ಚೆನ್ನೈ, ಫೆ .8: ಯಾವುದೇ ಕಾರಣವಿಲ್ಲದೆ ಬ್ಯಾಂಕ್ ಗಳು ಸಾಲ ನಿರಾಕರಿಸಿದರೆ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್‌ಎಂಇ0)ಗಳು ತಮ್ಮ ದೂರುಗಳನ್ನು ಸಲ್ಲಿಸಲು ಶೀಘ್ರದಲ್ಲೇ ವಿಶೇಷ ಕೇಂದ್ರವನ್ನು ಘೋಷಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಶನಿವಾರ ಇಲ್ಲಿ ಆಯೋಜಿಸಲಾಗಿದ್ದ ವ್ಯಾಪಾರಿಗಳು ಮತ್ತು ಕೈಗಾರಿಕಾ ಪ್ರತಿನಿಧಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಬ್ಯಾಂಕುಗಳು ಯಾವುದೇ ಕಾರಣವಿಲ್ಲದೆ ಸಾಲ ನಿರಾಕರಿಸುತ್ತಿದ್ದರೆ ಎಂಎಸ್‌ಎಂಇಗಳು ಮೇಲ್ ಮೂಲಕ ವಿಶೇಷ ಕೇಂದ್ರಕ್ಕೆ ದೂರು ಸಲ್ಲಿಸಲು ಸ್ವಾಗತವಿದೆ. ವಿಶೇಷ ಕೇಂದ್ರವನ್ನು ಶೀಘ್ರವೇ ಘೋಷಿಸಲಾಗುವುದು ಎಂದು ಹೇಳಿದ್ದಾರೆ.
ದೂರಿನ ಮತ್ತೊಂದು ಅದೇ ಪ್ರತಿಯನ್ನು ಬ್ಯಾಂಕ್ ವ್ಯವಸ್ಥಾಪಕರಿಗೆ ಕಳುಹಿಸಬೇಕು. ಕ್ಷೇತ್ರ ಮಟ್ಟದಲ್ಲಿ ಎಂಎಸ್ಎಂಇ ಉದ್ಯಮಿಗಳನ್ನು ತಲುಪಲು ಬ್ಯಾಂಕ್ ಅಧಿಕಾರಿಗಳು, ಸಚಿವಾಲಯದ ಅಧಿಕಾರಿಗಳು ಮತ್ತು ಉದ್ಯಮಿಗಳು ಉದ್ಯಮಿಗಳ ನಡುವಿನ ಸಂವಾದ ಹೆಚ್ಚಿಸುವ ಉದ್ದೇಶವೂ ಸರ್ಕಾರಕ್ಕಿದೆ ಎಂದು ಅವರು ಹೇಳಿದರು.
‘ದೇಶದ ಆರ್ಥಿಕತೆಯ ಮೂಲಾಧಾರಗಳು ಸದೃಢವಾಗಿರುವುದರಿಂದ, ವಿದೇಶಿ ವಿನಿಮಯ ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆ ಗರಿಷ್ಠ ಮಟ್ಟದಲ್ಲಿದೆ. ಕರೋನಾ ವೈರಸ್ ಹಿನ್ನೆಲೆಯಲ್ಲಿ ದಾಖಲೆಗಳು ತಲುಪುವುದು ತಡವಾಗಿರುವುದರಿಂದ ಅನೇಕ ಬಂದರುಗಳಲ್ಲಿ ಸರಕುಗಳನ್ನು ಪಡೆಯಲು ಕಷ್ಟಪಡುತ್ತಿರುವ ಆಮದುದಾರರು ವಿವರಗಳೊಂದಿಗೆ ಹಣಕಾಸು ಸಚಿವಾಲಯವನ್ನು ಸಂಪರ್ಕಿಸಬಹುದು.’ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೊರೊನಾವೈರಸ್ ಕಾರಣದಿಂದಾಗಿ ದಾಖಲೆಗಳು ಬರದ ಕಾರಣ ವಿವಿಧ ಬಂದರುಗಳು, ಪರಿಹಾರಕ್ಕಾಗಿ ವಿವರಗಳೊಂದಿಗೆ ಹಣಕಾಸು ಸಚಿವಾಲಯವನ್ನು ಸಂಪರ್ಕಿಸಬಹುದು.
ಯಾರಕರ ಹಿತಾಸಕ್ತಿಯನ್ನು ರಕ್ಷಿಸಲು ಮೇಕ್ ಇನ್ ಇಂಡಿಯಾ ಉತ್ಪನ್ನಗಳಾದ ಮಿಕ್ಸಿ ಮತ್ತು ಗ್ರೈಂಡರ್ಸ್ ಮುಂತಾದ ಉತ್ಪನ್ನಗಳ ಮೇಲಿನ ಆಮದು ಸುಂಕ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಹಣಕಾಸು ಸಚಿವರು ನಂತರ ಅರ್ಥಶಾಸ್ತ್ರಜ್ಞರು, 2020ರ ಬಜೆಟ್ ಮೇಲಿನ ನೀತಿ ತಜ್ಞರು ಹಾಗೂ ಶಿಕ್ಷಣ ತಜ್ಞರೊಂದಿಗೆ ಸಂವಾದ ನಡೆಸಿದರು.