ಪ್ರತಿದಿನ ನೀವು ಒದುವ ಅರ್ದಗಂಟೆ ಉನ್ನತ ಸ್ಥಾನಕ್ಕೆ ಕರೆದೊಯ್ಯಲು ಸಹಕಾರಿ :ಶಿವಾನಿ


ಭಟ್ಕಳ : ಪುಸ್ತಕ, ಕೈಪಿಡಿಗಳು ವಿದ್ಯಾಥರ್ಿಗಳಲ್ಲಿ ಭೌಧ್ದಿಕ ಶಕ್ತಿ ಸಾಮಥ್ರ್ಯವನ್ನು ಹೆಚ್ಚಿಸಿ, ಬುದ್ದಿಯನ್ನು ಒರೆಗೆ ಹಚ್ಚಿಸುವ ಕೆಲಸಮಾಡಿಸುತ್ತದೆ. ಪ್ರತಿದಿನ ನೀವು ಒದುವ ಅರ್ದಗಂಟೆ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯಲು ಸಹಕಾರಿ ಎಂದು ಸಮಾಜ ಸೇವಕಿ ಶಿವಾನಿ ಶಾಂತರಾಮ ಅಭಿಪ್ರಾಯಪಟ್ಟರು

ಅವರು ಬುಧವಾರ ಬೆಳಕೆ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾಥರ್ಿಗಳಿಗೆ ಉಚಿತವಾಗಿ ಸಾಮಾನ್ಯ ಜ್ಞಾನದ ಸಂಚಿಕೆ ವಿತರಿಸಿ ಮಾತನಾಡಿದರು. ಎಸ್ಸೆಸ್ಸೆಎಲ್ಸಿಯ ವಿದ್ಯಾಥರ್ಿಗಳು ಆತ್ತ ಕಿರಿಯರು ಅಲ್ಲದ ಆತ್ತ ಪರಿಪಕ್ವತೆ ಹೊಂದಿರದ ಪ್ರೌಢಾವ್ಯಸ್ಥೆಯಲ್ಲಿ ಇರುತ್ತಾರೆ. ಈ ಸಂದರ್ಬದಲ್ಲಿ ಧನಾತ್ಮಕ ಶಕ್ತಿ ಹೆಚ್ಚಿದ್ದು,  ಹೇಳಿದ್ದನ್ನು ಬೇಗ ಮನನ ಮಾಡಿಕೊಳ್ಳುವ ಸಾಮಥ್ರ್ಯ ಹೊಂದಿರುತ್ತಾರೆ. ಇದು ಜೀವನದ ಮುಂದಿನ ಗುರಿಯನ್ನು ನಿರ್ಧರಿಸಿ ಮುನ್ನಡೆಯುವ ಸೂಕ್ತ ಸಮಯ. ಅವಕಾಶಗಳು ಬಂದಾಗಲೆ ಅದರ ಪ್ರಯೋಜನ ಪಡೆಯಬೇಕು. ವ್ಯಾಸಾಂಗ ಮುಗಿದ ಮೇಲೆ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ  ಇಂತಹ ಪತ್ರಿಕೆಗಳಿಂದ ಪಡೆದ ಸಾಮಾನ್ಯ ಜ್ಞಾನವೆ ಮುಂದೆ ಸಹಾಯಕ್ಕೆ ಬರಲಿದೆ. ಗ್ರಾಮೀಣ ಭಾಗದ ಜನರಿಗೂ ಇದರ ಪ್ರಯೋಜನ ಲಭಿಸಬೇಕು. ನೀವೂ ಒದಿ ಇತರರನ್ನು ಓದುವಂತೆ ಪ್ರೇರೇಪಿಸಬೇಕು. ವಿದ್ಯೆ ವಿನಯವನ್ನು ಕಲಿಸಿದರೆ, ಒದು ಮನುಷತ್ವ ಕಲಿಸುತ್ತದೆ. ಸಾಮಾಜಿಕ, ರಾಜಕೀಯ ಬಾಹ್ಯ ಪ್ರಪಂಚಗಳ ಅರಿವು ಹೊಂದಿದಲ್ಲಿ ತಿಳುವಳಿಕೆ ಮಾತ್ರವಲ್ಲದೆ ತನ್ನ ಮೇಲೆ ತನಗೆ ನಂಬಿಕೆ ಮೂಡುವಂತೆ ಮಾಡುತ್ತದೆ ಎಂದು ಅವರು ಹೇಳಿದರು.

