ಓ ದೇವರೇ, ನನ್ನ ಅಪ್ಪ ಮಳೆಯಲ್ಲಿ ಸಿಕ್ಕಿಕೊಂಡಿತರ್ಾರೆ. ಅವರಿಗೆ ತೊಂದರೆ ಆಗದಂತೆ ನೋಡಿಕೋ. ನಡೆಯುವಾಗ ಅವರು ಜಾರಿ ಬಿಳದಂತೆ ನೋಡಿಕೋ. ಅವರಿಗೆ ಯಾವುದೇ ರೀತಿ ತೊಂದರೆಯಾಗದೆ ಅಪ್ಪ ಇವತ್ತು ಹುಶಾರಾಗಿ ಮನೆಗೆ ಬಂದ್ರೆ, ನಾಳೆ ನಾನು ಉಪವಾಸ ಇತರ್ೆನಿ. ಹತ್ತು ರುಪಾಯಿ ಕಾಣಿಕೆ ಹಾಕ್ತೀನಿ, ಎಂದು ಆ ಪುಟ್ಟ ಮಗು ದೇವರಲ್ಲಿ ಪ್ರಾಥರ್ಿಸುತ್ತದೆ.
ತಂದೆಯ ಹೆಗಲೇರಿ ಕುಳಿತುಕೊಂಡು ಒಡಾಡುತ್ತಿದ್ದರೆ, ಆಕೆಯ ಮನ, ಇಡೀ ವಿಶ್ವವನ್ನೇ ತಾನು ಗೆದ್ದು ನಿಂತಿರುವೆ ಎಂಬಂತೆ ಸಂಭ್ರಮಿಸುತ್ತಾಳೆ. ರಾತ್ರಿ ಹೊತ್ತು ತನ್ನ ತಂದೆಯ ಎದೆಯ ಮೇಲೆ ಮಲಗಿ, ಚಂದಮಾಮ ನೀನು ಮುಳುಗಬೇಡ ಎಂದು ಮನಸ್ಸೊಳಗೆ ಬೇಡಿಕೊಳ್ಳುತ್ತಾಳೆ.ಮುಂಜಾನೆ ತನ್ನ ಅಪ್ಪನ ಕೈಬೆರಳ್ಹಿಡಿದು ಶಾಲೆಯತ್ತ ಹೆಜ್ಜೆ ಹಾಕುವಾಗ, ವಿಶ್ವವೇ ತನ್ನೊಡನೆ ಇದೆ ಎಂದು ಖುಷಿ ಪಡುತ್ತಾಳೆ. ಅಪ್ಪನ ಪ್ರೀತಿಯ ಸ್ಪೂತರ್ಿ ಮತ್ತು ಧೈರ್ಯ ತುಂಬುವ ಅವನ ಮಾತುಗಳಿದ್ದರೆ ಸಾಕು ಆಕೆಯಲ್ಲಿ ಇಡೀ ಜಗತ್ತನ್ನೇ ಗೆಲ್ಲಬಹುದೆಂಬ ಹಠ ಛಲ ಉದ್ವಿಗ್ನಗೊಳ್ಳುತ್ತದೆ.
ಅಪ್ಪ, ತನಗೆಷ್ಟೇ ಕಷ್ಟಗಳಿದ್ದರೂ, ತನ್ನ ಆ ಪುಟ್ಟು ಮಗಳ ನಗು ಮೊಗದಲ್ಲಿ ಎಲ್ಲವನ್ನೂ ಮರೆಯುತ್ತಾನೆ, ಆಕೆ ಏನೇ ಕೇಳಿದರೂ ಒಂದು ಕ್ಷಣ ಹಿಂದೆ ಮುಂದೆ ನೋಡದೆ, ಯೋಚನೆ ಮಾಡದೆ ಕೆಳಿದ್ದನ್ನೆಲ್ಲ ಕೊಡಿಸಿಬಿಡುತ್ತಾನೆ. ತನ್ನ ಆಸೆಗಳನೆಲ್ಲ ಬದಿಗೊತ್ತಿ, ಮಗಳ ಆಸೆಯನ್ನು ಪೂರೈಸುತ್ತಾನೆ. ಚಿಪ್ಪಿನೊಳಗಿನ ಮುತ್ತಿನಂತೆ ಆಕೆಯನ್ನು ಅಷ್ಟೇ ಜೋಪಾನವಾಗಿ ನೋಡಿಕೊಳ್ಳುತ್ತಾನೆ. ತನ್ನೆಲ್ಲಾ ಸಂತೋಷವನ್ನು ಆಕೆಗಾಗಿ ಮೀಸಲಿಟ್ಟು, ಆಕೆಯ ದುಃಖವನ್ನೆಲ್ಲಾ ತಾನು ನುಂಗಿಬಿಟ್ಟ. ಆಕೆಯ ನೆಮ್ಮದಿಗೋಸ್ಕರ ತನ್ನ ಕನಸು, ಅಭಿರುಚಿಗಳನ್ನೆಲ್ಲವನ್ನೂ ಮೂಟೆ ಕಟ್ಟಿ ಪಕ್ಕಕ್ಕಿಟ್ಟ ತಂದೆ ನಿಜಕ್ಕೂ ಗ್ರೇಟ್ ಅಲ್ವಾ..! ಈ ಪ್ರೀತಿ, ಮಮತೆ, ವಾತ್ಸಲ್ಯ, ಕರುಣೆ, ತ್ಯಾಗ ಇವೆಲ್ಲವುಗಳ ಸಮಾನಾರ್ಥ ಪದ ಅಂತ ಇದ್ದರೆ ಅದು "ಅಪ್ಪ.
ಒಬ್ಬ ಅಪ್ಪನನ್ನು ತನ್ನ ಮಗಳು ಅದೇಷ್ಟು ಇಷ್ಟ ಪಡುತ್ತಾಳೆ, ತಂದೆಯ ಮೇಲಿನ ಮಗಳ ಪ್ರೀತಿ ಆ ಸಂದರ್ಭದಲ್ಲಿ ಅದೇಂತಹ ಅದ್ಬುತಗಳನ್ನು ಸೃಷ್ಟಿಸಿಬಿಡುತ್ತದೆ ಅನ್ನೋದಕ್ಕೆ ಕೆಲ ತಿಂಗಳ ಹಿಂದೆ ಉತ್ತರಪ್ರದೇಶದಲ್ಲಿ ನಡೆದ ಘಟನೆ ಎಲ್ಲರ ಮನ ಕುಲುವಂತಿದೆ. ಅಲ್ಲಿನ ನಗರವೊಂದರಲ್ಲಿ ಪಟಾಕಿ ಬ್ಯಾನ್ ಆದರೂ ಕೂಡಾ ಒಬ್ಬ ವ್ಯಕ್ತಿ ಮಾರುತ್ತಿದ್ದ. ಆ ಸಂಗತಿ ತಿಳಿದ ಪೋಲಿಸರು ಆತನನ್ನು ಅಂಗಡಿಯಿಂದ ಹೊರ ಎಳೆದುಕೊಂಡು ಬಂಧಿಸಿ ತಮ್ಮ ಗಾಡಿಯೊಳಕ್ಕೆ ಹಾಕುತ್ತಾರೆ. ಅಷ್ಟರಲ್ಲಿ ಆ ದೃಷ್ಯವನ್ನು ಕಣ್ಣಾರೆ ಕಂಡ ಆತನ ಆರು ವರ್ಷದ ಪುಟ್ಟ ಮಗಳು ಪೋಲಿಸರ ಗಾಡಿಯತ್ತ ಓಡೋಡಿ ಬಂದು ತನ್ನ ತಂದೆಯನ್ನು ಬಿಟ್ಟುಬಿಡಿ ಎಂದು ಕೇಳುತ್ತಾಳೆ. ಅದಕ್ಕೆ ತಲೆ ಕೆಡಿಸಿಕೊಳ್ಳದ ಪೋಲಿಸರು ಗಾಡಿಯನ್ನು ನಿಧಾನಕ್ಕೆ ಮುಂದೆ ಬಿಡುತ್ತಾರೆ, ಆ ಮಗು ನನ್ನ ಅಪ್ಪನನ್ನು ಬಿಟ್ಟುಬಿಡಿ ಎಂದು ಕಿರಚುತ್ತ ಆ ಗಾಡಿಗೆ ಮೂರು ನಾಲ್ಕು ಬಾರಿ ತನ್ನ ತಲೆ ಚೆಚ್ಚಿಕೊಳ್ಳುತ್ತಾ, ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಾ ಜೋರಾಗಿ ಕಿರಚಾಡುತ್ತಾಳೆ, ತಲೆಕೆಡಿಸಿಕೊಳ್ಳದ ಪೋಲಿಸರು ಗಾಡಿ ಸ್ಟಾಟರ್್ ಮಾಡಿ ಅಲ್ಲಿಂದ ಹೊರಡುತ್ತಾರೆ. ಆ ಗಾಡಿ ಬೆನ್ನಟ್ಟಿದ ಮಗು ಪುಟ್ಟ ಹೆಜ್ಜೆಗಳನ್ನು ಹಾಕುತ್ತಾ ಸುಮಾರು ಇನ್ನೂರು ಮೀಟರ್ ನಷ್ಟು ಒಡುತ್ತದೆ ಈ ಸನ್ನಿವೇಶದ ವಿಡಿಯೋಗಳು ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿ ಸಿಎಂ ಯೋಗಿ ಅವರಿಗೂ ತಲುಪುತ್ತದೆ...ಆ ವಿಡಿಯೋದಲ್ಲಿರುವ ಹೆಣ್ಣು ಮಗುವಿಗೆ, ತನ್ನ ತಂದೆಯ ಮೇಲಿರುವ ಪ್ರೀತಿಯನ್ನು ಕಂಡ ಮುಖ್ಯಮಂತ್ರಿ ಯೋಗಿ ಜೀ ಕೂಡಾ ಕರಗಿ ಹೊಗುತ್ತಾರೆ. ತಕ್ಷಣ ಆತನನ್ನು ಬಿಡುಗಡೆಮಾಡಿ, ದೀಪಾವಳಿಯ ಪ್ರಯುಕ್ತ ಆ ಮಗುವಿಗೆ ಹೊಸ ಬಟ್ಟೆ, ವಿಶೇಷ ಸಿಹಿ ತಿನಿಸುಗಳನ್ನು ಕಳುಹಿಸಿ ಕೊಡುತ್ತಾರೆ. ಆ ಒಂದು ಕ್ಷಣದಲ್ಲಿ ಆ ಪುಟ್ಟ ಮಗುವಿನ ಪ್ರೀತಿ ಎಲ್ಲರ ಮನಸ್ಸುಗಳನ್ನು ಹೇಗೆ ಬದಲಾಯಿಸಿಬಿಟ್ತು ನೋಡಿ.
