿ ಇಂಗ್ಲೀಷ್ ಭಾಷೆಯ ಬಗೆಗೆ ವ್ಯಾಮೋಹ ಅತಿಯಾಗುತ್ತಿದ್ದು, ಮನೆಯಲ್ಲಿ ನಿತ್ಯ ಕನ್ನಡ ಭಾಷೆ ಬಳಕೆ ಮಾಡಿ, ತಾಯಿ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕೆಂದು ತಿಳಿಸಿದರು.

ನವೆಂಬರ 1 ರಂದು ಮಾತ್ರ ಕನ್ನಡ ಪ್ರೇಮವನ್ನು ತೋರದೆ ಪ್ರತಿದಿನವೂ ತಮ್ಮ ಮನೆಯಲ್ಲಿ ತಮ್ಮ ಮಕ್ಕಳಿಗೆ ಕನ್ನಡದಲ್ಲಿ ಶಿಕ್ಷಣ ಕೊಡಿಸುವುದರ ಜೊತೆಗೆ ವ್ಯವಹಾರಿಕ ಬಾಷೆಯನ್ನಾಗಿ ಬಳಸುವ ಮೂಲಕ ಪ್ರತಿ ಮನೆ ಮನೆಯಲ್ಲಿ ಕನ್ನಡ ಬಳಸಿ, ಬೆಳೆಸಿ ಉಳಿಸಬೇಕಿದೆ ಎಂದರು.

ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಟಿ, ದಾಮೋದರ, ಮುಖ್ಯೋಪಾಧ್ಯಾಯ ವಿ.ಬಿ. ಜಂಬಗಿ, ಪತ್ರಕರ್ತ ಪವನ ದೇಶಪಾಂಡೆ ಸೇರಿದಂತೆ ಶಾಲೆಯ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಇತರರಿದ್ದರು.

ವಿ.ಜಿ. ನಾಗರೆಡ್ಡಿ  ಸ್ವಾಗತಿಸಿ, ನಿರೂಪಿಸಿದರು. ಎಂ.ವೈ. ಪೂಜಾರ ವಂದಿಸಿದರು.