ನಿಜ ಹೇಳಬೇಕೆಂದರೆ ಆ ದೇಶಕ್ಕೆ ಐತಿಹಾಸಿಕ ಮಹತ್ವವಿದೆ. ಅದರಲ್ಲೂ ಭಾರತಕ್ಕಂತೂ ಬಿಟ್ಟೂ ಬಿಡದಂತ ನಂಟಿದೆ. ಭಾರತದ ಪಂಚಮವೇದ ಎಂದು ಕರೆಸಿಕೊಳ್ಳುವ ಮಹಾಭಾರತದ ಮಹಾಕಾವ್ಯಕ್ಕೂ ಆ ದೇಶಕ್ಕೂ ಅವಿನಾಭಾವ ಸಂಬಂಧವಿದೆ. ಕುರುವಂಶದ ದಾಳಿ ಭಯದಿಂದ, ಮನಸ್ಸಿಲ್ಲದ ಮನಸ್ಸಿನಿಂದ, ವಿಚಿತ್ರವಿರ್ಯನ ಮಗ ಧೃತರಾಷ್ಟ್ರನಿಗೆ ಗಾಂಧಾರಿಯನ್ನು ಕೊಟ್ಟು ವಿವಾಹ ಮಾಡಿ, ತನ್ನ ನೂರು ಜನ ಗಂಡು ಮಕ್ಕಳ ಸಾವಿಗೆ ಕಾರಣವಾದ ಕಥೆಯನ್ನು ಹಿಡಿದು; ಅದರಲ್ಲಿ ತೊಂಬತ್ತೊಂಬತ್ತು ಜನ ಅಸುನೀಗಿ ಅವರೆಲ್ಲರ ಬದಲಾಗಿ ಉಳಿದೊಬ್ಬ ಶಕುನಿಯಿಂದ ಕುರುಕ್ಷೇತ್ರ ಜರುಗುವ ವರೆಗೆ ಗಾಂಧಾರ ದೇಶ ನಮಗೆ ಮಹತ್ವ ಎಂದೆನಿಸಿಕೊಳ್ಳುತ್ತದೆ. ಅಂದು ಪುರುಷಪುರ ಅಥವಾ ತಕ್ಷಶಿಲೆಯನ್ನು ರಾಜಧಾನಿಯಾಗಿ ಮಾಡಿಕೊಂಡು ಆಳಲ್ಪಟ್ಟ ದೇಶ ಪ್ರಸ್ತುತ ಅಫ್ಘಾನಿಸ್ತಾನ್ ಎಂದು ಕರೆಸಿಕೊಳ್ಳುತ್ತಿದೆ. ಆದರೂ ನಾನಿಲ್ಲಿ ಅದನ್ನು ಗಾಂಧಾರ ಎಂದೇ ಉಲ್ಲೇಖಿಸುತ್ತಿದ್ದೇನೆ. ಕಾರಣ ಪ್ರಾಚೀನ ಕಾಲದಿಂದಲೂ ಅದೂ ಭಾರತೀಯರಿಗೆ ಗಾಂಧಾರ ಎಂದೇ ಪರಿಚಿತವಾಗಿದೆ. ಅಂಥ ಮಹಾಭಾರತದ ಮಹತ್ವವನ್ನು ಹೊಂದಿದ ದೇಶ ಇಂದು ಭಯೋತ್ಪಾದಕರ ಕೈಯಲ್ಲಿ ನಲುಗುತ್ತಿದೆ. ಗಾಂಧಾರ ಕಲೆಯನ್ನು ಜಗತ್ತಿಗೆ ಪರಿಚಯಿಸಿದ ನಾಡಿಂದು ರಕ್ತ ಸಿಕ್ತ ಚರಿತ್ರೆಗೆ ಸಾಕ್ಷಿಯಾಗಲು ಮತ್ತೊಮ್ಮೆ ಸುಜ್ಜಾಗುತ್ತಿದೆ. ಮತಾಂದರ ಮಾನಸಿಕತೆ ಮತ್ತು ಕ್ರೌರ್ಯದಿಂದಾಗಿ ಗಾಂಧಾರದ ಸ್ತ್ರೀಕುಲ ನಡು ರಸ್ತೆಯಲ್ಲಿ ಹೆಣವಾಗುತ್ತಿದ್ದರೆ ಮನೆಯಿಂದ ಹೊರ ಬರದೇ ಅಳಿದುಳಿದ ಸ್ತ್ರೀಕುಲ ಅಕ್ಷರಶಃ ಕನಲಿ ಕಂಗಾಲಾಗಿ ಹೋಗಿದೆ. ಜಗತ್ತಿನ ದೊಡ್ಡಣ್ಣ ಮಾಡಿದ ಎಡವಟ್ಟಿಗೆ ಇಂದು ಇಡೀ ಗಾಂಧಾರ ಸರ್ವನಾಶದ ದಾರಿ ಹಿಡಿದಿದ್ದಂತೂ ಸ್ಪಷ್ಟವಾಗಿ ಕಾಣುತ್ತಿದೆ. ತಾನೇ ಹುಟ್ಟಿಸಿದ ಪಾಪದ ಪಿಂಡವೆ ಅಂದು ಅವರ ಅಂಡಿಗೆ ಬೆಂಕಿ ಇಟ್ಟಾಗ ಕೆಂಡಾಮಂಡಲವಾದ ಹಿರಿಯಣ್ಣ ಯುದ್ಧ ಮಾಡಿ ಪೌರುಷ ಮೆರೆದಿದ್ದ. ಭಯೋತ್ಪಾದನೆಯ ನಾಶವೇ ನಮ್ಮ ಗುರಿ ಎಂದು ಸೆಡ್ಡು ಹೊಡೆದಂತೆ ತನ್ನ ಸೈನ್ಯವನ್ನು ರಕ್ಷಣೆಗಿಟ್ಟು, ಭಯೋತ್ಪಾದಕರ ಕರಿ ನೆರಳಿಂದ ಹೊರತಂದು, ಪ್ರಜಾಪ್ರಭುತ್ವದ ಗಾಳಿ ಬೀಸಲು ಕಾರಣವಾಗಿದ್ದ. ಆದರೆ ಇಂದು ದಿಡೀರನೆ ತೆಗೆದುಕೊಂಡ ಒಂದು ಎಡವಟ್ಟಿನ ನಿಧರ್ಾರದಿಂದ ಗಾಂಧಾರ ಅಲಿಯಾಸ ಅಪ್ಘಾನಿಸ್ತಾನ ಇಂದು ಧರ್ಮದ ಹೆಸರಿನ ದಲ್ಲಾಳಿಗಳು ಮಾಡುತ್ತಿರುವ ಸಾವಿನ ವ್ಯಾಪಾರಕ್ಕೆ ಸಾಕ್ಷಿಯಾಗಿ, ಮಾನವೀಯತೆಯನ್ನು ಮಣ್ಣು ಮಾಡುವ ಸ್ಮಶಾನವಾಗಿ ಗುರುತಿಸಿಕೊಳ್ಳುತ್ತಿದೆ. ಸದ್ದಿಲ್ಲದೆ ಮೂಲೆ ಸೇರಿದ್ದ ತುಪಾಕಿಗಳಿಂದು ದೀಪಾವಳಿಯ ಪಟಾಕಿಗಳಂತೆ ಅರಚುತ್ತಿದೆ. ಅವುಗಳ ಹೊಡೆತಕ್ಕೆ ಸಿಕ್ಕವರ ಆರ್ಥನಾದಕ್ಕೆ ಇಡೀ ಜಗತ್ತೇ ಮಮ್ಮಲ ಮರುಗುತ್ತಿದೆ. ಪ್ರತಿ ಕ್ಷಣ ನಡೆಯುವ ಪೈಶಾಚಿಕ ಕೃತ್ಯವನ್ನು ಮನುಷ್ಯನಾದವನು ಕಂಡರೆ ಕಣ್ಣಿರಾಗುತ್ತಾನೆ. ಆದರೆ ಕೆಲವು ಅದೇ ಪೈಶಾಚಿಕ ಮನಸ್ಸಿನವರು ಅದನ್ನು ಸಮರ್ಥನೆ ಮಾಡಿಕೊಳ್ಳುವುದನ್ನು ಕಂಡಾಗ ನಿಜಕ್ಕೂ ಇವರೇನು ಮಾಡಲು ಹೊರಟಿದ್ದಾರೆ ಎನ್ನುವ ಆತಂಕದ ಕಾಮರ್ೋಡ ಪ್ರತಿಯೊಬ್ಬನ ಎದೆಯಲ್ಲೂ ಕಟ್ಟಿಕೊಳ್ಳುತ್ತದೆ.
ಇತ್ತೀಚಿನ ಬೆಳವಣಿಗೆಗಳನ್ನು ಕಾಣುತ್ತಿದ್ದರೆ ನೂರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿರುವುದಂತೂ ಸ್ಪಷ್ಟ. ಅದ್ಯಾವ ಗಳಿಗೆಯಲ್ಲಿ ಜೋ ಬೈಡನ್ ತಲೆಯಲ್ಲಿ ಆ ನಿಧರ್ಾರ ಮೂಡಿತೊ ಗೊತ್ತಿಲ್ಲ. ಒಮ್ಮಿಂದೊಮ್ಮೆಲೆ ಅಪ್ಘಾನಿಸ್ತಾನದಲ್ಲಿದ್ದ ತಮ್ಮ ಸೈನ್ಯವನ್ನು ವಾಪಸ್ ಕರೆಸಿಕೊಳ್ಳಲು ಮುಂದಾಗುತ್ತಿದ್ದಂತೆ ಭೂಗತವಾಗಿ ಉಳಿದಿದ್ದ ತಾಲಿಬಾನಿಗಳು ಮತ್ತೆ ಅಪ್ಘಾನ್ನ್ನು ತಮ್ಮ ಕೈವಶ ಮಾಡಿಕೊಂಡವು. ಇದರೊಂದಿಗೆ ನೆಮ್ಮದಿಯಾಗಿ ಬದುಕುತ್ತಿದ್ದ ಅಪ್ಘನ್ ಪ್ರಜೆಗಳು ಮತ್ತೆ ಬಂದುಕಿನ ನಳಿಗೆಯ ಕೆಳಗೆ ಬದುಕು ಮಾಡುವ ಪರಸ್ಥಿತಿ ನಿಮರ್ಾಣವಾಯಿತು. ಕ್ರೌರ್ಯದ ನಡುವೆ ಬದುಕು ಮಾಡುವುದು ಸುಲಭ ಸಾಧ್ಯವಲ್ಲ ಎನ್ನುವುದನ್ನು ಅರಿತು ದೇಶ ತೊರೆಯಲು ಮುಂದಾದ ಅಪ್ಘನ್ ಪ್ರಜೆಗಳು ಹಳ್ಳಿಗಾಡಿನ ವಾಹನಗಳನ್ನೇರಿ ಬರುವ ಪ್ರಯಾಣಿಕರಂತೆ ವಿಮಾನವನ್ನೇರಿ, ಸ್ಥಾಳಾವಕಾಶವಿಲ್ಲ ಎಂದಾಗ ಏರೋಡ್ರಮ್ಗಳಲ್ಲಿ ಕುಳಿತುಕೊಂಡು ಸಾವಿನ ಮನೆಯ ಬಾಗಿಲಲ್ಲಿ ಸಹಾಯಕ್ಕಾಗಿ ನಿಂತರು. ಕೆಲವರು ದೇಶ ತೊರದು ಜೀವ ಉಳಿಸಿಕೊಂಡರೆ ಮತ್ತೆ ಕೆಲವರು ಹಾರುವ ವಿಮಾನದಿಂದ ಜಾರಿ ಬಿದ್ದು ಸಾವಿನ ಮನೆಯನ್ನು ಹೊಕ್ಕರು. ಈ ಭಯಾನಕ ದೃಶ್ಯಗಳನ್ನು ಕಂಡ ಜಗತ್ತು ಒಂದು ಕ್ಷಣ ಬಾಯಿಮುಚ್ಚಿಕೊಂಡು ಉಸಿರು ಬಿಗಿ ಹಿಡಿದಿದ್ದಂತೂ ಸತ್ಯ. ನಿಜಕ್ಕೂ ಅಪ್ಘಾನಿಸ್ತಾನದ ವಾತಾವರಣ ವಿಶ್ವದಾದ್ಯಂತ ಆತಂಕದ ಛಾಯೆಯನ್ನು ಬೀರುತ್ತಿದೆ ಎನ್ನುವುದನ್ನು ಮುಲಾಜಿಲ್ಲದೆ ಒಪ್ಪಿಕೊಳ್ಳಲೇ ಬೇಕು. ಪ್ರಜಾಪ್ರಭುತ್ವವನ್ನು ಕಿತ್ತೆಸೆದು ಭಯೋತ್ಪಾದಕ ಪ್ರಭುತ್ವವನ್ನು ಒಪ್ಪಿಕೊಳ್ಳಬೇಕಾದ ಸ್ಥಿತಿ ಸ್ಥಾಪಿಸಿರುವ ತಾಲಿಬಾನ್ ಆ ದೇಶದದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ಸ್ವಾತಂತ್ರ್ಯವನ್ನು ಕೊಡದೇ ಪಾಪದ ಕೂಪಕ್ಕೆ ನೂಕಿರುವುದಂತೂ ನಿಜ. ಶರಿಯಾ ಕಾನೂನು ಪಾಲನೆ ಮಾಡಬೇಕು ಎಂದು ಒತ್ತಡ ಹೇರುವ ಮೂಲಕ ಪ್ರಾಚೀನ ಕಾಲದಲ್ಲಿ ರಚನೆಯಾದ ಕಾನೂನನ್ನು ಮುಂದಿಟ್ಟುಕೊಂಡು ಆಧುನಿಕತೆಯ ಮಜಲಿನಲ್ಲಿ ಬದುಕು ಕಟ್ಟಿಕೊಂಡ ಜನರ ನೆಮ್ಮದಿಗೆ ಬೆಂಕಿ ಹಾಕುವ ಕಾರ್ಯಕ್ಕೆ ಮುಂದಾಗುತ್ತಿದೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಇದನ್ನು ಯಾವತ್ತೂ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಕೈ ಕತ್ತರಿಸುವುದು, ತಲೆ ಉರುಳಿಸುವುದು, ಗುಂಡಿಟ್ಟು ಕೊಲ್ಲುವುದು ಹೀಗೆ ಹತ್ತು ಹಲವು ಹಿಂಸಾತ್ಮಕ ಕಾನೂನುಗಳಿಗೆ ಸಾಮಾನ್ಯನು ಅಸ್ತು ಎನ್ನಬೇಕೆಂದರೆ ಅದು ಹೇಗೆ ಸಾಧ್ಯವಾಗುತ್ತದೆ ಹೇಳಿ?. ಒಟ್ಟಿನಲ್ಲಿ ಮತ್ತೊಮ್ಮೆ ತನ್ನ ಕರಾಳ ಹಸ್ತವನ್ನು ಚಾಚಿ ಅಪ್ಘನ್ರ ಜುಟ್ಟನ್ನು ತನ್ನ ಕೈಲಿ ಹಿಡಿದುಕೊಂಡಿರುವ ತಾಲಿಬಾನಿಗಳ ನಡೆಯಿಂದಾಗಿ ಆ ದೇಶ ಅಕ್ಷರಶಃ ಸೂತಕದ ಮನೆಯಾಗಿ ಮಾರ್ಪಟ್ಟಿದೆ. ಇಂದಿದ್ದವರು ನಾಳೆ ಇರುತ್ತೇವೋ? ಇಲ್ಲವೋ? ಎನ್ನುವುದರ ಭರವಸೆಯನ್ನು ಕಳೆದುಕೊಂಡಿರುವ ಅಲ್ಲಿನ ಪ್ರಜೆಗಳು ಬದುಕಿಗಾಗಿ ಅಂಗಲಾಚುತ್ತ ಸಾವಿನ ಸನಿಹದಲ್ಲಿ ಕೈ ಕಟ್ಟಿ ಕುಳಿತಿದ್ದಾರೆ.
