ಪ್ರತಿಯೊಂದು ಕುಟುಂಬಕ್ಕೂ ಮುಂಗಡ ಪತ್ರ ಅಗತ್ಯ

ಲೋಕದರ್ಶನವರದಿ

ರಾಣೇಬೆನ್ನೂರು10: ಕೇವಲ ದೇಶಕ್ಕೆ ಅಥವಾ ರಾಜ್ಯಕ್ಕೆ ಮಾತ್ರ ಮುಂಗಡ ಪತ್ರದ ಅವಶ್ಯಕತೆ ಇದೆ ಎಂದು ಅರ್ಥವಲ್ಲ. ವಿದ್ಯಾಥರ್ಿಯೂ ಸೇರಿದಂತೆ ಪ್ರತಿಯೊಂದು ಕುಟುಂಬಕ್ಕೂ ಒಂದು ಮುಂಗಡ ಪತ್ರ ಎಂದು ಇರಬೇಕಾಗುತ್ತದೆ ಎಂದು ಪ್ರಾಚಾರ್ಯ ಡಾ. ಜಿ.ಇ. ವಿಜಯಕುಮಾರ ಹೇಳಿದರು.

      ನಗರದ ಎಸ್ಜೆಎಂವಿ ಮಹಿಳಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ವಿಭಾಗಗಳ ಅಡಿಯಲ್ಲಿ ನಡೆದ ಮುಂಗಡ ಪತ್ರ 2020 ರ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದರಿಂದ ಹಣಕಾಸಿನಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

    ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಜಿ.ವಿ. ಕೋರಿ ಮಾತನಾಡಿ, ಆಲೋಚನಾ ಶಕ್ತಿಯನ್ನು ಮತ್ತು ಪ್ರಾಯೋಗಿಕ ಜ್ಞಾನವನ್ನು ಪಡೆಯಲು ಹಾಗೂ ಸ್ವಅನುಭವದ ಮೂಲಕ ಪಠ್ಯವನ್ನು ತಿಳಿದುಕೊಳ್ಳಲು ವಿದ್ಯಾಥರ್ಿನಿಯರಿಗೆ ಇಂತಹ ಅವಲೋಕನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ, ಇದರ ಪ್ರಯೋಜನವನ್ನು ಎಲ್ಲ ವಿದ್ಯಾಥರ್ಿನಿಯರು ಪಡೆದುಕೊಳ್ಳಬೇಕು ಎಂದರು.

     ವಿದ್ಯಾಥರ್ಿನಿಯರಾದ ಅನುಷಾ ಕುಬಸದ, ಬಿಂದುಶ್ರೀ ಉಪರೆ, ಪೂಜಾ ವಡೆಯರಹಳ್ಳಿ, ಪವಿತ್ರಾ ಪಾಳೇದ, ಅಶ್ವಿನಿ ನವಲೆ, ಚಂದ್ರಕಲಾ ಗಂಜಿ, ಕಾವ್ಯಾ ಕೊರಕಲಿ, ನಂದಾ ನರಗುಂದ ಇವರು ಮುಂಗಡ ಪತ್ರದ ವಿವಿಧ ಕ್ಷೇತ್ರಗಳ ಕುರಿತು ಮಾತನಾಡಿದರು.

    ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಪ್ರೊ|| ಬಿ.ಆರ್. ಡಮ್ಮಳ್ಳಿ, ಅಶ್ವಿನಿ ಮಾಯಾಚಾರಿ, ಪ್ರೊ. ಕೆ.ಶಿವರಾಜಕುಮಾರ ಮೊದಲಾದವರು ಉಪಸ್ಥಿತರಿದ್ದರು. ಶ್ವೇತಾ ಪ್ರಾಥರ್ಿಸಿದರು, ಸುಧಾ ಮಡಿವಾಳರ ಸ್ವಾಗತಿಸಿದರು, ತಶ್ಲಿಮಾಬಾನು ವಂದಿಸಿದರು.