  ಇನ್ನೊರ್ವ ಮುಖ್ಯ ಅತಿಥಿ ಭಟ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ರಾಮಚಂದ್ರ ಕಿಣಿ ಮಾತನಾಡಿ ಸಾಮಾನ್ಯ ಜ್ಞಾನ ನೀಡುವ ಸಂಚಿಕೆಗಳು ಕೇವಲ ವಿದ್ಯಾಥರ್ಿಗಳ ಮಿತ್ರನಲ್ಲ.  ಬದ್ರ ಭವಿಷ್ಯದ ಬುಡಗಟ್ಟಿಗೊಳಿಸುವ ಸಂಗಾತಿ. ಅಡಿಪಾಯ ಅವಲಂಬಿಸಿ ಹೇಗೆ ಕಟ್ಟಡಗಳ ಮಹಡಿ ಸಂಖ್ಯೆ ನಿರ್ಧರಿಸುತ್ತಾರೊ, ಹಾಗೆ ನಿಮ್ಮ ಜ್ಞಾನವನ್ನು ಪರಿಗಣಿಸಿ ನಿಮ್ಮನ್ನು ಅಳೆಯುತ್ತಾರೆ. ಪತ್ರಿಕೆಗಳು ಸ್ಥಳೀಯ, ಜಿಲ್ಲಾ ರಾಜ್ಯ, ದೇಶ ವಿದೇಶದ ಆಗುಹೋಗುಗಳ ಸಂಪೂರ್ಣ ಪರಿಚಯವನ್ನು ಸಂಕ್ಷಿಪ್ತವಾಗಿ ನಿಮ್ಮ ಮುಂದಿಡುತ್ತದೆ. ವಿದ್ಯಾಥರ್ಿ ದೆಸೆಯಿಂದಲೆ ಒದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಚಂದ್ರಕಾಂತ ಗಾಂವಕರ್ ಮಾತನಾಡಿ ಶಾಲೆಯ ಪ್ರಯೋಗಾಲಯಕ್ಕೆ ಸಿಂಡಿಕೇಟ್ ಬ್ಯಾಂಕನ ನಿವೃತ್ತ ನಿಭಂದಕ ಸದಾಶಿವ ಆಚಾರ್ಯ, ಬೆಳಗಾವಿಯಲ್ಲಿರುವ ಭಟ್ಕಳದ ಮೂಲನಿವಾಸಿ ನಾರಾಯಣ ನಾಯ್ಕ, ಜನಪ್ರತಿನಿಧಿ ಶಿವಾನಿ ಶಾಂತರಾಮ ಅವರಂತಹ ಕೊಡುಗೈ ದಾನಿಗಳು ನೀಡಿದ ದಾನದ ಪ್ರಯೋಜನವನ್ನು ವಿದ್ಯಾಥರ್ಿಗಳು ಪಡೆದುಕೊಳ್ಳುವಂತೆ ಕರೆ ನೀಡಿದರು. ಯಂತ್ರ ನಿವರ್ಾಹಕ ದೇವೇಂದ್ರ ನಾಯ್ಕ, ರಂಜನ್ ಇಂಡೇನ್ ಗ್ಯಾಸ್ನ ಶಾಂತರಾಮ ಭಟ್ಕಳ ಇದ್ದರು. ದೈಹಿಕ ಶಿಕ್ಷಕ ಪ್ರಕಾಶ ಶಿರಾಲಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.  ಶಿಕ್ಷಕ ಚಂದ್ರಶೇಖರ ಶಿರೂರು ವಂದಿಸಿದರು. ಭಾವನ ಸಂಗಡಿಗರು ಪ್ರಾಥರ್ಿಸಿದರೆ, ಶಿಕ್ಷಕ ಎನ್. ಜಿ. ಗೌಡ ಕಾರ್ಯಕ್ರಮ ನಿರೂಪಿಸಿದರು.