ಮಹಾಂತಪ್ಪಗಳಿಟ್ಟ ಪ್ರತಿ ಹೆಜ್ಜೆಯೂ ಪ್ರಗತಿಪರ ಮೈಲಿಗಲ್ಲು ಸವದಿಯಲ್ಲಿ ಲಿಂ.ಡಾ.ಮಹಾಂತ ಶಿವಯೋಗಿಗಳ ಸ್ಮರಣೋತ್ಸವದಲ್ಲಿ ಸಿದ್ಧೇಶ್ವರ ಸ್ವಾಮೀಜಿ


ಅಥಣಿ 20: ಡಾ. ಮಹಾಂತ ಶಿವಯೋಗಿಗಳು ತಮ್ಮ ಬದುಕಿನುದ್ದಕ್ಕೂ ತತ್ವ ಸಿದ್ಧಾಂತಗಳ ಮೇರೆಗೆ ನಡೆ ನುಡಿಯಲ್ಲಿ ಒಂದಾಗಿ ಬದುಕಿ, ಇತರರಿಗೆ ಮಾದರಿಯಾಗಿದ್ದಾರೆ. ಸಮಾಜ ಪರಿವರ್ತನೆಯ ಹರಿಕಾರರು. ಅವರ ಜೀವನ ಆದರ್ಶ ಮೈಗೂಡಿಸಿಕೊಳ್ಳಬೇಕೆನ್ನುವವರಿಗೆ ತೆರೆದಿಟ್ಟ ಬದುಕಾಗಿದೆ. ಸಮಾಜ ಸುಧಾರಣೆಯ ಕಳಕಳಿಯ ಹಿನ್ನಲೆಯಲ್ಲಿ ಅವರಿಟ್ಟ ಪ್ರತಿ ಹೆಜ್ಜೆಯೂ ಒಂದು ಪ್ರಗತಿಪರ ಮೈಲಿಗಲ್ಲು. ಅವರನ್ನು ಕಳೆದುಕೊಂಡ ನೋವು ಇದೆಯಾದರೂ. ಅವರು ತಮ್ಮ ಹಿಂದೆ ಉದಾತ್ತ ಚಿಂತನೆ, ಸರಳ ವ್ಯಕ್ತಿತ್ವದ ಡಾ.ಗುರುಮಹಾಂತ ಶಿವಯೋಗಿಗಳಂತಹ ಅನಘ್ರ್ಯ ರತ್ನವನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಈಗಿನ ಶ್ರೀಗಳು ತಮ್ಮ ಗುರುಗಳಾದ ಮಹಾಂತಪ್ಪಗಳ ಆಶಯದಂತೆ ಸೇವೆಸಲ್ಲಿಸುತ್ತಾರೆ ಎಂದು ವಿಜಯಪೂರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಸವದಿ ಗ್ರಾಮದಲ್ಲಿ ಗುರುವಾರ ನಡೆದ ಡಾ. ಮಹಾಂತ ಶಿವಯೋಗಿಗಳ ಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸವದಿ-ಇಳಕಲ್ ಮಠದ ಗುರುಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ನಾಗನೂರ ರುದ್ರಾಕ್ಷಿಮಠದ ಡಾ.ಸಿದ್ಧರಾಮ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯಂಜಯ ಸ್ವಾಮೀಜಿ, ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ಡಾ. ಈಶ್ವರ ಮಂಟೂರ, ಶರಣ ಸಾಹಿತಿಗಳಾದ ಐ.ಆರ್ ಮಠಪತಿ, ಸಿದ್ದಣ್ಣ ಲಂಗೋಟಿ ಮಾತನಾಡಿದರು.
ಸಮಾರಂಭದಲ್ಲಿ ಮರೆಗುದ್ದಿಯ ಸಿದ್ದರಾಮ ಸ್ವಾಮೀಜಿ, ನವಿಇಂಗಳಗಾವಿಯ ಸಿದ್ಧಲಿಂಗ ಸ್ವಾಮೀಜಿ, ಉಗಾರದ ಬಸವಲಿಂಗ ಸ್ವಾಮೀಜಿ, ಶಿರೂರದ ಡಾ.ಬಸವಲಿಂಗ ಸ್ವಾಮೀಜಿ, ಬೆಳವಿಯ ಶರಣಬಸವ ದೇವರು, ಶೇಗುಣಸಿಯ ಮಹಾಂತ ದೇವರು, ತಿಕೋಟಾದ ಚನ್ನಮಲ್ಲಿಕಾಜರ್ುನ ಸ್ವಾಮೀಜಿ, ಸಾವಳಗೀಶ್ವರ ಶ್ರೀಗಳು, ಶೆಟ್ಟರಮಠದ ಮರುಳಸಿದ್ದ ಸ್ವಾಮಝಿಜಿ, ಚಡಚಣದ ಯೋಗಾನಂದ ಸ್ವಾಮಝಿಜಿ, ಕಕಮರಿಯ ಆತ್ಮಾರಾಮ ಸ್ವಾಮೀಜಿ, ಗುಳೆದ ಗುಡ್ಡದ ಗುರುಬಸವ ದೇವರು, ಜನವಾಡದ ಮಲ್ಲಿಕಾಜರ್ುನ ದೇವರು ನೇತೃತ್ವ ವಹಿಸಿದ್ದರು.
ಇಳಕಲ್ದ ಡಾ. ಮಹಾಮತೇಶ ಕಡಪಟ್ಟಿ, ಶಾಂತಣ್ಣ ಸರಗಣಾಚಾರಿ, ಅತಿಥಿಗಳಾಗಿ ಆಗಮಿಸಿ ಗೌರವ ಸ್ವೀಕರಿಸಿದರು. ಶರಣ ಸಿದ್ದಣ ಲಂಗೋಟಿ ರಚಿತ ``ಯುಗ ಪುರುಷ ಮಹಾಂತ ಶಿವಯೋಗಿಗಳು'' ಪುಸ್ತಕ ಬಿಡುಗಡೆಗೊಳಿಸಲಾಯಿತು. ಹಾಗೂ ಸಂಗಮೇಶ ಬಸವಲತಾ ಅವರ ಕಲ್ಯಾಣ ಮಹೋತ್ಸವ ನಡೆಯಿತು.
ಶರಣ ಸಂಗನಗೌಡ ಪಾಟೀಲ, ವಿಮೋಚನಾದ ಬಿ.ಎಲ್ ಪಾಟೀಲ, ಶಿವಪುತ್ರ ಯಾದವಾಡ, ಮಲ್ಲನಗೌಡ ಪಾಟೀಲ, ಶ್ರೀಶೈಲ ಬಾಳಿಕಾಯಿ, ಸಂಗಣ್ಣ ಗೂಗವಾಡ, ಬಸಪ್ಪ ಠಕ್ಕಣ್ಣವರ, ಭೀಮಪ್ಪ ರಾಜಮನಿ, ಬಸವಕೇಂದ್ರ, ಅಕ್ಕನಬಗಳಗ, ರಾಷ್ಟ್ರೀಯ ಬಸವಸೇನೆ ಸದಸ್ಯರು ಉಪಸ್ಥಿತರಿದ್ದರು. ಪ್ರಕಾಶ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.