ಬಳ್ಳಾರಿ,ಏ.30: ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಮುಂಜಾಗೃತ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸ್ವಯಂ ಸೇವಕರಿಂದ ಪೌರರಕ್ಷಣಾ ಘಟಕವನ್ನು ಸ್ಥಾಪಿಸಲಾಗಿದ್ದು, ಈ ಸ್ವಯಂ ಸೇವಕರು ಕೊರೊನಾ ನಿಯಂತ್ರಣಕ್ಕೆ ಮತ್ತು ಜನರ ಹಸಿವನ್ನು ನೀಗಿಸಲು ವಿವಿಧ ಚಟುವಟಿಕೆಗಳನ್ನು ಕೈಗೊಂಡು ಜನರಿಗೆ ನೆರವಾಗುತ್ತಿದ್ದಾರೆ ಎಂದು ಪೌರ ರಕ್ಷಣಾ ಘಟಕದ ಮುಖ್ಯ ವಾರ್ಡನ್ ಎಂ.ಎ.ಷಕೀಬ್ ತಿಳಿಸಿದ್ದಾರೆ.
ಪೌರ ರಕ್ಷಕರು ಸಾರ್ವಜನಿಕರಿಗೆ ಮಾಸ್ಕ್ ವಿತರಣೆ, ಜನಸಂದಣಿ ಆಗದಂತೆ ತಡೆಯುವುದು, ತರಕಾರಿ ಮಾರುಕಟ್ಟೆ, ಪೆಟ್ರೋಲ್ ಬಂಕ್, ಅಂಚೆ ಕಚೇರಿ ಮತ್ತು ಬ್ಯಾಂಕ್ಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಲಾಗುತ್ತಿದೆ.
ಬಡವರಿಗೆ ಹಾಲು, ರೇಷನ್ ಕಿಟ್, ಊಟದ ಪ್ಯಾಕೇಟ್ ವಿತರಣೆ, ರಕ್ತದಾನ, ಆಸ್ಪತ್ರೆಯ ರೋಗಿಗಳಿಗೆ ಮತ್ತು ವಯೋ ವೃದ್ದರಿಗೆ ಸಹಾಯ ಮಾಡುವುದು, ಪ್ರಾಣಿ ಮತ್ತು ಪಶುಗಳಿಗೆ ಆಹಾರ ನೀಡುವುದು, ನಿರಾಶ್ರಿತರಿಗೆ ಬಟ್ಟೆ ವಿತರಣೆ ಮತ್ತು ಹಲವಾರು ಚಟುವಟಿಕೆಗಳನ್ನು ಸುಮಾರು ಹತ್ತು ದಿನಗಳಿಂದ ಜಿಲ್ಲೆಯ ಹೊಸಪೇಟೆ, ಸಂಡೂರು ಮತ್ತು ಕಮಲಾಪುರದಲ್ಲಿ ಪೌರ ರಕ್ಷಣಾ ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಪೌರ ರಕ್ಷಣಾ ದಳದಲ್ಲಿ ಸಾರ್ವಜನಿಕರು ಮತ್ತು ಕಾಲೇಜು ವಿದ್ಯಾಥರ್ಿಗಳು ಸದಸ್ಯರಾಗುವ ಮೂಲಕ ಸ್ವಯಂ ಸೇವಾಕರಾಗಿ ಸೇವೆ ಸಲ್ಲಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.