ಹಾಗಾಗಿ 'ಯಾವಾಗಲೂ ಅಪ್ಪನಿಗೆ ಮಗಳ ಮೇಲೆನೇ ಪ್ರೀತಿ ಜಾಸ್ತಿ ಅಲ್ವಾ?' ಎಂದು ಅನೇಕರು ಮಾತನಾಡುವುದನ್ನು ನಾನು ಕೇಳಿದ್ದೇನೆ. ಅಮ್ಮನಿಗೆ ಮಗ, ಅಪ್ಪನಿಗೆ ಮಗಳ ಮೇಲೆ ಪ್ರೀತಿ ಹೆಚ್ಚು ಎಂಬುದು ನಿಜವೂ ಹೌದು. ಅದೆಷ್ಟೋ ಹೆಣ್ಣು ಮಕ್ಕಳ ಪಾಲಿಗೆ ಅಪ್ಪನೇ ಹೀರೋ, ಅವನೇ ತಾಯಿ! ಅಮ್ಮನಿಗಿಂತ ಹೆಚ್ಚು ಸಲಿಗೆ ಅವಳಿಗೆ ಅಪ್ಪನ ಮೇಲೆ. ಅಮ್ಮನಂತೆ ಅಪ್ಪ ಎಂದಿಗೂ ಬೈದವರೇ ಅಲ್ಲ. ತಪ್ಪು ಮಾಡಿದರೂ ಒಂದು ಕ್ಷಣ ಮೌನವಾಗಿದ್ದು, ಮಗಳಲ್ಲಿ ತಪ್ಪಿನ ಅರಿವು ಮೂಡಿಸಿದ ಮೇಲೆ 'ಪುಟ್ಟಾ, ಇನ್ಮುಂದೆ ಹಾಗೆ ಮಾಡಲ್ಲಾ ಅಲ್ವಾ ನೀನು..?' ಎನ್ನುತ್ತ ಪ್ರೀತಿಯ ದನಿಯಲ್ಲೇ ಸರಿದಾರಿಗೆಳೆದವರು. 'ಅಪ್ಪಾ ಈ ಬಾರಿ ನನ್ನ ಫ್ರೆಂಡ್ಸ್ ಎಲ್ಲರೂ ಸೇರಿ ಪಿಕ್ನಿಕ್ ಹೋಗ್ತಿದ್ದೀವಿ' ಅಂದಾಗಲೂ 'ಎಷ್ಟು ದುಡ್ಡು ಬೇಕಿತ್ತಮ್ಮಾ ಎಂದು ತುಂಬು ಕಾಳಜಿಯಿಂದಲೇ ಟೂರಿಗೆ ಕಳುಹಿಸಿಕೊಟ್ಟವರು. ಮಗಳು ಮದುವೆಯಾಗಿ ಹೊರಡುವ ಕೆಲದಿನ ಮೊದಲು ಇದ್ದಕ್ಕಿದ್ದಂತೆ ಮಂಕಾಗಿ ಕುಳಿತವರು! ಕಾರಣ ಕೇಳಿದರೆ ಏನೋ ಒಂದು ಹಾರಿಕೆ ಸುಳ್ಳು ಹೇಳಿ ಸುಮ್ಮನಾದವರು. 'ಪಾಪ ಪುಟ್ಟಿ, ಗಂಡನ ಮನೇಲಿ ಹೇಗಿತರ್ಾಳೋ...' ಎಂದು ಅಮ್ಮನ ಬಳಿ ಹೇಳಿ ಹನಿಗೂಡಿದ ಕಣ್ಣನ್ನು ಮರೆಮಾಚಿದವರು... ಹೌದು ಬೊಗಸೆ ತುಂಬಿ ಅಪ್ಪ ನೀಡುತ್ತಿದ್ದ ಒಲವು ಹೆಣ್ಣುಮಕ್ಕಳಿಗೆ ಮತ್ತೇಲ್ಲೂ ಸಿಗದ ಅತ್ಯ ಅಮೂಲ್ಯ ಆಸ್ತಿ!
ಅದೆಷ್ಟು ಕಷ್ಟವಿರಲಿ ಮಗಳ ಆಸೆಗೆ ಮಣ್ಣೆರೆಚಿದವರಲ್ಲ. 'ಅವಳಿ ಓದಿ ಯಾರ ಮನೆ ಉದ್ದಾರ ಮಾಡ್ಬೇಕು? ಸುಮ್ನೇ ಬೇಗ ಮದ್ವೆ ಮಾಡೋಣ ಎಂದು ಅಮ್ಮ- ಅಜ್ಜಿ ಪಟ್ಟು ಹಿಡಿದಾಗಲೂ 'ಇಲ್ಲಾ, ಅವಳಿಗೆ ಓದೋಕೆ ಇಷ್ಟ, ಓದಲಿ ಬಿಡು' ಎಂದು ಎಲ್ಲರೆದುರು ಮಗಳ ಬೆಂಬಲಕ್ಕೆ ನಿಂತವರು. ಒಂದು ದಿನ ಮಗಳು ಊಟ ಮಾಡಿಲ್ಲವೆಂದರೆ 'ಪುಟ್ಟಿ ಏನಾಯ್ತು? ನಿಮ್ಮಮ್ಮ ಏನಾದ್ರೂ ಬೈದ್ರಾ? ಅಣ್ಣಾ ಏನಾದ್ರೂ ಕೀಟಲೆ ಮಾಡಿದ್ನಾ? 