ವಿಶ್ವ ದರ್ಜೆ ಚಿತ್ರ ನಗರಿ ಸ್ಥಾಪನೆ: ಡಿಸಿಎಂ ಅಶ್ವತ್ ನಾರಾಯಣ್

ಬೆಂಗಳೂರು, ಜನವರಿ 9 , ವಿಶ್ವಮಟ್ಟದ ಚಲನಚಿತ್ರ ನಗರಿ ಸ್ಥಾಪಿಸಲು ರಾಜ್ಯ ಸರ್ಕಾರ ಗಂಬೀರ ಚಿಂತನೆ ಮಾಡಿದೆ  ಎಂದು ಕರ್ನಾಟಕ ಉಪಮುಖ್ಯಮಂತ್ರಿ  ಡಾ.  ಸಿ.ಎನ್.ಅಶ್ವತ್ ನಾರಾಯಣ್  ಘೋಷಿಸಿದ್ದಾರೆ.ಈ ಸಂಬಂಧ   ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ ನಂತರ  ಸ್ಥಳ ನಿರ್ಧರಿಸಲಾಗುವುದು ಎಂದು ಹೇಳಿದರು.ಸುದ್ದಿಗಾರರ  ಜೊತೆ ಮಾತನಾಡಿದ ಅವರು , ಚಲನಚಿತ್ರ ನಗರಿ  ಸ್ಥಾಪಿಸಲು ಬೆಂಗಳೂರು ಸೂಕ್ತ ನಗರವಾಗಿದೆ. ಪ್ರಸ್ತಾವಿತ ಚಲನಚಿತ್ರ ನಗರವು ದೇಶ ಮತ್ತು ವಿಶ್ವದ ಇತರ ದೇಶಗಳಿಗಿಂತ ಭಿನ್ನವಾಗಿರುತ್ತದೆ. ಪ್ರವಾಸೋದ್ಯಮ  ಉತ್ತೇಜಿಸಲು ಚಲನಚಿತ್ರ ನಗರಿ ಸೂಕ್ತ  ವಾತಾವರಣವನ್ನು ಒದಗಿಸಲಿದೆ   ಎಂದು ಅವರು ಹೇಳಿದರು.

ರೋರಿಚ್ ಮತ್ತು ತಾತಗುಣಿ ರೋರಿಚ್ ಎಸ್ಟೇಟ್ನಲ್ಲಿ ರೋರಿಚ್ ಆರ್ಟ್ ಕ್ರಾಫ್ಟ್ ಗ್ರಾಮವನ್ನು ಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ.ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ 80 ಅಡಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ನಿರ್ಮಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ . ಕಳೆದ ಸೆಪ್ಟೆಂಬರ್‌ನಲ್ಲಿ ಯಡಿಯೂರಪ್ಪ ಅವರು 100 ಅಡಿಗಳಷ್ಟು ಪ್ರತಿಮೆಯನ್ನು  100 ಕೋಟಿ ರೂವೆಚ್ಚದಲ್ಲಿ ಸ್ಥಾಪಿಸುವುದಾಗಿ  ಹೇಳಿದ್ದರು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಸಭೆ ನಡೆಸಿ ವಿಮಾನ ನಿಲ್ದಾಣದ ಸಮೀಪ 23 ಎಕರೆ ಪ್ರದೇಶದಲ್ಲಿ ಥೀಮ್ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು ಮತ್ತು ಥೀಮ್ ಪಾರ್ಕ್‌ನಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದರು.ಬೆಂಗಳೂರಿಗೆ  ಸಂಬಂಧಿಸಿರುವ 46 ಸ್ಥಳಗಳನ್ನು ಪುನಶ್ಚೇತನಗೊಳಿಸಲೂ  ನಿರ್ಧರಿಸಲಾಗಿದೆ . ಅಂತಹ ಸ್ಥಳಗಳ  ಅಭಿವೃದ್ಧಿ ನಾಡಪ್ರಭು ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸಲು ಜನತೆಗೆ  ಸಹಾಯ ಮಾಡಲಿವೆ  ಎಂದು ಅವರು ಹೇಳಿದರು.