ಇದಿಷ್ಟು ಸಧ್ಯ ಅಪ್ಘಾನಿಸ್ತಾನದಲ್ಲಿರುವ ಸ್ಥಿತಿ. ಇವಾಗ ನಾವು ಅಪ್ಘಾನಿಸ್ತಾನದಿಂದ ಭಾರತಕ್ಕೆ ಬರೋಣಾ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಭಾರತಕ್ಕೆ ಅಪ್ಘಾನಿಸ್ತಾನದ ಈ ಸ್ಥಿತಿ ಮುಂದೆ ಭಾರತವು ಎದುರಿಸಿಬೇಕಾದ ಅನೇಕ ಸವಾಲುಗಳ ಕುರಿತು ಮುನ್ಸೂಚನೆ ನೀಡುತ್ತಿದೆ. ಮೊದಲೇ ಭಾರತವನ್ನು ಶತ್ರುವಾಗಿ ಕಾಣುವ ಪಾಪಿಸ್ತಾನ, ಜಗತ್ತಿಗೆ ವೈರಸ್ ಹಬ್ಬಿಸಿ ಮೋಜು ನೋಡುತ್ತಿರುವ ಚೀನಾ, ಜೈಶ್ ಏ ಮೊಹ್ಮದ್, ಲಷ್ಕರ್ ಏ ತೊಯ್ಬಾದಂತ ಉಗ್ರ ಸಂಘಟನೆಗಳು ತಾಲಿಬಾನ ಆಡಳಿತಕ್ಕೆ ಬೆಂಬಲ ಸೂಚಿಸಿರುವುದು ಭಾರತದ ಆತಂಕಕ್ಕೆ ಕಾರಣವಾಗಿದೆ. ಹೆಜ್ಜೆ ಹೆಜ್ಜೆಗೂ ಭಾರತಕ್ಕೆ ಮಗ್ಗಲು ಮುಳ್ಳಾಗಿ ಕಾಡುವ, ಪ್ರತಿ ನಡೆಯಲ್ಲೂ ಅಡ್ಡಗಾಲು ಹಾಕುವುದಕ್ಕೆ ಕಾಯುವ ಈ ಎರಡೂ ರಾಷ್ಟ್ರಗಳೂ ಈಗ ಉಗ್ರಗಾಮಿ ಸಂಘಟನೆಗಳು ಸ್ಥಾಪಿಸಲು ಹೊರಟ ಶರಿಯಾ ಸಕರ್ಾರಕ್ಕೆ ಬೆಂಬಲ ಸೂಚಿಸುತ್ತಿರುವುದರ ಹಿಂದಿರುವ ಉದ್ದೇಶವನ್ನು ಯಾರು ಬೇಕಾದರೂ ಊಹಿಸಬಹುದಾಗಿದೆ. ಇದು ಒಂದೆಡೆ ಆದರೆ ಇದಕ್ಕೂ ಮೀರಿದ ಆತಂಕ ಭಾರತಕ್ಕಿದೆ. ಕಾರಣ ಈ ದೇಶದಲ್ಲಿನ ಅನ್ನವನ್ನುಂಡು ಅನ್ಯ ದೇಶದ ಭಯೋತ್ಪಾದಕರ ಪರವಾಗಿ ಬೊಗಳುವ ಕುನ್ನಿಗಳಿಂದ ಭಾರತಕ್ಕೆ ಯಾವ ಮಟ್ಟದ ಆತಂಕವಾಗಬುದು ಎನ್ನುವುದೇ ಇಂದು ನಮ್ಮೆದುರು ಇರುವ ಪ್ರಶ್ನೆ. ತಾಲಿಬಾನ್ ಸಂಘಟನೆ ಅಪ್ಘಾನ್ ಆಕ್ರಮಿಸಿಕೊಂಡ ನಡೆಯನ್ನು ಜಗತ್ತಿನ ಹಲವು ರಾಷ್ಟ್ರಗಳು ಖಂಡಿಸುತ್ತಿವೆ. ಬೇರೆ ರಾಷ್ಟ್ರಗಳೇನು ಸ್ವತಃ ಅಪ್ಘಾನ್ ಪ್ರಜೆಗಳೇ ವಿರೋಧಿಸುತ್ತಿದ್ದಾರೆ. ಹೆಜ್ಜೆ ಹೆಜ್ಜೆಗೂ ಪ್ರತಿಭಟಿಸುತ್ತಿದ್ದಾರೆ. ತಾಲಿಬಾನ ಧ್ವಜವನ್ನು ಕಿತ್ತೆಸೆದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೀಗಿದ್ದರೂ ಕೂಡ ಭಾರತದ ಕೆಲವು ಜನರು ತಾಲಿಬಾನ ನಡೆಯನ್ನು ಸ್ವಾಗತಿಸುತ್ತಿರುವುದು ನಿಜಕ್ಕೂ ಈ ದೇಶದ ದುರಂತ. ಈ ದೇಶದಲ್ಲಿದ್ದುಕೊಂಡು ಈ ದೇಶದ ಆಡಳಿತದ ಒಂದು ಭಾಗವಾಗಿ, ಜನರಿಂದ ಮತ ಪಡೆದು ಸಂಸದರಾದ ಶಫೀಕ ಉರ್ ರೆಹಮಾನ್ ಬಾರ್ಕ ಎಂಬ ಎಡಬಿಡಂಗಿಯು ತಾಲಿಬಾನ್ ಆಡಳಿತವನ್ನು ಈ ದೇಶದಲ್ಲಿ ಜರುಗಿದ ಸ್ವಾತಂತ್ರ್ಯ ಹೋರಾಟಕ್ಕೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಕೆ ಮಾಡುತ್ತಾರೆನ್ನುವುದನ್ನು