ರಕ್ತದಾನಿಯನ್ನು ಯಾರು ನೋಡದಿದ್ದರೂ, ಭಗವಂತ ನೋಡುತ್ತಾನೆ : ಉಷಾದೇವಿ ಹಿರೇಮಠ

Even if no one sees a blood donor, God sees them: Ushadevi Hiremath

ಕೊಪ್ಪಳ 23:  ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ, ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯ ಕೊಪ್ಪಳ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಹಾಗೂ ನೀಮಾ ಸಂಸ್ಥೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಢಟಕಢ ಮತ್ತು ಯುವ ರೆಡ್ ಕ್ರಾಸ್ ಸಂಸ್ಥೆ  ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಮಹಾವಿದ್ಯಾಲಯ ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಚಾರ್ಯರಾದ ಉಷಾದೇವಿ ಹಿರೇಮಠ ಮಾತನಾಡಿ ರಕ್ತದಾನವನ್ನು ಯಾರು ನೋಡದಿದ್ದರೂ ಸಹ ಭಗವಂತ ನಿಮ್ಮನ್ನು ನೋಡುತ್ತಾನೆ ಮತ್ತು ನಿಮಗೆ ಒಳ್ಳೆಯದನ್ನು ಕೂಡ ಮಾಡುತ್ತಾನೆ, ಬೇರೊಬ್ಬರಿಗೆ ರಕ್ತದಾನ ಮಾಡುವುದರಿಂದ ನಮಗೆ ಒಳ್ಳೆಯದು ಆಗುತ್ತೆ. ರಕ್ತದಾನ ಮಾಡುವುದರಿಂದ ಅನೇಕರಿಗೆ ಉಪಯೋಗವಾಗುತ್ತದೆ ಎಂದರು. ಪ್ರಾಸ್ತಾವಿಕವಾಗಿ ಎಸ್‌ಎಂ ಬಸವರಾಜ್ ಉಪಪ್ರಾಚಾರ್ಯರು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಮಾತನಾಡಿ ದಾನ ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನ, ರಕ್ತದಾನದ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.   

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾಕ್ಟರ್ ಶಿವಕುಮಾರ್ ಪಾಟೀಲ್ ಮಾತನಾಡಿ ಎರಡು ಮೂರು ಶತಮಾನಗಳ ಕಾಲ ನಮ್ಮನ್ನು ಯುರೋಪಿಯನ್ನರು ಆಳ್ವಿಕೆ ಮಾಡಿದ್ದಾರೆ ಸ್ವತಂತ್ರಕ್ಕಾಗಿ ಅನೇಕರು ಪ್ರಾಣವನ್ನು ಬಿಟ್ಟಿದ್ದಾರೆ ಬ್ರಿಟಿಷರನ್ನು ದೇಶ ಬಿಟ್ಟು ಹೋಗಲಾಡಿಸಲು ತೀರ್ವಗಾಮಿಯಾಗಿ ರಕ್ತಚಞಢದಋಢಟ ಹೋರಾಟ ಮಾಡಿದ್ದಾರೆ, ಈಗಿನ ಯುವ ಜನತೆ ರಕ್ತದಾನ ಮಾಡಬೇಕಿರುವುದು ಅಗತ್ಯವಾಗಿದೆ ಸಂವಿಧಾನ ಒಂದು ಕಾರ್ಯಕ್ರಮದಲ್ಲಿ 1 ಲಕ್ಷ ಯೂನಿಟ್ ರಕ್ತವನ್ನು ನೀಡಿದ್ದೆವು, ಸಂವಿಧಾನ ಎರಡರಲ್ಲಿ 1 ಲಕ್ಷದ 50,000 ಯೂನಿಟ್ ಕಿಂತ ಹೆಚ್ಚು  

ರಕ್ತದಾನವನ್ನು ಮಾಡುವುದರ ಮೂಲಕ ಗಿನ್ನಿಸ್ ರೆಕಾರ್ಡ್‌ ದಾಖಲಿಸಬೇಕಿದೆ ನಮ್ಮೆಲ್ಲರ ಸಹಕಾರವು ಕೂಡ ಅತಿ ಅವಶ್ಯಕವಾಗಿದೆ, ರಕ್ತದಾನದಿಂದ ಅನೇಕ ರೀತಿಯ ಅನುಕೂಲಗಳು ಕೂಡ ನಮಗೆ ಆಗುತ್ತವೆ ಎಂದರು, ಕಾನೂನು ಮಹಾವಿದ್ಯಾಲಯದಿಂದ 18 ಜನಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಡಾಕ್ಟರ್ ಕಸ್ತೂರಿ ಡಾಕ್ಟರ್ ಸುಧಾಕರ್ ಡಾಕ್ಟರ್ ಲಿಂಗರಾಜ ಡಾಕ್ಟರ್ ಭಾಗ್ಯಶ್ರೀ ಮತ್ತು ದೇವೇಂದ್ರ​‍್ಪ ಹಿಟ್ನಾಳ, ಕಾಲೇಜಿನ ಉಪನ್ಯಾಸಕ ವರ್ಗದವರು ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಧಾ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು ಸ್ವಾಗತ ಕಾರ್ತಿಕ್ ಕೋರಿದನು, ವಂದನಾರೆ​‍್ಣಯನ್ನು ಪ್ರಗತಿ ನೆರವೇರಿಸಿದರು ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ಹುಲಿಗೆಮ್ಮ ನಡೆಸಿಕೊಟ್ಟರು.