ದೇಹಕ್ಕೆ ಸಾವು ಬಂದರೂ ಆತ್ಮಕ್ಕೆ ಎಂದೂ ಸಾವಿಲ್ಲ.
Even if the body dies, the soul never dies: Dr. S. R. Ramanagara
ಲೋಕದರ್ಶನ ವರದಿ
ದೇಹಕ್ಕೆ ಸಾವು ಬಂದರೂ ಆತ್ಮಕ್ಕೆ ಎಂದೂ ಸಾವಿ®è : ಡಾ. ಎಸ್. ಆರ್. ರಾಮನಗೌಡ್ರ
ಧಾರವಾಡ: ದೇಹಕ್ಕೆ ಸಾವು ಬಂದರೂ ಆತ್ಮಕ್ಕೆ ಎಂದೂ ಸಾವಿಲ್ಲ. ಆತ್ಮವು ಅಗೋಚರ ಅದು ನಮಗೆ ಜೀವನ ಶಕ್ತಿ ನೀಡುವುದಾಗಿದೆ ಎಂದು ಡಾ. ಎಸ್. ಆರ್. ರಾಮನಗೌಡ್ರ ಹೇಳಿದರು. ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರೊ. ಬಸಯ್ಯ ಶಿವಯ್ಯ ಶಿರೋಳ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ‘ಆತ್ಮದ ಅರಿವು' ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
ಆತ್ಮವು ಪರಮಾತ್ಮನ ಸ್ವರೂಪವಾಗಿದೆ. ಶರೀರದ ಸರ್ವಕ್ರಿಯೇಗೆ ಪ್ರೇರಣೆಯೇ ಆತ್ಮ. ಆತ್ಮವು ಅತ್ಯಂತ ಸೂಕ್ಷ್ಮಾತೀಸೂಕ್ಮವಾದುದು. ಆತ್ಮದ ಸ್ವರೂಪದಲ್ಲಿರುವ ಪರಮಾತ್ಮನು ಸರ್ವಶಕ್ತನು, ಸರ್ವಜ್ಞನು, ಸರ್ವವ್ಯಾಪಿಯೂ ಹಾಗೂ ಕಲ್ಪನಾತೀತನೂ, ನಿರಾಕಾರ ಉಳ್ಳವನೂ ಆಗಿದ್ದಾನೆ. ಪ್ರತಿಯೊಬ್ಬರೂ ಅರಿವಿನೊಂದಿಗೆ ಆತ್ಮಸಾಕ್ಷಾತ್ಕಾರ ಮಾಡಿಕೊಂಡಾಗ ಮೋಕ್ಷ ಪ್ರಾಪ್ತಿಯಾಗುತ್ತದೆ. ಮುಕ್ತಿ ಮಾರ್ಗದತ್ತ ಕರೆದುಕೊಂಡು ಹೋಗುವವನೇ ಗುರು. ಭಗವದ್ಗೀತೆ, ಉಪನಿಷತ್ತುಗಳಲ್ಲಿ ಆತ್ಮದ ಅರಿವು ಕುರಿತು ವಿವರಿಸಲಾಗಿದೆ ಎಂದು ಹತ್ತು ಉಪನಿಷತ್ತುಗಳ ಸಾರವನ್ನು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ಗ್ರಾಮೀಣ ಮಾಜಿ ಶಾಸಕರಾದ ಎ.ಬಿ. ದೇಸಾಯಿ ಮಾತನಾಡಿ, ಮನುಷ್ಯನ ಆಸೆಗೆ ಕೊನೆಯಿಲ್ಲ. ಆಧ್ಯಾತ್ಮ ಯೋಗದಿಂದ ಜೀವನ ದಿವ್ಯತೆ ಪಡೆಯುತ್ತದೆ. ಅರವಿಂದರು ಆತ್ಮದ ಕುರಿತಾಗಿ ಅಪಾರ ಜ್ಞಾನ ಹೊಂದಿ, ಅಜ್ಞಾನದಿಂದ ಸುಜ್ಞಾನದ ಕಡೆಗೆ ನಮ್ಮನ್ನು ಕರೆದುಕೊಂಡು ಹೋಗಿದ್ದನ್ನು ಸ್ಮರಿಸಿ, ಆತ್ಮದ ಅರಿವು ಕುರಿತು ಡಾ. ಎಸ್.ಆರ್. ರಾಮನಗೌಡರ ತಮ್ಮ ಮಾತಿನ ಮೂಲಕ ಉಪನ್ಯಾಸದಲ್ಲಿ ಸತ್ಯದ ಬೆಳಕನ್ನು ಮೂಡಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಬಿ. ವ್ಹಿ. ಶಿರೂರ, ಡಾ. ಬಿ.ಎಫ್. ಚೇಗರಡ್ಡಿ ಹಾಗೂ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಎ.ಬಿ. ಹಿರೇಮಠ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ, ಸನ್ಮಾನಿತರ ಪರವಾಗಿ ಪ್ರೊ. ಬಿ. ವ್ಹಿ. ಶಿರೂರ ಮಾತನಾಡಿ, ಪ್ರೊ. ಬಿ.ಎಸ್. ಶಿರೋಳ ಅವರು ಸ್ನೇಹಜೀವಿ. ವಿದ್ಯಾರ್ಥಿ ಸಮೂಹದೊಂದಿಗೆ ಅನೋನ್ಯತೆ ಹಾಗೂ ಕುಟುಂಬ ವತ್ಸಲರು ಎಂದ ಅವರು ನರೇಗಲ್ಲದ ಶ್ರೀ ಅನ್ನದಾನೇಶ್ವರರ ಕಾಲೇಜಿನಲ್ಲಿ ಸಲ್ಲಿಸಿದ ಸೇವೆ, ಒಡನಾಡವನ್ನು ಸ್ಮರಿಸಿ, ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಪ್ರೊ. ಬಿ.ಎಸ್. ಶಿರೋಳ ಉಪಸ್ಥಿತರಿದ್ದರು.
ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು. ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಡಾ. ಡಿ.ಎಂ. ಹಿರೇಮಠ, ಬಿ. ನಾಗರಾಜ (ಶಿರಸಿ), ಸಿ.ಎಸ್. ಪಾಟೀಲ, ಬಿ.ಎಲ್. ಶಿವಳ್ಳಿ, ಡಾ. ಬಸವರಾಜ ಡೋಣೂರ, ನಿಂಗಣ್ಣ ಕುಂಟಿ, ರಾಜೇಂದ್ರ ಸಾವಳಗಿ, ದ್ರಾಕ್ಷಾಯಿಣಿ ಹಿರೇಮಠ, ಡಾ. ಮಂಗಳಾ ಶಿರೋಳ, ಚನ್ನಬಸಪ್ಪ ಮರದ, ಶಂಕರ ಬೆಟಗೇರಿ ಸೇರಿದಂತೆ ಶಿರೋಳ ಪರಿವಾರದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 