ಕೇಳಿಯೇ ದೇಶ ದಿಗ್ಭ್ರಾಂತವಾಗಿದೆ. ಗಾಂಧಿ, ಭೋಸ್ ರ ರೀತಿಯಲ್ಲಿ ತಾಲಿಬಾನಿಗಳು ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಅವರನ್ನು ವಿರೋಧಿಸುವುದು ತಪ್ಪು ಎನ್ನುವ ಮಾತನ್ನು ಹೇಳುವ ಈತನ ಮಾನಸಿಕ ಸ್ಥಿತಿ ಇವರ ನಿಲುವೇನು ಎನ್ನುವುದನ್ನು ಸ್ಪಷ್ಟ ಪಡಿಸುತ್ತದೆ. ಇವರ ದೃಷ್ಠಿಯಲ್ಲಿ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸ್ವಾರ್ಥಕ್ಕಾಗಿ ಮಹಿಳೆಯರನ್ನು ಮಕ್ಕಳನ್ನು ಕೊಲ್ಲುವ ತಾಲಿಬಾನಿಗಳು ಒಂದೇ ಎನ್ನುವುದಾದರೆ ಇವರನ್ನು ಈ ದೇಶದಲ್ಲಿಟ್ಟುಕೊಂಡು ಮಾಡುವುದಾದರೂ ಏನಿದೆ? ಅವರ ಅಕ್ಕರೆಯ ತಾಲಿಬಾನಿಗೆ ಕಳಿಸುವುದು ಉತ್ತಮವಲ್ಲವೆ. ಇನ್ನು ನಮ್ಮ ರಾಜ್ಯದ ಕೆಲವು ಜನ ಮಿಡಿಯಾದಲ್ಲಿ ಲಜ್ಜೆಗೆಟ್ಟು ಮಾತನಡಿ ಬಾಕರ್್ನನ್ನು ಬೆಂಬಲಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಾಲಿಬಾನ್ ಜಿಂದಾಬಾದ್ ಎಂದು ಬರೆದುಕೊಳ್ಳುತ್ತಾರೆ. ಇದನ್ನು ಕೇಳಿದ ಪ್ರಜೆಗಳು ಈ ರೀತಿಯ ಸಮರ್ಥನೆ ಮುಂದಾಗಿರುವ ಇವರು ಮುಂದೇನು ಮಾಡಬೇಕೆಂದಿದ್ದಾರೆ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಉತ್ತರ ಹುಡುಕವುದಕ್ಕೆ ಯತ್ನಿಸುತ್ತಿದ್ದಾರೆ. ಇವರಂತವರೆಲ್ಲ ಕೇವಲ ಧರ್ಮವನ್ನು ಲೆಕ್ಕಕ್ಕೆ ತೆಗೆದುಕೊಂಡು, ಶರಿಯತ್ ಕಾನೂನನ್ನು ಒಪ್ಪಿಕೊಂಡು, ತಾಲಿಬಾನಿ ಆಡಳಿತವನ್ನು ಸಮರ್ಥನೆ ಮಾಡಿಕೊಳ್ಳುವ ಮುನ್ನ ಜಾತ್ಯಾತೀತ ರಾಷ್ಟ್ರ ಹಾಗೂ ಸಮಾನವಾದ ಸಂವಿಧಾನವನ್ನು ಹೊಂದಿರುವ ಭಾರತದಲ್ಲಿ ನಾನಿದ್ದೇನೆ ಎನ್ನುವುದನ್ನು ನೆನೆಪು ಮಾಡಿಕೊಳ್ಳಬೇಕು. ಇಸ್ಲಾಂ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಬೆಲೆಯಿಲ್ಲ. ಆದರೆ ನಮ್ಮ ಭಾರತದಲ್ಲಿ ಹಾಗಲ್ಲ, ಒಬ್ಬ ಇಸ್ಲಾಂ ವ್ಯಕ್ತಿಯನ್ನು ಈ ದೇಶದ ಪ್ರಥಮ ಪ್ರಜೆಯನ್ನಾಗಿ ಮಾಡುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಅವಕಾಶ ಕಲ್ಪಿಸುತ್ತದೆ. ಇದನ್ನು ಧರ್ಮ ಜಾತಿ ಎಂದು ಶಂಖ ಹೊಡೆಯುತ್ತ ಕುಳಿತುಕೊಳ್ಳುವ ಮುನ್ನ ಅರ್ಥ ಮಾಡಿಕೊಳ್ಳಬೇಕು. ಎಲುಬಿಲ್ಲದ ನಾಲಿಗೆಯನ್ನು ಎಲ್ಲಿಬೇಕೆಂದಲ್ಲಿ ಹರಿ ಬಿಡುವ ಇವರ ಮಾತುಗಳನ್ನು ಕೇಳುತ್ತಿದ್ದರೆ ಅಮೇರಿಕಾ ಹುಟ್ಟಿಸಿದ ತಾಲಿಬಾನ ಎನ್ನುವ ಪಾಪದ ಪಿಂಡಕ್ಕಿಂತ ನಮ್ಮ ದೇಶದಲ್ಲಿರುವ ಈ ಮಾನಸಿಕ ಶನಿ ಸಂತಾನವೇ ನಮ್ಮಲ್ಲಿ ಆತಂಕ ಹೆಚ್ಚಿಸುತ್ತದೆ. ಅಷ್ಟಕ್ಕೂ ಇವರಿಗೆ ಏನಾಗಿದೆ? ವೇದಿಕೆ ಮೇಲೆ ನಿಂತೂ ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರೆ, ವಿಶ್ವ ವಿದ್ಯಾಲಯದಲ್ಲಿ ನಿಂತೂ 'ಭಾರತ ತೆರೆ ತುಕ್ಡೆ ಹೊಂಗೆ' ಎನ್ನುತ್ತಾರೆ, ಕಾಶ್ಮೀರದ ಸ್ವಾತಂತ್ರ್ಯಕ್ಕೆ ದೇಶ ಬಲಿಯಾಗಲಿ ಎನ್ನುತ್ತಾರೆ. ಈಗ ನೋಡಿದರೆ ತಾಲಿಬಾನ್ ಆಡಳಿತವನ್ನು ಸಮಥರ್ಿಸುತ್ತಾರೆ. ಪ್ರಶ್ನೆ ಮಾಡಿದವರನ್ನೇ ತಾಲಿಬಾನ್ ಮನಸ್ಸಿನವರು ಎಂದು ಆರೋಪಿಸುತ್ತಾರೆ. ಕೇವಲ ಧರ್ಮವನ್ನೇ ಆಯುಧವನ್ನಾಗಿ ಬಳಿಸಿಕೊಂಡು ತಪ್ಪು ಮಾಡಿದವರನ್ನು ಕೂಡ ಸಮಥರ್ಿಸುತ್ತೇವೆ ಎಂದರೆ ಅದು ಯಾವ ನ್ಯಾಯ? ಖುರಾನ್ ಕೂಡ ಅನ್ಯಾಯ ಮಾಡು ಎಂದು ಯಾರಿಗೂ ಹೇಳಿಲ್ಲ. ತಪ್ಪು ಮಾಡಿದವರ ಪರ ನಿಲ್ಲುವುದಕ್ಕೆ ಪ್ರೋತ್ಸಾಹಿಸುವುದಿಲ್ಲ. ಆದರೂ ಖುರಾನ್ ಓದಿದ ಮೇಲೂ ಇವರು ನಡೆದುಕೊಳ್ಳುವ ರೀತಿ ನನಗೆ ಅರ್ಥವಾಗುತ್ತಿಲ್ಲ. ಬೇರೆ ದೇಶದಲ್ಲಿ ಇಸ್ಲಾಂಮಿಯರನ್ನು ಸಮಥರ್ಿಸುವ ಮುನ್ನ ದೇಶದಲ್ಲಿ ಇಸ್ಲಾಂಮಿಯರಿಗೆ ನೀಡಿರುವ ಹಕ್ಕುಗಳನ್ನು ಮತ್ತು ಅವಕಾಶಗಳ ಕುರಿತು ಅವಲೋಕನ ಮಾಡಿ ನೋಡಿದರೆ ಬೇರೆ ದೇಶದಲ್ಲಿನ ಇಸ್ಲಾಂಮಿಯರಿಗಿಂತ ನಮ್ಮ ದೇಶದಲ್ಲಿ ಇಸ್ಲಾಂಮಿಯರು ಎಷ್ಟು ಅದೃಷ್ಟವಂತರೂ ಎಂದು ಅರ್ಥವಾಗುತ್ತದೆ. ಈ ದೇಶದ ಕುರಿತು ಅನ್ಯ ಬಗೆಯುವ ಮುನ್ನ ಈ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ನೀಡಿದ ಅಷ್ಪಕುಲ್ಲಾಖಾನ್ರನ್ನು, ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಅಬ್ದುಲ್ ಕಲಾಂರನ್ನು, ಶಹನಾಯ್ ಬ್ರಹ್ಮನಾಗಿ ಗುರುತಿಸಿಕೊಂಡ ಬಿಸ್ಮಿಲ್ಲಾ ಖಾನ್ರನ್ನು, ಗಾಯನದ ಮೂಲಕ ನಮ್ಮನ್ನು ಕಾಡುವ ಮಹ್ಮದ್ ರಫಿ, ಮಹ್ಮದ್ ಅಜೀಜ್ರನ್ನು, ತಬಲಾ ಮೂಲಕ ನಮ್ಮನ್ನು ಕೆಣಕುವ ಝಾಕೀರ ಹುಸೇನ್ರನ್ನು ನೆನಪು ಮಾಡಿಕೊಳ್ಳಿ. ಇವರನ್ನೆಲ್ಲ ನಾವು ಗುರುತಿಸುವುದು ಯಾವುದರಿಂದ? ಇಲ್ಲಿ ಧರ್ಮ ಎನ್ನುವುದು ನೆಪ ಮಾತ್ರ. ಬದಲಿಗೆ ಅವರನ್ನು ಗುರುತಿಸುವುದು ದೇಶದಿಂದ ಹಾಗೂ ರಾಷ್ಟ್ರೀಯತೆಯಿಂದ. ಈ ಕಾರಣದಿಂದಾಗಿಯೆ ಈ ದೇಶಕ್ಕೆ ಕೊಡುಗೆ ನೀಡದವರನ್ನು ನಾವು ಈ ದೇಶದ ಆಸ್ತಿ ಎಂದು ಪರಿಗಣಿಸುತ್ತೇವೆ. ಅದನ್ನರಿಯದೆ ಎಂಜಲಿಗೆ ನಾಲಿಗೆ ಹರಿ ಬಿಡುವ ಮುನ್ನ ಈ ದೇಶದ ಕುರಿತು ಚಿಂತನೆ ಮಾಡಬೇಕಿದೆ. ಇದು ಈ ಕೆಟ್ಟ ಮನಸ್ಥಿತಿಯುಳ್ಳವರಿಗೆ ಅರ್ಥವಾಗುವುದಿಲ್ಲ ಬಿಡಿ. ಮಾಧ್ಯಮದಲ್ಲಿ ಬಂದು ಮಾತನಾಡುವ ಮುನ್ನ ಈ ದೇಶದ ಜನ ಇವರನ್ನು ನೋಡುತ್ತಿದೆ. ತಪ್ಪಿ ಮಾತಾನಾಡಿದರೆ ಕೆರಸೇವೆ ಮಾಡುತ್ತಾರೆ ಎನ್ನುವ ಪ್ರಜ್ಞೆ ಇವರಲ್ಲಿ ಇರಬೇಕು. ಅಂಕೆ ಮೀರಿ ಮಾತನಾಡಿದರೆ ತಕ್ಕ ಶಾಸ್ತಿಯು ಆಗಬೇಕು. ಆದರೆ ಎಲ್ಲವನ್ನು ಸಹಿಸಿಕೊಳ್ಳಲಾಗುತ್ತಿದೆ ಎನ್ನುವ ಕಾರಣಕ್ಕೆ ಈ ದೇಶದಲ್ಲಿ ನಡೆಯಬಾರದ್ದೆಲ್ಲ ನಡೆಯುತ್ತಿದೆ. ಇಂಥವರ ಶನಿ ಸಂತಾನಗಳು ಇನ್ನು ಹುಟ್ಟಿಕೊಳ್ಳುತ್ತಲೇ ಇವೆ.
'ನಾ ಹಿಂದೂ ಬನೆಗಾ ನಾ ಮುಸಲಮಾನ ಬನೆಗಾ ಇನ್ಸಾನ ಕೆ ಔಲಾದ ಹೈ ತು ಇನ್ಸಾನ ಬನೆಗಾ' ಎಂದು ಹೇಳಿಕೊಡುವ ಜಾಗದಲ್ಲಿ ಜಿಹಾದ ಹೇಳಿಕೊಟ್ಟರೆ ಬೆಳೆಯುವ ಮಕ್ಕಳೆಲ್ಲ ಜಿಹಾದಿಗಳಾಗಲೂ ಪ್ರಾರಂಭಿಸುತ್ತಾರೆ. ಜೈಸಾ ಸಂಗ್ ವೈಸಾ ರಂಗ್ ಎನ್ನುವುದು ಯಾವತ್ತಿಗೂ ಬದಲಾಗದ ಮಾತು. ಇದೆಲ್ಲ ಗೊತ್ತಿದ್ದರೂ ಕೂಡ ನಮ್ಮ ದೇಶದಲ್ಲಿ ನೆಮ್ಮದಿಯಾಗಿ ಬದುಕುವುದನ್ನು ಬಿಟ್ಟು ಅನ್ಯ ದೇಶದಲ್ಲಿ ನಡೆಯುವ ಹಿಂಸೆಗೆ ಸಲಾಂ ಹೊಡೆದರೆ ನಮ್ಮ ದೇಶದ ಭಾವೈಕ್ಯತೆಗೆ ಆಗುವ ಗಾಯಕ್ಕೆ ಮುಲಾಮ್ ಹಚ್ಚುವವರು ಯಾರು? ಯಾರೊಪ್ಪಲಿ ಬಿಡಲಿ ಒಂದು ಮಾತಂತೂ ಸ್ಪಷ್ಟ. ಜಗತ್ತಿನ ಯಾವುದೇ ಇಸ್ಲಾಂ ರಾಷ್ಟ್ರವನ್ನು ತೆಗೆದುಕೊಂಡರು ನಮ್ಮ ದೇಶದಲ್ಲಿ ಇರುವಷ್ಟು ನಿರ್ಭಯ ಹಾಗೂ ನಿಭರ್ಿಡೆಯಿಂದ ಜೀವನ ಸಾಗಿಸುವ ಅವಕಾಶ ಯಾವೊಬ್ಬ ಇಸ್ಲಾಂಮಿಯ ವ್ಯಕ್ತಿಗೂ ಸಾಧ್ಯವಿಲ್ಲ. ಈ ದೇಶದಲ್ಲಿ ಎಲ್ಲರಿಗೂ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯ ಮಾಡಲು ಅವಕಾಶ ನೀಡಲಾಗಿದೆ. ಪುರುಷರಿಗೆ ನೀಡಿದಷ್ಟೇ ಸಮಾನವಾದ ಅವಕಾಶಗಳನ್ನು ಮಹಿಳೆಯರಿಗೂ ನೀಡಲಾಗುತ್ತಿದೆ. ಎಲ್ಲ ಧರ್ಮದವರಿಗೂ ಒಂದೇ ಸಂವಿಧಾನ ನೀಡುವುದರ ಜೊತೆಗೆ ಅಲ್ಪ ಸಂಖ್ಯಾತರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಒಂದೇ ತ್ರಿವರ್ಣ ಧ್ವಜದಡಿಯಲ್ಲಿ ಬದುಕು ಕಟ್ಟಿಕೊಂಡಿರುವ ನಮ್ಮಗಳ ಮಧ್ಯದಲ್ಲಿದ್ದುಕೊಂಡು ದೌರ್ಜನ್ಯ ಮಾಡುವ ದೇಶದ ಆಡಳಿತಕ್ಕೆ ಬೆಂಬಲ ಸೂಚಿಸುವುದು ಮತ್ತು ಅಲ್ಲಿರುವ ಕ್ರೂರ ಆಡಳಿತವನ್ನು ಹಾಡಿ ಹೊಗಳುವುದೆಂದರೆ ಬಾಯಿಂದ ಭೇದಿ ಮಾಡಿಕೊಂಡಿದ್ದಕ್ಕಿಂತ ಕಡೆಯಾಗಿ ಕಾಣುತ್ತದೆ. ಅಮೇರಿಕಾವನ್ನು ಮಣಿಸುವುದಕ್ಕೆ ರಷ್ಯಾ ತಾಲಿಬಾನ್ ಆಡಳಿತವನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ. ವಿಶ್ವದ ಹಿರಿಯಣ್ಣನಾಗಿ ಮೆರೆಯುವುದಕ್ಕೆ ಚೀನಾ ಸಂಚು ರೂಪಿಸುತ್ತಿದೆ. ಭಾರತಕ್ಕೆ ಚುರುಕು ಮುಟ್ಟಿಸಲು ಪಾಕಿಸ್ತಾನ ತಾಲಿಬಾನ್ ಜೊತೆ ಕೈ ಮಿಲಾಯಿಸುತ್ತಿದೆ. ತಾ ಮಾಡಿದ ತಪ್ಪಿನಿಂದಾಗಿ ಅಮೇರಿಕಾ ಪರಿತಪಿಸುತ್ತಿದೆ. ಆದರೆ ಯಾವುದೇ ಸಂಬಂಧವಿಲ್ಲದ ಭಾರತದ ಕೆಲವು ಹೇಯ ಮನಸ್ಸುಗಳು ತಾಲಿಬಾನ್ನ ಕ್ರೂರತನವನ್ನು ಸಮಥರ್ಿಸುತ್ತಿವೆ. ಇದನ್ನು ಕಂಡರೆ ಭಾರತದಲ್ಲಿಯೂ ತಾಲಿಬಾನಿ ಶನಿ ಸಂತಾನಗಳು ಬೀಡು ಬಿಟ್ಟಿವೆಯೇನೊ ಎನ್ನುವ ಅನುಮಾನಗಳು ಹುಟ್ಟುತ್ತಿವೆ. ಆ ಆಡಳಿತ ಹಾಗೂ ಅವರ ಕಾನೂನುಗಳ ಬಗ್ಗೆ ಅಷ್ಟು ಪ್ರೀತಿ ಇದ್ದರೆ ಅದೇ ದೇಶಕ್ಕೆ ಹೋಗಿ ನೆಲೆಸುವುದು ಉತ್ತಮ. ಅದನ್ನು ಬಿಟ್ಟು ತಮ್ಮ ಹೊಲಸು ನಡೆಯಿಂದ ನೆಮ್ಮದಿಯಾಗಿರುವ ಜನಗಳ ಮನದಲ್ಲಿ ಅನುಮಾನದ ಬೀಜವನ್ನು ಬಿತ್ತುವುದರ ಜೊತೆಗೆ ಹೊಂದಿಕೊಂಡು ಬಾಳುತ್ತಿರುವ ನಮಗಳ ಮಧ್ಯದಲ್ಲಿ ಬೆಂಕಿ ಹಾಕುವ ಕಾರ್ಯ ಮಾಡುವುದು ಒಳ್ಳೆಯದಲ್ಲ. ಇವರನ್ನು ಕಂಡಾಗ ಹೇಗೆ ಕುರುವಂಶದ ಮೋಸಕ್ಕೆ ಗಾಂಧಾರ ರಾಜನ ಮಕ್ಕಳು ಬಲಿಯಾದರೋ ಹಾಗೆ ಗಾಂಧಾರದ ತಾಲಿಬಾಲಿನಿಗಳ ಮೇಲಿನ ಪ್ರೀತಿಗೆ ಇವರು ಬಲಿಯಾಗುತ್ತಾರೇನೋ ಎನಿಸುತ್ತಿದೆ. ಕೊನೆಗೆ ನಮಗುಳಿದಿರುವುದು "ಕಾಲಾಯಾ ತಸ್ಮೈ ನಮಃ" ಅಂದರೆ ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ. ಅಲ್ಲಿಯವರೆಗೂ ಕಾದು ನೋಡೋಣ.