'ಎಂದು ಹತ್ತಾರು ಬಾರಿ ಪ್ರಶ್ನಿಸಿ ತಳಮಳಿಸಿದವರು. ಶಾಲೆಗೆ ಹೊದ ಮೇಲೆ ಅನಿರೀಕ್ಷಿತವಾಗಿ ಮಳೆ ಬಂದುಬೊಟ್ಟರೆ ಅಂದು ತನ್ನ ಎಲ್ಲಾ ಕೆಲಸಗಳನ್ನೂ ಬಿಟ್ಟು 'ಮಗಳು ಮಳೆಯಲ್ಲಿ ನೆಂದು ಬಂದ್ರೆ ಕಷ್ಟ' ಎನ್ನುತ್ತ ಛತ್ರಿ ಹಿಡಿದುಕೊಂಡು ಓಡೋಡಿ ಬರುತ್ತಿದ್ದವರು. ಆಗೆಲ್ಲ ಅಪ್ಪ ಅಪ್ಪ ಎನ್ನಿಸಿದಕ್ಕಿಂತ ಹೆಚ್ಚಾಗಿ ಆತ್ಮೀಯ ಸ್ನೇಹಿತ ಅಂತ ಅನ್ನಿಸುತ್ತಾರೆ. ಅಪ್ಪನಿಗೆ ತನ್ನ ಮಗಳ ಮೇಲಿನ ಪ್ರೀತಿ ಹೆಚ್ಚಾದಂತೆ ಆಕೆಯಲ್ಲಿ ತನ್ನ ತಾಯಿಯನ್ನು ಕಾಣುತ್ತಾ ಹೊಗುತ್ತಾನೆ.
ಬಹುಶಃ ಎಲ್ಲ ಹೆಣ್ಣು ಮಕ್ಕಳಿಗೂ ಅಪ್ಪ ಒಬ್ಬ ಮಿತ್ರನಂತೇ ಕಾಣುತ್ತಾರೆ. ತಪ್ಪು ಮಾಡಿದರೆ ಮೌನವಾಗಿಯೇ ಬುದ್ದಿ ಹೇಳುವ, ಮನೆಯವರೆಲ್ಲರೂ ವಿರೋಧಿಸುವಾಗಲೂ ಬೆಂಬಲಕ್ಕೆ ನಿಲ್ಲುವ, ಆಸೆಪಟ್ಟದ್ದನ್ನು ಕಷ್ಟಪಟ್ಟಾದರೂ ಈಡೇರಿಸಲು ಮುಂದಾಗುವ ಅಪ್ಪ ಪ್ರತಿಯೊಬ್ಬರ ಬದುಕಿನಲ್ಲೂ ಇದ್ದಾರೆ. ಮಗಳು ಮದುವೆಯಾಗಿ ಹೊದಮೇಲೂ ಚಕ್ಕುಲಿ, ಕೋಡಬಳೆ ಎನ್ನುತ್ತ ಅಮ್ಮನೊಂದಿಗೆ ತಾನೂ ಕೂತು ತಯಾರಿಸಿದ ತಿಂಡಿಗಳನೆಲ್ಲ ಕಟ್ಟಿಕೊಂಡು ಬಂದು ಮಗಳ ಮುಂದಿಟ್ಟು ಸಂಭ್ರಮಿಸಿದ್ದಾರೆ. ಮೊಮ್ಮಕ್ಕಳನ್ನೂ ಅದೆಷ್ಟು ಪ್ರೀತಿಯಿಂದ ಮುದ್ದಿಸಿದ್ದಾರೆ! ಎಂದಿಗೂ ತನ್ನ ಸ್ವಾರ್ಥ ಬಯಸದೆ, ಕುಟುಂಬಕ್ಕಾಗಿ ತನ್ನೆಲ್ಲ ದುಡಿಮೆ, ಸಂತಸಗಳನ್ನು ಮೀಸಲಿಟ್ಟಿದ್ದಾರೆ. ಈ ರಲ್ಲಾ ಕಾರಣಕ್ಕಾಗಿಯೇ ಮಗಳಿಗೆ ಅಮ್ಮನಿಗಿಂತ ಅಪ್ಪನೇ ಅಚ್ಚು ಮೆಚ್ಚು.
ಭ್ರೂಣ ಹೆಣ್ಣೆಂದು ತಿಳಿಯುತ್ತಿದ್ದಂತೆಯೇ ಗರ್ಭಪಾತ ಮಾಡಿಸುವ, ಹಣದಾಸೆಗಾಗಿ ಮಗಳನ್ನು ಮಾರುವ, ಸ್ವಂತ ಮಗಳನ್ನೇ ಕಾಮದ ಕಣ್ಣಿನಿಂದ ನೋಡುವ, ತನಗಿರುವ ಅನೈತಿಕ ಸಂಬಂಧ ಮಗಳಿಗೆ ತಿಳಿಯಿತೆಂದು ಆಕೆಯನ್ನು ಕೊಲೆ ಮಾಡುವ, ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ ಮನೆಗೌರವದ ಹೆಸರಲ್ಲಿ ಮಗಳನ್ನು ಹಿಂಸಿಸುವ, ಮಯರ್ಾದಾ ಹತ್ಯೆಯ ಹೆಸರಲ್ಲಿ ಆಕೆಯನ್ನು ಸಾಯಿಸುವ ಬೆರಳೆನಿಕೆ ನೀಚ ಅಪ್ಪಂದಿರ ನಡುವಲ್ಲೇ ಮಗಳನ್ನು ಎಂದಿಗೂ ಪುಟ್ಟ ಕೂಸೆಂದು ಕಾಳಜಿಯಿಂದ ನೋಡಿಕೊಳ್ಳುವ, ದೇವತೆ ಎಂದು ಗೌರವಿಸುವ, ಸ್ನೇಹಿತೆ ಎಂದು ತಪ್ಪನ್ನು ತಿದ್ದುವ, ಬೊಗಸೆ ತುಂಬ ಪ್ರೀತಿ ನೀಡುವ ಲೆಕ್ಕಕ್ಕೆ ಸಿಗದಷ್ಟು ಅಪಂದಿರಿದ್ದಾರೆ. ಅವರಿಗೆ ಶತಕೋಟಿ ಪ್ರಣಾಮಗಳು.
ಯಾರಿಗೂ ಕಾಣದೆ ಗೌಣವಾಗಿರುವ ತಂದೆಯ ಮಹತ್ಕಾರ್ಯವನ್ನು ತಿಳಿಸೋ ಈ ಕೆಳಗಿನ ಸಾಲುಗಳನ್ನು ಓದೊದಕ್ಕೂ ಮೊದಲು ಮನಸ್ಸು ಗಟ್ಟಿಯಾಗಿಸಿಕೊಳ್ಳಿ, ಪಕ್ಕಕ್ಕೆ ಕರವಸ್ತ್ರವೊಂದನ್ನು ಇಟ್ಟಿಕೊಳ್ಳಿ ಯಾಕಂದ್ರೆ ನಿಮ್ಮ ಕಣ್ಣಾಲೆಗಳು ತುಂಬಿ ಬರೊದಂತು ಪಕ್ಕಾ...!
"ಅಮ್ಮ ಒಂಭತ್ತು ತಿಂಗಳು ಹೊರುತ್ತಾಳೆ, ಅಪ್ಪ ಇಪ್ಪತೈದು ವರ್ಷ ಸಾಕುತ್ತಾರೆ, ಜೀವನದಲ್ಲಿ ಇಬ್ಬರೂ ಸಮವಾದರೂ ಅಪ್ಪ ಮಾತ್ರ ಯಾಕೊ ಹಿಂದುಉಳಿದ್ಬಿಟ್ಟ. ಜೀತ ತಗೊಳ್ಳದೆ ಅಮ್ಮ ಮನೆನಲ್ಲಿ ದುಡಿತಾಳೆ, ತನ್ನ ಜೀತನೆಲ್ಲ ಅಪ್ಪ ಮನೆಗೆ ಅಂತ ಖಚ್9 ಮಾಡ್ತಾನೆ, ಅಪ್ಪ-ಅಮ್ಮನ ಶ್ರಮ ಸಮವಾಗಿದ್ದರೂ, ಅಪ್ಪ ಮಾತ್ರ ಯಾಕೋ ಹಿಂದೆ ಉಳಿದ್ಬಿಟ್ಟ. ಎಷ್ಟು ಬೇಕಾದರೂ ಕೆಳೋ ಕಂದಾ ಅಂತ ಊಟ ಬಡಿಸೋ ಅಮ್ಮ, ಬೇಕಾದ್ದು ತಗೊ ಕೂಸೆ ಅಂತ ಎಲ್ಲ ಕೊಡಿಸೊ ಅಪ್ಪ, ಅಮ್ಮ-ಅಪ್ಪನ ಪ್ರೀತಿ ಸಮವಾಗಿದ್ರೂ ಅಪ್ಪ ಯಾಕೋ ಹಿಂದೆ ಉಳಿದ್ಬಿಟ್ಟ. ಪೋನಿನಲ್ಲೂ ಅಮ್ಮನ ಹೆಸರು, ಏಟು ಬಿದ್ದಾಗಲೂ ಕೂಗೊ ಹೆಸರಿನಲ್ಲೂ ಅವಳೇ ಇದ್ದಾಳೆ, ನಾವು ಬೇಕು ಅಂದಿದ್ದಕ್ಕೆಲ್ಲ ನಮ್ಮನ್ನು ಆನಂದದ ಉಯ್ಯಾಲೆಯಲ್ಲಿ ಕುಡಿಸಿ ತೂಗಾಡಿಸಿದ ತಂದೆ, ತನ್ನ ಹೆಸರು ಮಕ್ಕಳ ಬಾಯಲ್ಲಿ ಬರಲಿವಲ್ಲ ಅಂತ ಯಾವತ್ತಾದರೂ ಕೊಪಿಸಿಕೊಂಡು ಕುತ್ಕೊಂಡನಾ? ಇಲ್ಲ, ಅಲ್ಲಿಯೂ ಕೂಡಾ ಅಪ್ಪಾ ಅಮ್ಮನನ್ನು ಮುಂದೆ ಬಿಟ್ಟು ತಾನು ಯಾಕೋ ಹಿಂದೆ ಉಳಿದ್ಬಿಟ್ಟ. ಅಮ್ಮ ಮಕ್ಕಳಿಗೆ ಬೀರೂಲ ತುಂಬಾ ಬಣ್ಣ ಬಣ್ಣದ ಬಟ್ಟೆಗಳು, ಅಪ್ಪನ ಬಟ್ಟೆಗಳಿಗೆ ಅಲ್ಲಲ್ಲಿ ತ್ಯಾಪೆ ಬಿದ್ದ ಸೂಜಿ ದಾರದ ಬರೆಗಳು, ತನ್ನನ್ನು ತಾನು ನೋಡಿಕೊಳ್ಳದೆ ಜೀವನ ಸಾಗಿಸೋ ಅಪ್ಪ, ಅಮ್ಮ ಮಕ್ಕಳ ಜೀವನದಲ್ಲಿ ನೇನಪಾಗದೇ ಇರೊವಷ್ಟು ಹಿಂದೆ ಉಳಿದ್ಬಿಟ್ಟ, ಅಪ್ಪ ಯಾಕೊ ಇಲ್ಲೂ ಹಿಂದೆ ಉಳಿದ್ಬಿಟ್ಟ. ಅಮ್ಮನಿಗೆ ಅಷ್ಟಿಷ್ಟು ಬಂಗಾರದ ಒಡವೆಗಳು, ಅಪ್ಪನಿಗೆ ಮೈಮೆಲಿನ ಉಡದಾರನೇ ಬಂಗಾರದ ಆಭರಣ, ತನ್ನ ಕುಟುಂಬಕ್ಕೋಸ್ಕರ ಎನೆಲ್ಲಾ ತ್ಯಾಗ ಮಾಡಿದ್ರೂ ಒಂದಷ್ಟು ಗುರುತಲ್ಲಿ ಉಳಿಯೋ ನೆನಪಲ್ಲಿ ಕೂಡಾ ಅಪ್ಪ ಯಾಕೋ ಹಿಂದೆ ಉಳಿದ್ಬಿಟ್ಟ. ಮಕ್ಕಳ ಸ್ಕೂಲ್ ಫಿಸ್, ಪುಸ್ತಕ ಅಂತೆಲ್ಲ ಇದೆ, ಈ ಹಬ್ಬಕ್ಕೆ ನನಗೆ ಬಟ್ಟೆ ಬೇಡಾ ರೀ ಅಂತಾಳೆ ಅಮ್ಮ, ಹಬ್ಬದಲ್ಲಿ ಅಮ್ಮ-ಅಪ್ಪಾ ಏನು ತಿನ್ನುತ್ತಾರೆ ಅಂತಾ ನೋಡಲ್ಲ, ಹೊಟ್ಟೆ ಉಬ್ಬಿಸುವಷ್ಟು ತಿಂದು ಮೇಲೆಳ್ತಾವೆ ಮಕ್ಕಳು, ಅಮ್ಮ ಆ ಮಕ್ಕಳು ಬಿಟ್ಟಿದ್ದನ್ನ ತಿನ್ನುತ್ತಾಳೆ, ಆದ್ರೆ ಅಪ್ಪ ಪಾತ್ರೆಯಲ್ಲಿ ಉಳಿದ ಅಷ್ಟೋ ಇಷ್ಟಕ್ಕೂ ನೀರನ್ನು ಬೆರೆಸಿ ಕುಡಿಯುತ್ತಾನೆ, ಅಲ್ಲಿಯೂ ಯಾಕೋ ಅಪ್ಪ ಹಿಂದೆ ಉಳಿತಾನೆ. ವಯಸ್ಸಾದ ಮೇಲೆ ಅಮ್ಮ ಮನೆಯಲ್ಲಿ ಕೆಲಸಕ್ಕೆ ಆಗಿಬರುತ್ತಾಳೆ ಅಂತ ಮಕ್ಕಳು ನೆನೆಸಿಕೊಳ್ತಾರೆ, ಆದರೆ ಮನೆಯಲ್ಲಿ ಅಪ್ಪ ಕಾಲು ಮುರಿದು ಕುಳಿತರೆ ಆತ ಏನಕ್ಕೂ ಬೇಡ, ಅನ್ನಕ್ಕೆ ದಂಡ ಭೂಮಿಗೆ ಭಾರ ಅಂತ ಮಕ್ಕಳು ಅವನನ್ನ ಹಂತ ಹಂತವಾಗಿ ಸಾಯಿಸಿಬಿಡ್ತಾರೆ, ಹಂತ ಹಂತವಾಗಿ ಸಾಯೋ ಅಪ್ಪ ಮಾತ್ರ ಸಾವಲ್ಲಿ ಮುಂದೆ ಅಮ್ಮ ಯಾಕೊ ಇಲ್ಲಿ ಹಿಂದೆ ಉಳಿದುಬಿಡ್ತಾಳೆ."....
ಅಮ್ಮ ಹೆತ್ತಳು, ಅಮ್ಮ ಅತ್ತಳು, ಅಮ್ಮ ದೇವರಾಗಿ ಕಾಣುತ್ತಾಳೆ, ಅಪ್ಪ ಹೆರಲಿಲ್ಲ, ಅಳಲೂ ಇಲ್ಲ, ಆದರೆ ಹೆಂಡತಿ ಮಕ್ಕಳ ಜೀವನ ಪರ್ಯಂತದ ಸಖ ನೆಮ್ಮದಿಗಾಗಿ ಅಪ್ಪ ಹಗಲಿರುಳು ಸತ್ತದ್ದು ಮಾತ್ರ ಯಾರಿಗೂ ಕಾಣಲೇ ಇಲ್ಲ..!! ಬದುಕು ಎಷ್ಟು ಚನ್ನಾಗಿದೆ ಅಂದ್ರೆ, ನಮ್ಮೆಲ್ಲರಿಗೂ ಬೆನ್ನೆಲುಬಾಗಿ ಅಪ್ಪ ನಿಂತಿರುತ್ತಾನೆ, ಆದರೆ ಎಲ್ಲರೂ ಅಪ್ಪನನ್ನೇ ಮರೆತು ಬಿಡುತ್ತಾರೆ, ಈ ಘಟನೆಗಳು ಪ್ರತಿಯೊಬ್ಬರ ಜೀವನದಲ್ಲೂ ನಡೆದಿರುತ್ತದೆ ಅಲ್ವಾ. ತಂದೆ ಯಾವತ್ತಿಗೂ ಮಿನುಗೋ ನಕ್ಷತ್ರ...